ಹತ್ತೇ ತಿಂಗಳಲ್ಲಿ ಭಾರತ – ಬಾಂಗ್ಲಾ ನೀರಿನ ಸಮಸ್ಯೆ ಬಗೆಹರಿಸಿದ್ದೆ ಆದರೆ; ಕಾವೇರಿ ವಿವಾದದ ಬಗ್ಗೆ ದೇವೇಗೌಡರು ಹೇಳಿದ್ದೇನು?

| Updated By: Ganapathi Sharma

Updated on: Sep 26, 2023 | 3:50 PM

HD Deve Gowda Statement on Cauvery Dispute: ಕಾವೇರಿ ವಿವಾದ ಪರಿಹರಿಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನ ಮಾಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹತ್ತೇ ತಿಂಗಳಲ್ಲಿ ಭಾರತ - ಬಾಂಗ್ಲಾ ನೀರಿನ ಸಮಸ್ಯೆ ಬಗೆಹರಿಸಿದ್ದೆ ಆದರೆ; ಕಾವೇರಿ ವಿವಾದದ ಬಗ್ಗೆ ದೇವೇಗೌಡರು ಹೇಳಿದ್ದೇನು?
ಹೆಚ್​ಡಿ ದೇವೇಗೌಡ
Follow us on

ಹಾಸನ, ಸೆಪ್ಟೆಂಬರ್ 26: ಕೆಆರ್​​ಎಸ್ ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುಗಡೆ ಮಾಡುತ್ತಿರುವ ವಿಚಾರವಾಗಿ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಅವರು ಪ್ರತಿಕ್ರಿಯಿಸಿ ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಮತ್ತು ಈಗಿನ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಗಂಗಾಧರನಾಥಶ್ರೀ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ-ಬಾಂಗ್ಲಾ ನಡುವಿನ 30 ವರ್ಷದ ನೀರಿನ ಸಮಸ್ಯೆ ಬಗೆಹರಿಸಿದ್ದೆ. ನನಗೆ ಅಧಿಕಾರ ಸಿಕ್ಕಿದ್ದು ಹತ್ತೇ ಹತ್ತು ತಿಂಗಳು ಎಂದರು.

ಹಿಂದಿನ ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿತ್ತು. ಈಗಿನ ಎನ್​ಡಿಎ ನೇತೃತ್ವದ ಸರ್ಕಾರ 2ನೇ ಬಾರಿ ಆಡಳಿತ ನಡೆಸುತ್ತಿದೆ. 10 ತಿಂಗಳಲ್ಲಿ ನಾನು 2 ದೇಶಗಳ 30 ವರ್ಷಗಳ ಇತಿಹಾಸವಿದ್ದ ಜಲ ವಿವಾದ ಬಗೆಹರಿಸಿದ್ದೆ ಎಂದು ಅವರು ಹೇಳಿದರು. ಈ ಮೂಲಕ ಪರೋಕ್ಷವಾಗಿ, ಕಾವೇರಿ ವಿವಾದ ಪರಿಹರಿಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನ ಮಾಡಬೇಕು ಎಂದು ಅವರು ಕೇಂದ್ರದ ಮಧ್ಯಪ್ರವೇಶದ ಬಗ್ಗೆ ಸೂಚ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಲಗಂಗಾಧರನಾಥ ಶ್ರೀಗಳನ್ನು ನೆನೆದು ಹೆಚ್​ಡಿಡಿ ಭಾವುಕರಾಗಿದ್ದು ಕಂಡುಬಂತು.

ಪ್ರಧಾನಿ ಮೋದಿ ಬಗ್ಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ನೀಡಿರುವ ಬಗ್ಗೆ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಕಾವೇರಿ ನದಿ ನೀರು ವಿವಾದ ಬಗೆಹರಿಸಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪದ ಸಂಕಷ್ಟ: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್​ಸಿ ಆದೇಶ

ಪ್ರಧಾನಮಂತ್ರಿ ಭೇಟಿಗೆ ರಾಜ್ಯ ಬಿಜೆಪಿ ನಾಯಕರು ಅವಕಾಶ ಕೇಳಲಿ. ಇವರೇನು ಮಾಡ್ತಿದ್ದಾರೆ, ಮೋದಿ ಬಳಿ ಹೋಗಿ ಮಾತಾಡಬಹುದಿತ್ತಲ್ವಾ? ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಸಭೆ ನಡೆಸಿ ಪ್ರಧಾನಮಂತ್ರಿ ಭೇಟಿಗೆ ಅಪಾಯಿಂಟ್​ಮೆಂಟ್ ಕೇಳಿದ್ದೇವೆ. ಆದರೆ ಬಿಜೆಪಿ ನಾಯಕರು ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಖರ್ಗೆ ಆರೋಪಿಸಿದರು.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ