ಹಾಸನ: ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ನಿನ್ನೆ(ಮೇ.29) ಜಿಲ್ಲೆಯ ಬೇಲೂರು(Belur) ತಾಲ್ಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆ(Rain)ಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಹೌದು ಭಾರಿ ಮಳೆ, ಬಿರುಗಾಳಿಗೆ ವಿದ್ಯುತ್ ಕಂಬಗಳು, ಬೃಹತ್ ಮರಗಳು, ಬಾಳೆ ಗಿಡಗಳು ನೆಲಕ್ಕುರಳಿದ್ದು. ವಾಸದ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಬೇಲೂರು, ಚೀಕನಹಳ್ಳಿ,, ಮೂಡಿಗೆರೆ ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು, ಮೂರು ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿವೆ. ಜೊತೆಗೆ ಧರ್ಮೇಗೌಡ ಎಂಬುವವರ ಜಮೀನಿನಲ್ಲಿದ್ದ ನೂರಾರು ಬಾಳೆಗಿಡಗಳು ಬಿದ್ದಿದ್ದು, ರೈತ ಕಂಗಲಾಗಿದ್ದಾನೆ.
ಇನ್ನು ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ನೆಲಕ್ಕುರುಳಿದ ಮರಗಳನ್ನು ಸಾರ್ವಜನಿಕರು ತೆರವುಗೊಳಿಸುತ್ತಿದ್ದಾರೆ. ಇಷ್ಟೇಲ್ಲ ಅಪಾರ ಹಾನಿ ಸಂಭವಿಸಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸಿದ್ದಾರೆ. ಇವರ ಈ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:Karnataka Rain Photos: ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳ ಮಳೆ ಅವಾಂತರ ಫೋಟೋಗಳು ಇಲ್ಲಿವೆ
ಬಿರುಗಾಳಿ, ಮಳೆಗೆ ಮೇಲ್ಚಾವಣಿ ಕುಸಿತ; ದೃಷ್ಟವಶಾತ್ ತಪ್ಪಿದ ಬಾರಿ ಅನಾಹುತ
ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ನಿನ್ನೆ(ಮೇ.29) ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಎಂ.ಡಿ.ಕೋಟೆಯಲ್ಲಿ ಮೇಲ್ಚಾವಣಿ ಕುಸಿತವಾಗಿದರೇ, ಬಸಪ್ಪನಮಾಳಿಗೆಯಲ್ಲಿ ಮನೆಯ ಶೀಟುಗಳು ಗಾಳಿಗೆ ಹಾರಿವೆ. ಸದ್ಯ ಮನೆಗಳಲ್ಲಿದ್ದ ನಿವಾಸಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೊಪ್ಪಳದಲ್ಲಿ ಗಾಳಿ ಮಳೆಗೆ ನೆಲಕ್ಕುರಳಿದ ಮರಗಳು
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನಮಸಾಗರ ಗ್ರಾಮದ ವಾರ್ಡ್ ನಂಬರ್ ಒಂದರಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಿಡಗಳು ನೆಲಕ್ಕೆ ಉರುಳಿದಿವೆ. ಇದರ ಪರಿಣಾಮ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಕೆಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.
ಬಿರುಗಾಳಿ ಮಳೆ ಅವಾಂತರದ ಎಫೆಕ್ಟ್; ಪ್ರಸಿದ್ದ KRS ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ
ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ ಸುರಿದ ಬಿರುಗಾಳಿ ಮಳೆ ಅವಾಂತರದ ಪರಿಣಾಮದಿಂದ ಪ್ರಸಿದ್ದ KRS ಬೃಂದಾವನಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಹೌದು ಮರ ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದ ಹಿನ್ನಲೆ KRS ಬೃಂದಾವನ,
ಕಾವೇರಿ ನೀರಾವರಿ ನಿಗಮದಿಂದ ಪ್ರವಾಸಿಗರಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇಂದು(ಮೇ.30) ಬೃಂದಾವನದಲ್ಲಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ, ಉರುಳಿ ಬಿದ್ದ ಮರಗಳು ತೆರವು ಕಾರ್ಯಾ ನಡೆಯಲಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Tue, 30 May 23