ಹಾಸನ, ಅ.03: ಅನಾರೋಗ್ಯದಿಂದ ಹೆಣ್ಣಾನೆವೊಂದು ಕಳೆದ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತು ಕೊನೆಗೆ ಪ್ರಾಣ ಬಿಟ್ಟ ದಾರುಣ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ(Sakleshpur) ತಾಲ್ಲೂಕಿನ ವಣಗೂರು ಬಳಿ ನಡೆದಿದೆ. ಅನಾರೋಗ್ಯದಿಂದ ಆಹಾರ ತ್ಯಜಿಸಿ ನರಳುತ್ತಿದ್ದ ಹೆಣ್ಣಾನೆಗೆ ಇಂದು(ಗುರುವಾರ) ಅರಣ್ಯ ಇಲಾಖೆಯವರು ಚಿಕಿತ್ಸೆ ನೀಡಲು ಮುಂದಾಗಿದ್ದರು. ಈ ವೇಳೆ ಮೃತಪಟ್ಟಿರುವುದು ಬೆಳಿಕಿಗೆ ಬಂದಿದೆ. ಸುಮಾರು ಇಪ್ಪತ್ತು ವರ್ಷದ ಹೆಣ್ಣಾನೆ ಇದಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲೇ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ.
ದಾವಣಗೆರೆ: ತಾಲೂಕಿನ ಮಳಲ್ಕೆರೆ ಗ್ರಾಮದಲ್ಲಿ ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್ ಮುತ್ತುರಾಜ್(32) ಎಂಬಾತ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಗಂಟೆ ಗಟ್ಟಲೇ ಟಿಸಿ ಮೇಲೆಯೇ ಮೃತದೇಹ ನೇತಾಡಿದ್ದು, ವಿದ್ಯುತ್ ತೆಗೆಯಲಾಗಿತ್ತಾ, ಇಲ್ಲವಾ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ಎಲ್‌ಸಿ ತೆಗೆದುಕೊಂಡಿದ್ದರೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದು, ಈ ಕುರಿತು ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಸಾವು; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಶಿವಮೊಗ್ಗ: ಹೊಳೆಹೊನ್ನೂರಿನ ಆನವೇರಿ ಹನುಮಂತಾಪುರದಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ರಕ್ಷಿತ್(22) ಮೃತ ಯುವಕ. ಶೆಡ್‌ಗೆ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ದುರ್ಘಟನೆ ನಡೆದಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ