ಮತಾಂತರ ಆರೋಪ; ಹಾಸನದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

| Updated By: sandhya thejappa

Updated on: Nov 29, 2021 | 9:40 AM

ಅಕ್ರಮವಾಗಿ ಪ್ರಾರ್ಥನಾ ಕೇಂದ್ರ ತೆರೆದು ಜನರನ್ನು ಪುಸಲಾಯಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಹಿಂದೂ ಪರ ಸಂಘಟನೆಗಳ ಮುಖಂಡರು ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಮತಾಂತರ ಆರೋಪ; ಹಾಸನದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
ಮಹಿಳೆಯರಿಂದ ಗಲಾಟೆ
Follow us on

ಹಾಸನ: ಹಿಂದೂ ಧರ್ಮದ ಜನರನ್ನು ಪುಸಲಾಯಿಸಿ ಮತಾಂತರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪ್ರಾರ್ಥನಾ ಕೇಂದ್ರದ ಎದುರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರಾರ್ಥನಾ ನಿರತರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ನಾವು ಪ್ರಾರ್ಥನೆಗೆ ಬಂದಿದ್ದೇವೆ. ಅದನ್ನು ಕೇಳೋಕೆ ನೀವ್ಯಾರು ಅಂತ ಮಹಿಳೆಯರು ಗಲಾಟೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿ ಈ ಘಟನೆ ನಡೆದಿದೆ.

ತಾಲೂಕಿನಲ್ಲಿ ಅಕ್ರಮವಾಗಿ ಪ್ರಾರ್ಥನಾ ಕೇಂದ್ರ ತೆರೆದು ಜನರನ್ನು ಪುಸಲಾಯಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಹಿಂದೂ ಪರ ಸಂಘಟನೆಗಳ ಮುಖಂಡರು ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಆಗ್ರಹ
ಮತಾಂತರ ಕಾಯ್ದೆ ಜಾರಿ ವಿಚಾರವಾಗಿ ಚರ್ಚಿಸಲು ನವೆಂಬರ್ 12ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಶ್ರೀಗಳ ನಿಯೋಗ ಮತ್ತು ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಸ್ವಾಮೀಜಿಗಳು ಹಾಗೂ ಪ್ರಮೋದ್ ಮುತಾಲಿಕ್ ಆಗ್ರಹ ವ್ಯಕ್ತಪಡಿಸಿದ್ದರು. ಕಾಯ್ದೆ ಜಾರಿಗೆ ತರುವಂತೆ ಸಿಎಂಗೆ ಮಾದಾರ ಚನ್ನಯ್ಯ, ಸೇವಾಲಾಲ್ ಸ್ವಾಮೀಜಿ, ಸಿದ್ದಲಿಂಗಶ್ರೀ ಹಾಗೂ ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳ ನಿಯೋಗ ಮನವಿ ಮಾಡಿದೆ. ಕಾಯ್ದೆ ಮಾಡದಿದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.

ಮತಾಂತರ ದೇಶಾದ್ಯಂತ ನಡೆಯುತ್ತಿದೆ. ಇದು ಬ್ರಿಟೀಷರಿಂದ ಪ್ರಾರಂಭವಾಗಿದೆ. ನಿಷೇಧ ಕಾಯ್ದೆ ಮಾಡ್ತಾರೆ ಅಂತ ಗೊತ್ತಾಗ್ತಿದ್ದಂತೆ ಪಾದ್ರಿಗಳು ಸಿಎಂ ಭೇಟಿಯಾಗಿದ್ದಾರೆ. ಇದು ಸರಿಯಲ್ಲ ಎಂದು ಸ್ವಾಮೀಜಿಗಳು ಹೇಳಿದ್ದಾರೆ.

ಇದನ್ನೂ ಓದಿ

ದೇವರ ಮಧ್ಯೆ ಪುನೀತ್​ ಫೋಟೋ ಇಟ್ಟು ಪೂಜೆ, ಸದ್ಯದಲ್ಲೇ ದೇವಸ್ಥಾನ ನವೀಕರಿಸಿ ನಿತ್ಯಪೂಜೆ; ಇದು ಅಪ್ಪು ಅಭಿಮಾನಿ ಅಭಿಲಾಷೆ

ಹುಬ್ಬಳ್ಳಿ: ಚರ್ಚ್​ನಲ್ಲಿ ಮತಾಂತರ ಆರೋಪ; ಆರೋಪಿಯನ್ನು ಬಂಧಿಸುವಂತೆ ಅರವಿಂದ್ ಬೆಲ್ಲದ್, ಹಿಂದೂ ಪರ ಸಂಘಟನೆ ಪ್ರತಿಭಟನೆ