ಮುತ್ತಿಕ್ಕಿದ್ದೇ ತಡ.. ಆಪ್ಪಿಕೊಂಡೇ ಬಿಡ್ತು 10 ತಿಂಗಳ ಮಗುವಿಗೂ ಕೊರೊನಾ!
ಹಾಸನ: ಜಗತ್ತೇ ನಡುಗಿಸಿರುವ ಕೊರೊನಾವೈರಸ್ ಹೆಮ್ಮಾರಿಗೆ ಚಿಕ್ಕವರು ದೊಡ್ಡವರು ಅನ್ನೋ ಬೇಧ ಭಾವವೇ ಇಲ್ಲ. ಸಿಕ್ಕಿದ್ದೇ ಛಾನ್ಸ್ ಅಂತಾ ಸಿಕ್ಕ ಸಿಕ್ಕಲ್ಲಿ ನುಗ್ತಾ ಇದೆ. ಎದುರಿಗೆ ಕಂಡವರೆನ್ನೆಲ್ಲಾ ಅಪ್ಪಿಕೊಳ್ತಾ ಇದೆ. ಹೀಗೆ ಅಪ್ಪಿಕೊಂಡವರ ಸಾಲಿಗೆ ಈಗ 10 ತಿಂಗಳ ಕಂದಮ್ಮ ಸೇರಿಕೊಂಡಿದೆ. ಮುತ್ತಿಕ್ಕಿದ್ದೇ ತಡ ಆಪ್ಪಿಕೊಂಡೇ ಬಿಡ್ತು ಕೊರೊನಾ! ಹೌದು, ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ವಿನಾಯಕ ಬಡಾವಣೆಯಲ್ಲಿ 10 ತಿಂಗಳ ಮಗೂಗು ಕೊರೊನಾ ಸೋಂಕು ತಗುಲಿದೆ. ಮಗುವಿನ ಸಂಬಂಧಿ ಕೊರೊನಾ ಸೋಂಕಿತ ಪಿ. 5479 ಅರಕಲಗೂಡು […]
ಹಾಸನ: ಜಗತ್ತೇ ನಡುಗಿಸಿರುವ ಕೊರೊನಾವೈರಸ್ ಹೆಮ್ಮಾರಿಗೆ ಚಿಕ್ಕವರು ದೊಡ್ಡವರು ಅನ್ನೋ ಬೇಧ ಭಾವವೇ ಇಲ್ಲ. ಸಿಕ್ಕಿದ್ದೇ ಛಾನ್ಸ್ ಅಂತಾ ಸಿಕ್ಕ ಸಿಕ್ಕಲ್ಲಿ ನುಗ್ತಾ ಇದೆ. ಎದುರಿಗೆ ಕಂಡವರೆನ್ನೆಲ್ಲಾ ಅಪ್ಪಿಕೊಳ್ತಾ ಇದೆ. ಹೀಗೆ ಅಪ್ಪಿಕೊಂಡವರ ಸಾಲಿಗೆ ಈಗ 10 ತಿಂಗಳ ಕಂದಮ್ಮ ಸೇರಿಕೊಂಡಿದೆ.
ಮುತ್ತಿಕ್ಕಿದ್ದೇ ತಡ ಆಪ್ಪಿಕೊಂಡೇ ಬಿಡ್ತು ಕೊರೊನಾ! ಹೌದು, ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ವಿನಾಯಕ ಬಡಾವಣೆಯಲ್ಲಿ 10 ತಿಂಗಳ ಮಗೂಗು ಕೊರೊನಾ ಸೋಂಕು ತಗುಲಿದೆ. ಮಗುವಿನ ಸಂಬಂಧಿ ಕೊರೊನಾ ಸೋಂಕಿತ ಪಿ. 5479 ಅರಕಲಗೂಡು ತಾಲೂಕಿನ ಗೌರಿಕೊಪ್ಪಲು ಗ್ರಾಮದವನು. ಈತ ಅರಕಲಗೂಡಿನ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಆಗ ಮನೆಯಲ್ಲಿದ್ದ 10 ತಿಂಗಳ ಮುದ್ದಾದ ಮಗುವನ್ನು ಎತ್ತಿ ಮುದ್ದಾಡಿದ್ದಾನೆ. ಅಷ್ಟೇ ಅವನಿಂದ ಮಗೂಗು ವಕ್ಕಸಿಕೊಂಡಿದೆ ಕೊರೊನಾ.
ಒಟ್ಟು ಐದು ಜನರಿಗೆ ಕೊರೊನಾ ಹಂಚಿದ ಭೂಪ! ಇದು ಇಷ್ಟಕ್ಕೆ ಮುಗಿದಿಲ್ಲ. ಈ ಸೋಂಕಿತನಿಂದ ಇತರ ಐದು ಜನರಿಗೂ ಕೊರೊನಾ ಹರಡಿದೆ. ಸೋಂಕಿತ 5479ನ ಇಬ್ಬರು ಮಕ್ಕಳ ಜೊತೆಗೆ, ಅರಕಲಗೂಡಿನ ವಿನಾಯಕ ಬಡಾವಣೆಯ ಭೇಟಿ ಕೊಟ್ಟಿದ್ದ ಮನೆಯ ಹಿರಿಯ 60 ವರ್ಷದ ವ್ಯಕ್ತಿಯೂ ಸೇರಿ ಒಟ್ಟು ಐದು ಜನರಿಗೆ ಕೋವಿಡ್-19 ಹಬ್ಪಿರೋದು ಕನ್‌ಫರ್ಮ್ ಆಗಿದೆ.
ಪರೀಕ್ಷೆಯಲ್ಲಿ ಸೋಂಕು ಹರಡಿರೋದು ದೃಢವಾಗುತ್ತಲೆ ವಿನಾಯಕ ಬಡಾವಣೆಯ ಮೊದಲನೇ ಕ್ರಾಸ್‌ನ್ನ ಸೀಲ್‌ಡೌನ್ ಮಾಡಲಾಗಿದೆ. ಮನೆ ಸೇರಿದಂತೆ ಸುತ್ತಮುತ್ತಲೂ ಕೆಮಿಕಲ್ಸ್ ಬಳಸಿ ಸ್ಯಾನಿಟೈಸ್ ಮಾಡಲಾಗಿದೆ.