Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಡಿ ಮಠದ ಸ್ವಾಮೀಜಿ ಮಾತಿಗೆ ನಿಖರತೆ, ಸ್ಪಷ್ಟತೆ ಇಲ್ಲ : ಪ್ರತಾಪ್ ಸಿಂಹ

ಕೋಡಿ ಮಠದ ಸ್ವಾಮಿಜೀಗೆ ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಹೋಲಿಸಿದ ಸಂಸದ ಪ್ರತಾಪಸಿಂಹ ಇವರ ಮಾತನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಬೇಡಿ ಇವರ ಹೇಳಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ ಆಧಾರ ಇಲ್ಲದೇ ಈ ಮೂವರು ಮಾತನಾಡುತ್ತಾರೆ

ಕೋಡಿ ಮಠದ ಸ್ವಾಮೀಜಿ ಮಾತಿಗೆ ನಿಖರತೆ, ಸ್ಪಷ್ಟತೆ ಇಲ್ಲ : ಪ್ರತಾಪ್ ಸಿಂಹ
ಕೋಡಿ ಮಠದ ಸ್ವಾಮೀಜಿ ಮತ್ತು ಪ್ರತಾಪ್ ಸಿಂಹ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2022 | 12:55 PM

ರಾಜ್ಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿರುವ  ಅಲ್‌ಕೈದಾ ನಾಯಕನ ವಿಡಿಯೋ ಬಗ್ಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರ್ ಸ್ವಾಮಿ ಅಲ್‌ಕೈದಾ ನಾಯಕನ ವಿಡಿಯೋ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ ಎಂದು ಆರೋಪ ಮಾಡಿದ್ದರು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಮಾತಿನ ಭರದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೋಡಿ ಮಠದ ಸ್ವಾಮೀಜಿ ಇವರ ಹೇಳಿಕೆಗಳಿಗೆ ನಿಖರತೆ, ಸ್ಪಷ್ಟತೆ ಇರಲ್ಲ ಎಂದು ಹೇಳಿಕೆ ನೀಡಿದ್ದಾರೆ.  ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆಗೆ ಯಾವುದೇ ಆಧಾರವಿರಲ್ಲ ಇವರ ಹೇಳಿಕೆಗಳನ್ನ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮೈಸೂರಿನಲ್ಲಿ  ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರ್ ಸ್ವಾಮಿ ಜೊತೆಗೆ ಕೋಡಿ ಮಠದ ಸ್ವಾಮೀಜಿ ಅವರನ್ನು ಕೂಡ ಈ ಮಧ್ಯೆ  ತಂದಿರುವುದು ಚರ್ಚೆಗೆ ಕಾರಣವಾಗಿದೆ ಆಧಾರ ಇಲ್ಲದೇ ಈ ಮೂವರು ಮಾತನಾಡುತ್ತಾರೆ ಇಂತವರ ಹೇಳಿಕೆಗಳಲ್ಲಿ ನಿಖರತೆ, ಸ್ಪಷ್ಟತೆ ಯಾವುದು ಇರುವುದಿಲ್ಲ ರಾಜ್ಯದ ಎಲ್ಲಾ ವಿಚಾರಗಳಲ್ಲೂ ಈ ಮೂವರ ಹೇಳಿಕೆಗಳು ಅಸ್ಪಷ್ಟವಾಗಿಯೇ ಇರುತ್ತವೆ ಎಂದು ಹೇಳಿದ್ದಾರೆ.