ಮಳೆ ಅವಾಂತರ : ಬೆಂಗಳೂರಿನ ಹಲವು ಏರಿಯಾಗಳಲ್ಲಿ ಉಂಟಾಗಲಿದೆ ವಿದ್ಯುತ್​ ವ್ಯತ್ಯಯ

ಬೆಂಗಳೂರಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಗೆ ಕಾಡುಬೀಸನಹಳ್ಳಿಯ ಪವರ್‌ ಸ್ಟೇಷನ್​ಗೆ ಮಳೆ ನೀರು ನುಗ್ಗಿದೆ. ಹೀಗಾಗಿ ಸುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಮಳೆ ಅವಾಂತರ : ಬೆಂಗಳೂರಿನ ಹಲವು ಏರಿಯಾಗಳಲ್ಲಿ ಉಂಟಾಗಲಿದೆ ವಿದ್ಯುತ್​ ವ್ಯತ್ಯಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 07, 2022 | 4:37 PM

ಬೆಂಗಳೂರು: ನಗರದಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಗೆ ಕಾಡುಬೀಸನಹಳ್ಳಿಯ ಪವರ್‌ ಸ್ಟೇಷನ್​ಗೆ (Power Station) ಮಳೆ ನೀರು ನುಗ್ಗಿದೆ. ಹೀಗಾಗಿ ಸುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ವೈಟ್ ಫೀಲ್ಡ್, ಸರ್ಜಾಪುರ, ಕೋರಮಂಗಲ, ಹೊಸಕೋಟೆ, ಕೆ.ಆರ್,ಪುರ, ಬಾಣಸವಾಡಿ ಸೇರಿದಂತೆ ಹಲವು ಏರಿಯಾಗಳಿಗೆ ವಿದ್ಯುತ್​ ವ್ಯತ್ಯಯ ಆಗಲಿದೆ.

ಸದ್ಯ ಬೇರೆ ವಿದ್ಯುತ್‌ ಕೇಂದ್ರಗಳಿಂದ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪವರ್‌ ಸ್ಟೇಷನ್‌ ಅಧಿಕಾರಿಗಳು ಮುಂದಾಗಿದ್ದಾರೆ.BWSSB ಕೊಳಚೆ ನೀರು ಶುದ್ದೀಕರಣ ಘಟಕದ ನೀರು ಉಕ್ಕಿ ಹರಿದ ಪರಿಣಾಮ ಏಕಾಏಕಿ ಬೆಸ್ಕಾಂ ಪವರ್‌ ಸ್ಟೇಷನ್​ಗೆ ನೀರು ನುಗ್ಗಿತ್ತು. ಹೀಗಾಗಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಶೀಘ್ರವೇ ವಿದ್ಯುತ್ ಸರಬರಾಜು ಮಾಡಲಾಗುವುದು. ಕಾಡುಬೀಸನಹಳ್ಳಿಯ ಪವರ್‌ ಸ್ಟೇಷನ್‌ ಸರಿಯಾಗಲು ಇನ್ನು 4 ದಿನ ಬೇಕಾಗುತ್ತೆ ಎಂದು ಟಿವಿ9ಗೆ ಬೆಸ್ಕಾಂನ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ