ಮಾಜಿ ಆಪ್ತರಿಂದಲೇ ಪ್ರಜ್ವಲ್​​ ರೇವಣ್ಣಗೆ ಖೆಡ್ಡಾ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮಾಜಿ ಆಪ್ತರಾದ ನವೀನ್ ಗೌಡ, ಕಾರ್ತಿಕ್, ಚೇತನ್ ಮತ್ತು ಹರೀಶ್ ಅವರೇ ವಿಡಿಯೋ ವೈರಲ್ ಹಿಂದಿನ ಪ್ರಮುಖ ರೂವಾರಿಗಳು. ಪ್ರಜ್ವಲ್ ಮೊಬೈಲ್‌ನಿಂದ ವಿಡಿಯೋ ಕದ್ದಿದ್ದ ಕಾರ್ತಿಕ್​​, ಇತರರೊಂದಿಗೆ ಸೇರಿ ಪೆನ್‌ಡ್ರೈವ್‌ಗಳನ್ನು ವಿತರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರ ಮಾಜಿ ಆಪ್ತರೇ ಖೆಡ್ಡಾ ತೋಡಿದ್ದು ಸ್ಪಷ್ಟವಾಗಿದೆ.

ಮಾಜಿ ಆಪ್ತರಿಂದಲೇ ಪ್ರಜ್ವಲ್​​ ರೇವಣ್ಣಗೆ ಖೆಡ್ಡಾ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​
ಪ್ರಜ್ವಲ್​​ ರೇವಣ್ಣ
Image Credit source: google
Edited By:

Updated on: Mar 18, 2026 | 3:34 PM

ಹಾಸನ, ಮಾರ್ಚ್​​ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಇರುವ ಪೆನ್​​ಡ್ರೈವ್​​ ಹಂಚಿಕೆ ಪ್ರಕರಣ ಸಂಬಂಧ 2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಎಸ್​​ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಹಾಸನದ ಸಿವಿಲ್​​ ಕೋರ್ಟ್​​ಗೆ ಸಲ್ಲಿಸಲಾಗಿರುವ ಒಟ್ಟು 13,712 ಪುಟಗಳ ಚಾರ್ಜ್​​ಶೀಟ್​​ನಲ್ಲಿ ಕೆಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ.

ಮಾಜಿ ಆಪ್ತರೇ ತೋಡಿದ್ದ ಖೆಡ್ಡಾಗೆ ಪ್ರಜ್ವಲ್​​ ರೇವಣ್ಣ ಬಿದ್ದಿದ್ದಾರೆ. ಹಲವು ವರ್ಷಗಳ ಕಾಲ ಇದೇ ಪ್ರಜ್ವಲ್ ಜೊತೆಯಲ್ಲೇ ಇದ್ದ ನವೀನ್ ಗೌಡ, ಕಾರ್ತಿಕ್, ಚೇತನ್ ಹಾಗೂ ಹರೀಶ್ ಮಾಜಿ ಸಂಸದನ ವಿಡಿಯೋ ವೈರಲ್​​ ಹಿಂದಿನ ಪ್ರಮುಖ ರೂವಾರಿಗಳು. ಪ್ರಜ್ವಲ್​​ ಕುರಿತು ಎಲ್ಲ ಮಾಹಿತಿ ಗೊತ್ತಿದ್ದ ಕಾರು ಚಾಲಕ ಕಾರ್ತಿಕ್​​, ಮೊಬೈಲ್​​ನಿಂದ ವಿಡಿಯೋ ಕದ್ದಿದ್ದ. ರೇವಣ್ಣ ಕುಟುಂಬದ ವ್ಯವಹಾರ ಆಡಿಟಿಂಗ್​​ ಕೆಲಸವನ್ನು ನವೀನ್​​ ಮಾಡುತ್ತಿದ್ದರೆ, ಇತ್ತ ಜೆಡಿಎಸ್​​ನಲ್ಲಿಯೇ ಇದ್ದ ಚೇತನ್​​ ತನಗೆ ಹಾಗೂ ತಾಯಿಗೆ ಚುನಾವಣೆಯಲ್ಲಿ ಸಹಾಯ ಮಾಡಲಿಲ್ಲ ಎಂದು ಪಕ್ಷ ತೊರೆದಿದ್ದ. ಪ್ರಜ್ವಲ್​​ ಜೊತೆ ಗುರುತಿಸಿಕೊಂಡಿದ್ದ ಈತ ಬೇಲೂರು ಯುವ ಜೆಡಿಎಸ್ ಅಧ್ಯಕ್ಷನೂ ಆಗಿದ್ದ. 2019ರಲ್ಲಿ ನವೀನ್​​ ಕಾಂಗ್ರೆಸ್​​ ಸೇರಿದ್ದರೆ, 2020ರಲ್ಲಿ ಚೇತನ್​​ ‘ಕೈ’ ಹಿಡಿದಿದ್ದ. ಈ ಇಬ್ಬರ ಜೊತೆ ಹರೀಶ್​​ ಕೂಡ ಪ್ರಜ್ವಲ್​​ ರೇವಣ್ಣ ಕಾರು ಚಾಲಕ ಕಾರ್ತಿಕ್​​ ಜೊತೆ ಆತ್ಮೀಯತೆ ಹೊಂದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ವೈರಲ್ ಪ್ರಕರಣ; ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?

ಪ್ರಜ್ವಲ್​ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರೋದಾಗಿ ದೇವರಾಜೇಗೌಡ ಸುದ್ದಿಗೊಷ್ಠಿ ನಡೆಸಿ ಆರೋಪಿಸಿದ ಬಳಿಕ ಚೇತನ್, ನವೀನ್ ಹಾಗೂ ಹರೀಶ್ ಸೇರಿಕೊಂಡು ಕಾರ್ತಿಕ್​​ ಸಂಪರ್ಕ ಮಾಡಿದ್ದರು. ಆ ಬಳಿಕ ಪೆನ್​​ಡ್ರೈವ್​​ ಖರೀದಿಸಿ ಅದರಲ್ಲಿ ಆಸ್ಲೀಲ ವಿಡಿಯೋಗಳನ್ನು ತುಂಬಿ ಜೆಡಿಎಸ್​​ನ ಮಾಜಿ ಕಾರ್ಯಕರ್ತರೇ ಹಂಚಿಕೆ ಮಾಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಈ ಪ್ರಕರಣದಲ್ಲಿ, ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ಪ್ರಾಥಮಿಕ ಆರೋಪಗಳ ಪ್ರಕಾರ, ಶರತ್, ಕಿರಣ್ ಮತ್ತು ಪುಟ್ಟರಾಜು ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪೆನ್ ಡ್ರೈವ್ ವೀಡಿಯೋಗಳ ಹಂಚಿಕೆಯಲ್ಲಿ ಮತ್ತು ಅವುಗಳನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ತನಿಖೆಯಲ್ಲಿ ಇವರು ಯಾವುದೇ ವೈರಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿರೋದಾಗಿ ಎಸ್​​ಐಟಿ ಉಲ್ಲೇಖಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us