ಹಾಸನ: ಫಸಲಿಗೆ ಬಂದಿದ್ದ 500ಕ್ಕೂ ಹೆಚ್ಚು ಅಡಕೆ ಗಿಡಗಳನ್ನ ಕಡಿದು ನಾಶ ಪಡಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಜ್ಜೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ವೀರಲಿಂಗೇಗೌಡ ಎಂಬುವವರಿಗೆ ಸೇರಿದ ಅಡಕೆ ಗಿಡಗಳನ್ನ ಕಡಿದು ದುಷ್ಕರ್ಮಿಗಳು ನೆಲಸಮ ಮಾಡಿದ್ದಾರೆ. ಅಡಕೆ ಗಿಡಗಳನ್ನ ನೆಟ್ಟು ಆರು ವರ್ಷಗಳಾಗಿತ್ತು. ಫಸಲು ಬರ್ತಾಯಿತ್ತು. ಆದರೆ ಕಿಡಿಗೇರಿಗಳು ಫಸಲು ಕೈ ಸೇರುವ ಮೊದಲೇ ನಾಶಪಡಿಸಿದ್ದಾರೆ. ಒಂದು ವಾರದ ಹಿಂದೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ (ಡಿ.31) ಅಡಕೆ ಗಿಡಗಳಿಗೆ ನೀರು ಹಾಕಲು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಹಳೇಬೀಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೇಲೂರು ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪಿ.ರಂಗನಾಥಪುರದಲ್ಲಿ ಕಿಡಿಗೇಡಿಗಳು ದ್ರಾಕ್ಷಿ ಬೆಳೆ ನಾಶ ಮಾಡಿದ್ದರು ದುಷ್ಕರ್ಮಿಗಳು ರೈತ ಕೆಂಪೇಗೌಡ ಎಂಬುವವರಿಗೆ ಸೇರಿದ ಸುಮಾರು 3 ಎಕರೆ ಪ್ರದೇಶದಲ್ಲಿ ಒಂದೂವರೆ ಎಕರೆ ದ್ರಾಕ್ಷಿ ಗಿಡಗಳನ್ನು ಕತ್ತರಿಸಿ ಹೋಗಿದ್ದರು. ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಲ ಮಾಡಿ ದ್ರಾಕ್ಷಿ ಗಿಡ ಬೆಳೆದಿದ್ದ ರೈತ ಕಂಗಾಲಾಗಿದ್ದಾರೆ.
ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಸಂಪೂರ್ಣ ನೀರು ಪಾಲಾಗಿತ್ತು. ಬದುಕು ನಡೆಸುವುದು ಹೇಗೆ ಅಂತ ರೈತರು ಕಂಗಾಲಾಗಿದ್ದರು. ಈ ನಡುವೆ ಕಿಡಿಗೇಡಿಗಳು ಅಮಾನವೀಯತೆ ಮೆರೆದು ಅಡಕೆ ಬೆಳೆ ನಾಶಪಡಿಸಿದ್ದಾರೆ.
ಇದನ್ನೂ ಓದಿ
ಮತ್ತೊಮ್ಮೆ ಲಾಕ್ಡೌನ್ ಹೇರುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಮುಖ್ಯಮಂತ್ರಿಯದು; ಮಹಾರಾಷ್ಟ್ರ ಸಚಿವ
ಅದ್ಭುತ ಉದ್ಯಾನವನದಿಂದ ಕೂಡಿದೆ ಅಮೀನಗಡ ಪೊಲೀಸ್ ಠಾಣೆ; ಪರಿಸರ ಕಾಳಜಿಗೆ ಜನರಿಂದ ಮೆಚ್ಚುಗೆ
Published On - 10:31 am, Sat, 1 January 22