ಹಾಸನ: ಪತ್ನಿಯ ಶೀಲ ಶಂಕಿಸಿ ಕುತ್ತಿಗೆಗೆ ವೇಲ್ನಿಂದ ಬಿಗಿದು ಕೊಲೆ ಮಾಡಿರುವ ಘಟನೆ, ನಗರದ ಹೊರವಲಯದ ಎಸ್.ಎಂ. ಕೃಷ್ಣ ನಗರದ ಮನೆಯಲ್ಲಿ ನಡೆದಿದೆ. 32 ವರ್ಷದ ನಯನಾ ಎಂಬ ಮಹಿಳೆಯ ಕುತ್ತಿಗೆಗೆ ವೇಲ್ನಿಂದ ಬಿಗಿದು, ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ.
10 ವರ್ಷಗಳ ಹಿಂದೆ ಲೋಹಿತ್, ನಯನಾ ವಿವಾಹವಾಗಿದ್ದರು. ಟ್ಯಾಂಕರ್ ಚಾಲಕನಾಗಿದ್ದ ಲೋಹಿತ್ ಪತ್ನಿಯ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸಿ, ಈ ಕುಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇದೇ ವಿಷಯಕ್ಕೆ ನಿನ್ನೆ ಗಲಾಟೆ ನಡೆದು ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಆರೋಪಿ ಲೋಹಿತ್ ಕುಮಾರ್ನನ್ನು ಬಂಧಿಸಿದ ಪೊಲೀಸರು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.