ಹಿತ್ತಾಳೆ ಉಂಗರವಿಟ್ಟು ಚಿನ್ನದ ಉಂಗುರ ಎಗರಿಸಿದ ಖರ್ತನಾಕ್ ಕಳ್ಳ

ಹಾಸನ: ಆಭರಣ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಒಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ಹೇಳಿ ಕಳ್ಳತನ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ನಕ್ಷತ್ರ ಜ್ಯುವೆಲ್ಲರಿ ಶಾಪ್​ಗೆ ಬಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ನೋಡುತ್ತಾ ಹಿತ್ತಾಳೆ ಉಂಗುರ ಬದಲಿಸಿಟ್ಟು ಚಿನ್ನದ ಉಂಗುರ ಎಗರಿಸಿದ್ದಾನೆ. ಉಂಗುರವನ್ನು ಅದಲು ಬದಲು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಂಚಕನ ಕೃತ್ಯ ಕಂಡು ಅಂಗಡಿ ಮಾಲೀಕ ಶಾಕ್ ಆಗಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿತ್ತಾಳೆ ಉಂಗರವಿಟ್ಟು ಚಿನ್ನದ ಉಂಗುರ ಎಗರಿಸಿದ ಖರ್ತನಾಕ್ ಕಳ್ಳ
ಸಾಧು ಶ್ರೀನಾಥ್​

Updated on: Dec 27, 2019 | 1:46 PM

ಹಾಸನ: ಆಭರಣ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಒಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ಹೇಳಿ ಕಳ್ಳತನ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ನಕ್ಷತ್ರ ಜ್ಯುವೆಲ್ಲರಿ ಶಾಪ್​ಗೆ ಬಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ನೋಡುತ್ತಾ ಹಿತ್ತಾಳೆ ಉಂಗುರ ಬದಲಿಸಿಟ್ಟು ಚಿನ್ನದ ಉಂಗುರ ಎಗರಿಸಿದ್ದಾನೆ.

ಉಂಗುರವನ್ನು ಅದಲು ಬದಲು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಂಚಕನ ಕೃತ್ಯ ಕಂಡು ಅಂಗಡಿ ಮಾಲೀಕ ಶಾಕ್ ಆಗಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us