ಮತ್ತೊಮ್ಮೆ ಲಾಕ್ಡೌನ್ ಹೇರುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಮುಖ್ಯಮಂತ್ರಿಯದು; ಮಹಾರಾಷ್ಟ್ರ ಸಚಿವ
ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ಕೊವಿಡ್ 19 ಸೋಂಕಿತರ ಸಂಖ್ಯೆ ಏರುತ್ತಿದೆ. ದಿನದಲ್ಲಿ ದಾಖಲಾಗುವ ಕೇಸ್ಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಒಂದೊಂದೇ ರಾಜ್ಯವಾಗಿ ಮತ್ತೆ ಕೊರೊನಾ ಕೇಸ್(Corona Cases)ಗಳು ಹೆಚ್ಚುತ್ತಿವೆ. ಜತೆಗೆ ಒಮಿಕ್ರಾನ್ ಭೀತಿಯೂ ಕಾಡುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ದೆಹಲಿಗಳಲ್ಲಿ ಕೊರೊನಾ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ಮಧ್ಯೆ ಮಹಾರಾಷ್ಟ್ರ (Maharashtra) ಸಚಿವರೊಬ್ಬರು ಮತ್ತೊಮ್ಮೆ ಲಾಕ್ಡೌನ್(Lockdown) ಸೂಚನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದೆ. ಮತ್ತೆ ಲಾಕ್ಡೌನ್ ಹೇರುವ ಕಾಲ ಸಮೀಪಿಸುತ್ತಿದೆ. ಆದರೆ ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ಕೊವಿಡ್ 19 ಸೋಂಕಿತರ ಸಂಖ್ಯೆ ಏರುತ್ತಿದೆ. ದಿನದಲ್ಲಿ ದಾಖಲಾಗುವ ಕೇಸ್ಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ಜನವರಿ 7ರವರೆಗೂ ಸೆಕ್ಷನ್ 144 ಜಾರಿಯಲ್ಲಿದೆ. ಇನ್ನು ಮಹಾರಾಷ್ಟ್ರದಾದ್ಯಂತ ಯಾವುದೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಾರಂಭ ನಡೆಸಿದರೂ 50 ಜನ ಮಾತ್ರ ಸೇರಬಹುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಜನ ಪಾಲ್ಗೊಳ್ಳಬಹುದು ಎಂದು ನಿರ್ಬಂಧ ವಿಧಿಸಲಾಗಿದೆ.
ಹೊಸವರ್ಷದ ಮುನ್ನಾದಿನವೇ ಮುಂಬೈ ಪೊಲೀಸ್ ಆಯುಕ್ತರು ಸೆಕ್ಷನ್ 144 ಹೇರಿದ್ದಾರೆ. ಕಡಲತೀರಗಳು, ತೆರೆದ ಮೈದಾನಗಳು, ಉದ್ಯಾನಗಳು ಮತ್ತು ಅಂಥ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಜನರು ಮುಂಜಾನೆ 5ರಿಂದ ಸಂಜೆ 5ರವರೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿದ್ದಾರೆ. ಈ ಆದೇಶ ಜನವರಿ 15ರವರೆಗೂ ಇರಲಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 8067 ಕೊರೊನಾ ಕೇಸ್ಗಳು ದಾಖಲಾಗಿವೆ. ಗುರುವಾರ 2699 ಪ್ರಕರಣಗಳು ದಾಖಲಾಗಿದ್ದವು. ಒಂದೇ ದಿನದಲ್ಲಿ 600ರಷ್ಟು ಹೆಚ್ಚಳಗೊಂಡಿದ್ದು ಸಹಜವಾಗಿಯೇ ಆತಂಕ ಮೂಡಿಸಿದೆ. ಶುಕ್ರವಾರದ 8067ಕೇಸ್ಗಳಲ್ಲಿ ಮುಂಬೈ ಒಂದರಲ್ಲೇ 5428 ಕೇಸ್ಗಳು ದಾಖಲಾಗಿವೆ. ಹಾಗೇ, ನಿನ್ನೆ 4 ಒಮಿಕ್ರಾನ್ ಕೇಸ್ಗಳೂ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸದ್ಯ 454 ಒಮಿಕ್ರಾನ್ ಸೋಂಕಿತರು ಇದ್ದು, 157 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. 26 ಜನ ಈ ರಾಜ್ಯದವರು ಅಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ ಶರ್ಮಾ? ಕಂಬ್ಯಾಕ್ ಮಾಡಿದ ಕೊಹ್ಲಿ ಪತ್ನಿ