ಹಾಸನ: ಹೌದು ಸ್ವಾಮಿ ನಮ್ ಕ್ಯಾಪಾಸಿಟಿ ಇಷ್ಟೆ ಸ್ವಾಮಿ. ಇವರು ಪ್ರದಾನಿ ಆಗಿದ್ದರು, ಸಿಎಂ ಆಗಿದ್ದರು, ಲೋಕೋಪಯೋಗಿ ಸಚಿವರಾಗಿದ್ದರು, ವಿಮಾನ ನಿಲ್ದಾಣ ಮಾಡೊಕೆ ಇವರನ್ನು ಯಾರು ಹಿಡಿದುಕೊಂಡಿದ್ದರು ಎಂದು ನಾವು ಕಾರ್ಗೊ ವಿಮಾನ ಬರೊ ಹಾಗೆ ಮಾಡೋಕೆ ಮಾಡಿದ್ಚಿ, ಇವರು ಅದ್ಯಾವುದೊ ಜಟಕಾ ವಿಮಾನ ತರ್ತಾರಂತೆ ಎಂದಿದ್ದ ಮಾಜಿ ಸಚಿವ ಹೆಚ್. ಡಿ ರೇವಣ್ಣ (HD Revanna) ವಿರುದ್ಧ ಶಾಸಕ ಪ್ರೀತಂ ಗೌಡ (Preetham Gowda) ಹಾಸನದಲ್ಲಿ (Hassan) ಕಿಡಿಕಾರಿದ್ದಾರೆ.
ಹಾಸನದ ಜನ ದೇಶದ ಜನ ಅವಕಾಶ ಕೊಟ್ಟಾಗ ಏನು ಮಾಡುತ್ತಿದ್ದಿರಿ? ವಿಮಾನ ನಿಲ್ದಾಣ, ರಿಂಗ್ ರೋಡ್ ಮಾಡೋಕೆ ಯಡಿಯೂರಪ್ಪ ಸಾಹೇಬರು, ಪ್ರೀತಂಗೌಡ ಬರಬೇಕಾಯ್ತು. ಇವರು ಯಾವಾಗ್ಲು ನಾನು ಬಸ್ಟ್ಯಾಂಡ್ ಮಾಡಿದೆ,ಆಸ್ಪತ್ರೆ ಮಾಡಿದೆ ಅಂತಾರೆ ಸ್ಚಾಮಿ ನೀವಲ್ಲದೆ ಯಾರೇ ಆಗಿದ್ದರು ಇದನ್ನ ಮಾಡುತ್ತಿದ್ದರು ಎಂದರು.
ಮಂಡ್ಯದಲ್ಲಿ ಯಾರು ಕೆಲಸ ಮಾಡಿಲ್ವಾ ? ಮಡಿಕೇರಿಯಲ್ಲಿ ಇರೋದು ಮೂರೇ ತಾಲ್ಲೂಕು ಆದರೂ ಮೆಡಿಕಲ್ ಕಾಲೇಜು ಆಗಿಲ್ವಾ ? ಇವರು ಕೇಳದಿದ್ದರೂ ಮೆಡಿಕಲ್ ಕಾಲೇಜು, ಬಸ್ಬಸ್ಟ್ಯಾಂಡ್ ಆಗುತ್ತೆ. ವಿಮಾನ ನಿಲ್ದಾಣ ಯಾಕೆ ಮಂಡ್ಯದಲ್ಲಿ ಇಲ್ಲಾ? ಕೊಡಗಲ್ಲಿ ಇಲ್ಲಾ ? ಕೆಲಸ ಮಾಡೋಕೆ ಬದ್ದತೆ ಬೇಕು ಅಲ್ಲವೇ ಎಂದು ವಾಗ್ದಾಳಿ ಮಾಡಿದರು.
ನಲವತ್ತು ವರ್ಷ ಕೆಲಸ ಮಾಡಿದರಲ್ಲಾ ಯಾಕೆ ರಿಂಗ್ ರೋಡ್ ಮಾಡೋಕೆ ಆಗಿರ್ಲಿಲ್ಲ? ಪ್ರಶ್ನೆ ಮಾಡೊಕೆಹೋದರೆ ನೂರಾರು ಪ್ರಶ್ನೆ ಇರುತ್ತೆ. ಎಲ್ಲಾ ಪ್ರಶ್ನೆಗೆ ಉತ್ತರ ಕೊಡೋಕು ಆಗೋದಿಲ್ಲ. ಜನ ಏನು ಹೇಳುತ್ತಾರೆ ಅದನ್ನ ಮಾಡೋ ಕೆಲಸ ಮಾಡುತ್ತೇನೆ. ಅವರು ವಿಮಾನ ನಿಲ್ದಾಣ ವಿಚಾರದಲ್ಲಿ ಹೇಳೋದಿ ಸರಿ ಇದೆ. ಆದರೆ ಹಂತ ಹಂತವಾಗಿ ಮಾಡೋಣ. ಹಾಸನದಿಂದ ಈಗ ಡೆಲ್ಲಿಗೆ, ಬಾಂಬೆಗೆ ಹೋಗೋರು ಎಷ್ಟು ಜನ ಇದಾರೆ ಹೇಳಿ ಎಂದು ಪ್ರಶ್ನಿಸಿದರು.
ಅವರಿಗೆ ಮಾಹಿತಿ ಇದ್ದರೆ ಹೇಳಲಿ, ಸರ್ವೆ ಮಾಡಿಸೋಣ. ಎಟಿಆರ್ನಲ್ಲಿ ಆಗಲ್ಲ, ಏರ್ ಬಸ್ ಬೇಕು ಎಂದಾದರೆ ಆಗ ಯೋಚನೆ ಮಾಡೋಣ. ಗಾಲ್ಫ್ ಕ್ಲಬ್ ವಿಚಾರದಲ್ಲಿ ಯಾವ ಗ್ರಾಮದ ಭೂಮಿ ಹೋಗುತ್ತಿದೆಯೋ ಅಲ್ಲಿಗೆ ಅವರು ಹೋಗಲಿ. ಊರ ದೇವಸ್ಥಾನದ ಮುಂದೆ ನಿಂತು, ನಾನು ನಿಮ್ಮ ಊರಿನ ಜಮೀನಿನಲ್ಲಿ ಗಾಲ್ಫ್ ಕ್ಲಬ್ ಮಾಡಬೇಕು ಎಂದು ಹೇಳಿ. ರೈತರು ಭೂಮಿ ಕೊಟ್ಟರೆ ತಗೊಳೋಕೆ ಹೇಳಿ ನನ್ನದೇನು ಅಭ್ಯಂತರ ಇಲ್ಲಾ ಎಂದು ವ್ಯಂಗ್ಯವಾಡಿದರು.
ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ