AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ‌ ಸಂಬಂಧಕ್ಕೆ ಒಪ್ಪದ ವಿವಾಹಿತ ಮಹಿಳೆಗೆ ಮಾನಸಿಕ ಕಿರುಕುಳ ಆರೋಪ; ಮನನೊಂದು ಆತ್ಮಹತ್ಯೆಗೆ ಶರಣು

ಮೃತ ಮಹಿಳೆ 12 ವರ್ಷದ ಹಿಂದೆ ಇರ್ಫಾನ್ ಎಂಬುವವರ ಜೊತೆ ಮದುವೆಯಾಗಿದ್ದರು. ಇದಾದ ಬಳಿಕ ಶಬನಮ್‌ ಜೊತೆ ಗೆಳೆತನ ಬೆಳೆಸಿದ್ದ ಇಸ್ಮಾಯಿಲ್ ಜೊತೆ ಪ್ರೀತಿಯ ಬಲೆಗೆ ಬಿದ್ದು, ಎರಡು ತಿಂಗಳ ಹಿಂದೆ ಆತನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಬಳಿಕ ಸಂಬಂಧಿಕರೆಲ್ಲರೂ ಸೇರಿ ರಾಜಿ ಸಂದಾನ‌ ಮಾಡಿದ ಬಳಿಕ ಮಹಿಳೆ ಮನೆಗೆ ವಾಪಸ್ ಬಂದಿದ್ದರು.

ಅಕ್ರಮ‌ ಸಂಬಂಧಕ್ಕೆ ಒಪ್ಪದ ವಿವಾಹಿತ ಮಹಿಳೆಗೆ ಮಾನಸಿಕ ಕಿರುಕುಳ ಆರೋಪ; ಮನನೊಂದು ಆತ್ಮಹತ್ಯೆಗೆ ಶರಣು
ಮೃತ ಮಹಿಳೆ
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Oct 13, 2023 | 8:41 PM

Share

ಹಾಸನ, ಅ.13: ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ (Hassan) ನಗರದ ರಾಜಕುಮಾರ್ ನಗರ ಬಡಾವಣೆಯಲ್ಲಿ ನಡೆದಿದೆ. ಶಬನಮ್ ಸುಲ್ತಾನ್ (30) ಮೃತ ರ್ದುದೈವಿ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆ ಅಕ್ರಮ‌ ಸಂಬಂಧಕ್ಕೆ ಒಪ್ಪದಿದ್ದಕ್ಕೆ ಇಸ್ಮಾಯಿಲ್ ಎಂಬಾತ ಮಾನಸಿಕ ಕಿರುಕುಳ ಮತ್ತು ಬೆದರಿಕೆ ನೀಡಿದ್ದಾನೆ. ಇದರಿಂದಲೇ ಶಬನಮ್ ಸುಲ್ತಾನ್ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪತಿ ಕಡೆಯವರು ಆರೋಪಿಸಿದ್ದಾರೆ. ಈ ಕುರಿತು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆ ಬಿಟ್ಟು ಹೋಗಿದ್ದ ಮೃತ ಮಹಿಳೆ ಹಾಗೂ ಇಸ್ಮಾಯಿಲ್​

ಹೌದು, ಮೃತ ಮಹಿಳೆ 12 ವರ್ಷದ ಹಿಂದೆ ಇರ್ಫಾನ್ ಎಂಬುವವರ ಜೊತೆ ಮದುವೆಯಾಗಿದ್ದರು. ಇದಾದ ಬಳಿಕ ಶಬನಮ್‌ ಜೊತೆ ಗೆಳೆತನ ಬೆಳೆಸಿದ್ದ ಇಸ್ಮಾಯಿಲ್ ಜೊತೆ ಪ್ರೀತಿಯ ಬಲೆಗೆ ಬಿದ್ದು, ಎರಡು ತಿಂಗಳ ಹಿಂದೆ ಆತನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಬಳಿಕ ಸಂಬಂಧಿಕರೆಲ್ಲರೂ ಸೇರಿ ರಾಜಿ ಸಂದಾನ‌ ಮಾಡಿದ ಬಳಿಕ ಮಹಿಳೆ ಮನೆಗೆ ವಾಪಸ್ ಬಂದಿದ್ದರು. ಮನಸ್ಸು ಬದಲಾಯಿಸಿ ಪತಿ ಹಾಗು ಮಕ್ಕಳೊಂದಿಗಿದ್ದ ಅನ್ನೋನ್ಯವಾಗಿದ್ದ ಮಹಿಳೆಗೆ, ಇಸ್ಮಾಯಿಲ್​ ಕಿರುಕುಳ ನೀಡಿದ್ದು, ತನ್ನೊಟ್ಟಿಗೆ ಬರದಿದ್ದರೆ ಖಾಸಗಿ ಫೋಟೋ ಹಾಗೂ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಇಸ್ಮಾಯಿಲ್​ನ ಕಿರುಕುಳ ಹಾಗೂ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಕಡೆಯವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಜಮೀನಿಗೆ ಬಂದ ಕೇಂದ್ರ ಬರ ತಂಡದ ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ

ಟಿಪ್ಪರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿದ ಬೈಕ್ ಸವಾರ

ಬೆಂಗಳೂರು: ನಗರದ ಸರ್ಜಾಪುರ ಬಳಿಯ ಅಬ್ಬಯ್ಯ ಸರ್ಕಲ್ ಬಳಿ ಭೀಕರ ಅಪಘಾತ ಆಗಿದೆ. ಹೌದು, ಟಿಪ್ಪರ್ ವಾಹನದ ಹಿಂಬದಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿದ್ದು, ವ್ಯಕ್ತಿ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ವಿಪರೀತ ಟಿಪ್ಪರ್ ಓಡಾಟಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅತ್ತಿಬೆಲೆ ಹಾಗೂ ಕೃಷ್ಣಗಿರಿ ಮಾರ್ಗದಲ್ಲಿ ಟೋಲ್ ತಪ್ಪಿಸಲು ಬಾಗಲೂರು ರಸ್ಥೆ ಬಳಕೆ ಮಾಡಲಾಗುತ್ತಿದೆ. ಇನ್ನು ಹಗಲಲ್ಲೇ ಟಿಪ್ಪರ್ ಓಡಾಟದ ವಿರುದ್ಧ ದೂರು ಕೊಟ್ಟರೂ ಯಾವುದೇ ಪ್ರಯೋಜನವಿಲ್ಲವೆಂದು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 13 October 23