ಮಹಿಳೆ ಹತ್ಯೆ ಪ್ರಕರಣ: ಅವಿವಾಹಿತ ಆರೋಪಿ ಅರೆಸ್ಟ್, 10 ವರ್ಷದ ಹಿಂದೆಯೂ ಬಾಲಕಿಯ ರೇಪ್​- ಮರ್ಡರ್ ಮಾಡಿ ಜೈಲುಪಾಲಾಗಿದ್ದ

| Updated By: ಸಾಧು ಶ್ರೀನಾಥ್​

Updated on: Mar 19, 2022 | 5:51 PM

ಪೊಲೀಸ್ ಶ್ವಾನ ಗ್ರಾಮದೊಳಗೆ ಹೋಗಿದ್ದರಿಂದ ಲತೇಶ್ ಮೇಲೆ ಅನುಮಾನದಿಂದ ಅವನನ್ನು ವಿಚಾರಣೆ ಮಾಡಲಾಗಿತ್ತು. ಆ ವೇಳೆ ಸದರಿ ಕೊಲೆ ಕೇಸ್ ಬಯಲಾಗಿತ್ತು.

ಮಹಿಳೆ ಹತ್ಯೆ ಪ್ರಕರಣ: ಅವಿವಾಹಿತ ಆರೋಪಿ ಅರೆಸ್ಟ್, 10 ವರ್ಷದ ಹಿಂದೆಯೂ ಬಾಲಕಿಯ ರೇಪ್​- ಮರ್ಡರ್ ಮಾಡಿ ಜೈಲುಪಾಲಾಗಿದ್ದ
ಮಹಿಳೆ ಹತ್ಯೆ ಪ್ರಕರಣ: ಅವಿವಾಹಿತ ಆರೋಪಿ ಅರೆಸ್ಟ್, 10 ವರ್ಷದ ಹಿಂದೆಯೂ ಬಾಲಕಿಯ ರೇಪ್​- ಮರ್ಡರ್ ಮಾಡಿ ಜೈಲುಪಾಲಾಗಿದ್ದ
Follow us on

ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿ ದೊಡ್ಡಪುರ ಗ್ರಾಮದ ಲತೇಶ್‌ (35) ಎಂಬಾತನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಸಹಕರಿಸದಿದ್ದಕ್ಕೆ ಮಾರ್ಚ್‌ 16 ರಂದು ರೇವತಿ ಎಂಬ 35 ವರ್ಷದ ಮಹಿಳೆಯನ್ನು ವಿಕೃತ ಕಾಮಿ ಲತೇಶ ಕೊಚ್ಚಿ ಕೊಲೆಗೈದಿದ್ದ. ಅವಿವಾಹಿತ ಲತೇಶ ಮಹಿಳೆಯನ್ನು ಮದುವೆಗೆ ಪೀಡಿಸುತ್ತಿದ್ದ. ನಿರಾಕರಿಸಿದಾಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗು ತಿಳಿಸಿವೆ. ಗುರುಪ್ರಸಾದ್​​ ಎಂಬುವವರನ್ನು ರೇವತಿ ಮದುವೆಯಾಗಿದ್ದು, 12 ವರ್ಷದ ಗಂಡು ಮಗು ಮತ್ತು 8 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಗುರುಪ್ರಸಾದ್​​ ಕೃಷಿಕರಾಗಿದ್ದಾರೆ.

10 ವರ್ಷದ ಹಿಂದೆ ಬಾಲಕಿ ಅತ್ಯಾಚಾರ ನಡೆಸಿ ಕೊಲೆ ಆರೋಪದಲ್ಲಿ ಜೈಲುಸೇರಿದ್ದ:
ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿ ಮಹಿಳೆಯ ಬರ್ಬರ ಹತ್ಯೆ ನಡೆದಿತ್ತು. ಆ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದ. ಪಾತಕಿಯ ಒತ್ತಾಯಕ್ಕೆ ಮಹಿಳೆ ಮಣಿಯದಿದ್ದಾಗ, ಆಕೆಯನ್ನು ಕೊಚ್ಚಿ ಕೊಂದಿದ್ದ. ಆರೋಪಿ ಹಂತಕ ದೊಡ್ಡಪುರ ಗ್ರಾಮದ ಲತೇಶ್ 10 ವರ್ಷದ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಎಂಬುದು ಗಮನಾರ್ಹ.

ಆದರೆ ಆ ಪ್ರಕರಣಗಳಲ್ಲಿ ನಾಲ್ಕು ವರ್ಷಗಳ ಜೈಲುವಾಸದ ಬಳಿಕ ಕೇಸ್ ಖುಲಾಸೆಯಾಗಿ ಬಿಡುಗಡೆಯಾಗಿದ್ದ. ಜೈಲೂಟ ತಿಂದರೂ ಬದಲಾಗದ ವಿಕೃತ ಕಾಮಿ ಲತೇಶ್ ಪರಿಚಿತ ಮಹಿಳೆಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ಒಪ್ಪದಿದ್ದಾಗ ಹತ್ಯೆ ಮಾಡಿದ್ದಾನೆ. ಪೊಲೀಸ್ ಶ್ವಾನ ಗ್ರಾಮದೊಳಗೆ ಹೋಗಿದ್ದರಿಂದ ಲತೇಶ್ ಮೇಲೆ ಅನುಮಾನದಿಂದ ಅವನನ್ನು ವಿಚಾರಣೆ ಮಾಡಲಾಗಿತ್ತು. ಆ ವೇಳೆ ಸದರಿ ಕೊಲೆ ಕೇಸ್ ಬಯಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ದಾಳಿ ಮಾಡಿ‌ ಕೊಚ್ಚಿ ಕೊಂದಿದ್ದಾನೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.

ಹೋಳಿ ಆಚರಣೆ ಬಳಿಕ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ನೀರುಪಾಲು:
ಗದಗ: ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಕೆರೆಗೆ ಸ್ನಾನ ಮಾಡಲು ಹೋಗಿದ್ದ ಶಂಕರ್‌ (26) ಎಂಬ ಯುವಕ ನೀರುಪಾಲಾಗಿದ್ದಾನೆ. ಹೋಳಿ ಆಚರಣೆ ಬಳಿಕ ಕೆರೆಯಲ್ಲಿ ಸ್ನಾನ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳೀಯರು ಮತ್ತು ಗಜೇಂದ್ರಗಡ ಠಾಣೆ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ:
Hijab Verdict: ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ತಮಿಳುನಾಡಿನ ತೌಹೀದ್ ಜಮಾತ್​ನಿಂದ ಬೆದರಿಕೆ

ಇದನ್ನೂ ಓದಿ:
16 ಚಿನ್ನದ ಪದಕ ಬಾಚಿದ ರಾಯಚೂರಿನ ಬುಶ್ರಾ ಮತೀನ್​ಗೆ, ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಒತ್ತಾಸೆ

Published On - 5:40 pm, Sat, 19 March 22