ಮನುಷ್ಯ ಕಿತ್ತಳೆ ಹಣ್ಣಿನಂತೆ.. ಶಾಂತಿ ಸೌಹಾರ್ದ ಜಾಥಾದಲ್ಲಿ ಭಾಗವಹಿಸಿ ಕೋಡಿಶ್ರೀಗಳ ಮಾತು; ವಿಡಿಯೋ ನೋಡಿ

| Updated By: ganapathi bhat

Updated on: Apr 11, 2022 | 6:15 PM

ಮನುಷ್ಯ ಕಿತ್ತಳೆ ಹಣ್ಣು ರೀತಿ ಎಲ್ಲಾ ಇರಬೇಕು. ಕರ್ನಾಟಕ ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಬೇಲೂರಿನಲ್ಲಿ ಶಾಂತಿ ಸೌಹಾರ್ದ ಜಾಥಾ ನಡೆಸಲಾಗಿದೆ. ಶಾಂತಿ, ಸೌಹಾರ್ದ ಜಾಥಾ ಬಳಿಕ ಹಾರನಹಳ್ಳಿ ಕೋಡಿಶ್ರೀಗಳು ಹೇಳಿಕೆ ನೀಡಿದ್ದಾರೆ.

ಮನುಷ್ಯ ಕಿತ್ತಳೆ ಹಣ್ಣಿನಂತೆ.. ಶಾಂತಿ ಸೌಹಾರ್ದ ಜಾಥಾದಲ್ಲಿ ಭಾಗವಹಿಸಿ ಕೋಡಿಶ್ರೀಗಳ ಮಾತು; ವಿಡಿಯೋ ನೋಡಿ
ಕೋಡಿಮಠದ ಶ್ರೀಗಳು
Follow us on

ಹಾಸನ: ಮನುಷ್ಯನ ಅಭ್ಯುದಯಕ್ಕೆ, ಮೇರುತನಕ್ಕೆ ಮಾನವೀಯ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಅದು ಧರ್ಮ, ಅದು ಇಲ್ಲದಿದ್ರೆ ಧರ್ಮ ಆಗಲ್ಲ. ಒಂದು ಕಿತ್ತಳೆ ಹಣ್ಣು, ದುಂಡಗೆ ಕೆಂಪಗಿರುತ್ತದೆ. ಒಳಗಿನ ತೋಳೆಗಳು ಚಿಕ್ಕದಿರುತ್ತವೆ, ದಪ್ಪಗಿರುತ್ತದೆ. ಮೇಲಿನ ಸಿಪ್ಪೆ ಎಲ್ಲವನ್ನು ಸುತ್ತಿಕೊಂಡಿರುತ್ತವೆ. ಅದು ಸಣ್ಣದಕ್ಕೂ ಸಹಕಾರ ಕೊಡುತ್ತೆ, ದೊಡ್ಡದಕ್ಕು ಸಹಕಾರ ಕೊಡುತ್ತದೆ. ಕಿತ್ತಳೆ ಹಣ್ಣು ಅನ್ನುವುದು ಒಂದು ಜಗತ್ತು ಇದ್ದ ಹಾಗೇ. ಸಿಪ್ಪೆ ಅನ್ನುವುದು ಧರ್ಮ ಇದ್ದ ಹಾಗೇ. ಒಳಗಿನ ತೋಳೆಗಳು ಜಾತಿ ಇದ್ದ ಹಾಗೇ. ಸಣ್ಣಜಾತಿ ದೊಡ್ಡ ಜಾತಿ ಎಲ್ಲ ಇರುತ್ತವೆ. ಎಲ್ಲವನ್ನೂ ಕೂಡಿಕೊಂಡಿರುತ್ತವೆ. ಹಾಗಾಗಿ ಮನುಷ್ಯ ಕಿತ್ತಳೆ ಹಣ್ಣು ರೀತಿ ಎಲ್ಲಾ ಇರಬೇಕು. ಕರ್ನಾಟಕ ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಬೇಲೂರಿನಲ್ಲಿ ಶಾಂತಿ ಸೌಹಾರ್ದ ಜಾಥಾ ನಡೆಸಲಾಗಿದೆ. ಶಾಂತಿ, ಸೌಹಾರ್ದ ಜಾಥಾ ಬಳಿಕ ಹಾರನಹಳ್ಳಿ ಕೋಡಿಶ್ರೀಗಳು ಹೇಳಿಕೆ ನೀಡಿದ್ದಾರೆ.

ಎಲ್ಲಾ ಧರ್ಮ ಇದ್ದಾವೆ. ಎಲ್ಲಾ ಧರ್ಮ ಸಾರಗಳು ಮನುಷ್ಯನ ಅಭ್ಯುದಯಕ್ಕಾಗಿ, ಮಾನವೀಯ ಮೌಲ್ಯಕ್ಕಾಗಿ. ಶಾಂತಿ, ಸಮಾಧಾನ, ನೆಮ್ಮದಿ ಇರಬೇಕು. ಅದು ಹಾಳುಗೆಡವಬಾರದು. ಅಂಥದ್ದು ಅದು ಧರ್ಮವಾಗುವುದಿಲ್ಲ. ಧರ್ಮಾವಲೋಕನ, ಆತ್ಮಾವಲೋಕನ ಮಾಡಿಕೊಂಡರೆ‌ ಅವರಿಗೆ ಅರ್ಥವಾಗುತ್ತೆ ಎಂದು ರಾಜ್ಯದಲ್ಲಿನ ಧರ್ಮ ಸಂಘರ್ಷ ಬಗ್ಗೆ ಕೋಡಿಶ್ರೀಗಳು ಶಾಂತಿ ಸಂದೇಶ ಸಾರಿದ್ದಾರೆ.

ಮುಂದಿನ ರಾಜಕೀಯ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ರಾಜಕೀಯ ಗುಂಪುಗಳಾಗುತ್ತವೆಂದು ಈ ಹಿಂದೆಯೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳಿಂದ ಸೌಹಾರ್ದ ಜಾಥಾ ನಡೆಸಲಾಗಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌಹಾರ್ದ ಜಾಥಾ ನಡೆಸಲಾಗಿದೆ. ಜಾಥಾದಲ್ಲಿ ಬಾಗಿಯಾಗಿ ಶ್ರೀಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೋಡಿ ಮಠದ ಸ್ವಾಮೀಜಿ ಮಾತಿಗೆ ನಿಖರತೆ, ಸ್ಪಷ್ಟತೆ ಇಲ್ಲ : ಪ್ರತಾಪ್ ಸಿಂಹ

ಇದನ್ನೂ ಓದಿ: Kodi Sri: ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ

Published On - 6:13 pm, Mon, 11 April 22