Dowry Harassment: ಹಾಸನದಲ್ಲಿ ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು

| Updated By: ಸಾಧು ಶ್ರೀನಾಥ್​

Updated on: Dec 22, 2021 | 7:49 AM

ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಆರೋಪದಲ್ಲಿ ಕೇಸ್ ದಾಖಲಾಗಿದೆ.

Dowry Harassment: ಹಾಸನದಲ್ಲಿ ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು
ಹಾಸನ: ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು
Follow us on

ಹಾಸನ: ಮದುವೆಯಾದ ಮೂರನೇ ವಾರಕ್ಕೆ ಮದುಮಗಳು ಸಾವಿಗೀಡಾಗಿದ್ದಾಳೆ. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಆ ಮದುಮಗಳ ಪೋಷಕರು ಆರೋಪ ಮಾಡಿದ್ದಾರೆ. ಹಾಸನದ ಸಲೀಂ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಫಿಜಾ ಖಾನಂ (22) ಮೃತ ಮಹಿಳೆ. ಡಿಸೆಂಬರ್ 2 ರಂದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ಅವಿರಿಬ್ಬರಿಗೂ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆ ಫಿಜಾ ಖಾನಂ ಅನುಮಾನಾಸ್ಪದ ಸಾವು ಕಂಡಿದ್ದಾಳೆ.

ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಆರೋಪದಲ್ಲಿ ಕೇಸ್ ದಾಖಲಾಗಿದೆ. ಅಳಿಯ ಶಾಗಿಲ್ ಅಹಮದ್ ಸೇರಿದಂತೆ ಆತನ ಸಹೋದರರು ಮತ್ತು ಶಾಗಿಲ್ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೆನ್ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದ್ದು ಗುಂಡುಗಳಿಂದ ಕೌಟುಂಬಿಕ ಕಲಹ
ಬೆಂಗಳೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಮದ್ದುಗುಂಡು ಕಾರಣವೆಂಬ ಅಪನಂಬಿಕೆ ಸೃಷ್ಟಿಯಾಗಿದೆ. ಮನೆಯಲ್ಲಿದ್ದ ಮದ್ದು ಗುಂಡುಗಳಿಂದ ಕೌಟುಂಬಿಕ ಕಲಹವೆಂದು ಮದ್ದು ಗುಂಡುಗಳನ್ನು ಗುಂಡಿ ತೋಡಿ ಮಹಿಳೆ ಹೂತಿಟ್ಟ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆ ಮದ್ದು ಗುಂಡುಗಳನ್ನು ಹೂತಿಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿಗೆ ಒಂದು ಮದ್ದು ಗುಂಡು ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆದಿದ್ದು ಈ ವೇಳೆ ಮತ್ತೊಂದು ಮದ್ದು ಗುಂಡು ಪತ್ತೆಯಾಗಿತ್ತು.

ಬಳಿಕ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಮಹಿಳೆಯೊಬ್ಬರು ಗುಂಡು ಹೂತಿಟ್ಟಿರುವುದು ಪತ್ತೆಯಾಗಿದೆ. ಏರ್ ಪೋರ್ಸ್ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿಯಾಗಿರುವ ಮಹಿಳೆಯನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತಿಯ ಬಳಿ ಲೈಸೆನ್ಸ್ ಗನ್ ಇತ್ತು, ಅದನ್ನು ಮಾರಿದ್ದರು. ಆದರೆ ಮದ್ದು ಗುಂಡುಗಳು ಮಾತ್ರ ಮನೆಯಲ್ಲಿಯೇ ಇತ್ತು. ಅದರಿಂದ ನನ್ನ ಪುತ್ರನ ಸಾಂಸಾರಿಕ ಜೀವನ ಹಾಳಾಗಿತ್ತು. ಹೀಗಾಗಿ ಆ ಮದ್ದು ಗುಂಡು ಹೂತಿಟ್ಟಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ:
ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇದನ್ನು ಬಳಸುವ ಕ್ರಮ ಹೀಗಿದೆ ನೋಡಿ

Women Health: ಮಹಿಳೆಯರಲ್ಲಿನ ಈ ನಾಲ್ಕು ಆರೋಗ್ಯ ಸಮಸ್ಯೆಗಳಿಗೆ ಹಸಿ ಈರುಳ್ಳಿ ಸೇವನೆಯಿಂದ ಸಿಗಲಿದೆ ಪರಿಹಾರ!

Published On - 7:45 am, Wed, 22 December 21