ಹಾಸನ: ಹಾಸನ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ (ಇಒ) ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ತೀವ್ರ ತರಾಟೆಗೆ ತೆಗೆದುಕೊಂಡು, ಜಿಲ್ಲಾಧಿಕಾರಿಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಸಂಗ ನಡೆದಿದೆ. ಏಯ್ ಬಾರೋ ಇಲ್ಲಿ, ಯಾವನು ಇಓ ಎಂದು ಏಕವಚನದಲ್ಲಿ ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರೀ ರಿ, ಅವನ್ಯಾರು ಇಓ? ಎಂದು ಡಿಸಿಗೆ ವಾರ್ನ್ ಮಾಡಿದ್ದಾರೆ ರೇವಣ್ಣ. ಜಿಲ್ಲಾಧಿಕಾರಿ ಕಛೇರಿ ಎದುರು ರೇವಣ್ಣ ಕೆಂಡಾಮಂಡಲರಾದ ಪ್ರಸಂಗ ನಡೆಯಿತು.
ಸಂದರ್ಭ: ಕೆಂಚಟ್ಟಹಳ್ಳಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ. ವಿವಿ ಕ್ಯಾಂಪಸ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಹೆಚ್ ಡಿ ರೇವಣ್ಣ ಕಿಡಿ ಕಿಡಿಯಾದರು. ಏಯ್ ನೀನು ದನ ಕಾಯೋಕೆ ಹೋಗು. ಹೆಣ್ಮಕ್ಕಳ ಕಾಲೇಜು ಬಳಿ ಇದನ್ನು ಮಾಡೋಕೆ ಬಿಟ್ಟಿದ್ದಾರಾ? ಡಿಸಿ ಯಾರದ್ದಾದರೂ ಮನೆಗೆ ನುಗ್ಗು ಅಂದ್ರೆ ನುಗ್ತೀಯಾ? ಲೈಸೆನ್ಸ್ ತಗೊಳದೆ ಕಟ್ಟಡ ಕಟ್ಟೋಕೆ ಹೇಗೆ ಬಿಟ್ಟಿದ್ದೀಯಾ? PDO ಹೆದರಿಸಿ ನೀನು ಲೈಸೆನ್ಸ್ ಕೊಡೋಕೆ ಹೊರಟಿದ್ದೀಯಾ? ನೀವು, ಡಿಸಿ ಅದೆಷ್ಟು ಹೆಣ ಬೀಳಿಸ್ತೀರೋ ಬೀಳಿಸಿ ನೋಡೋಣ. ಬರೀ ಜನ ವಿರೋಧಿ ಯೋಜನೆ ಮಾಡ್ತೀರಾ ಎಂದು ರೇವಣ್ಣ ಕಿಡಿಯಾದರು. ನಿಮಗೆ ಕೇಳೋರಿಲ್ಲ ಹೇಳೋರಿಲ್ಲ ಎಂಬಂತಾಗಿದೆ ಎಂದು ಡಿಸಿ ಕಚೇರಿಯಲ್ಲಿ ಜನರ ಎದುರೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಡಿಸಿ ಕಛೇರಿ ಎದುರು ಕೆಂಡಾಮಂಡಲರಾದ ರೇವಣ್ಣ ಎಯ್ ನೀನು ದನ ಕಾಯೋಕೆ ಹೋಗು, ನೀನು ದನದ ಡಾಕ್ಟರ್ ನೀನು. ಅವನ್ಯಾರೋ ಕರಿಯಯ್ಯ ಡಿಸಿನಾ. ನಾನ್ ತಂದು ಹಾಕಿರೋದು ನಿನ್ನನ್ನು. ನೀನು ದನದ ಡಾಕ್ಟರ್. ದನಕ್ಕೆ ಇಂಜೆಕ್ಷನ್ ಕೊಡೋನು ನೀನು, ನಿನಗೇನು ಗೊತ್ತಿದೆ? ಟ್ರಕ್ ಟರ್ಮಿನಲ್ ಗೆ ಭೂಮಿ ಮಂಜೂರಾಗಿರೊ ಬಗ್ಗೆ ವಿವರಿಸಲು ಮುಂದಾದ ಇಒ ಯಶ್ವಂತ್ ಅವರನ್ನು ಹಿಗ್ಗಾಮುಗ್ಗ ಬೈಗುಳ ಸುರಿಸಿದರು. ಪಿಡಿಒ ಹೆದರಿಸಿ ನೀನು ಲೈಸೆನ್ಸ್ ಕೊಡೋಕೆ ಹೊರಟಿದ್ದೀಯಾ ಎಂದು ಗುಡುಗಿದರು. ಕೊನೆಗೆ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೂತು ಚರ್ಚೆ ಮಾಡೊಣ ಎಂದು ರೇವಣ್ಣರನ್ನ ಸಮಾಧಾನಪಡಿಸಿದರು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.
ಯಾವಂದಾರು ಮನೆಗೆ ಹೋಗಿ ಜೀತಕ್ಕೆ ಇದ್ದುಬಿಡಿ ಎಂದು ಅಸಮಧಾನ ಹೊರಹಾಕಿದ ರೇವಣ್ಣ, ಅನುಮತಿಯೇ ಇಲ್ಲದೆ ಅದೆಂಗೆ ಖಾಸಗಿಯವರು ಅಲ್ಲಿ ಕೆಲಸ ಮಾಡ್ತಾರೆ? ವಿವಿ ಕೇಂದ್ರದವರು ಅರ್ಜಿ ಕೊಟ್ಟರೂ ಯಾಕೆ ಭೂಮಿ ಮಂಜೂರು ಮಾಡಿಲ್ಲ? ಇವರು ಅರ್ಜಿ ಹಾಕಿದ ತಕ್ಷಣ ಹೇಗೆ ಮಂಜೂರು ಮಾಡಿದಿರಾ? ಎಂದು ಆಕ್ರೋಶ ಹೊರಹಾಕಿದ ರೇವಣ್ಣ ಉಸ್ತುವಾರಿ ಸಚಿವರು ಬರೋವರೆಗೆ ಕೆಲಸ ನಿಲ್ಲಿಸಿ ಎಂದು ಆಗ್ರಹ ಮಾಡಿದರು.
Published On - 6:49 pm, Mon, 25 April 22