Umesh Katti: ಉಮೇಶ್ ಕತ್ತಿ ಗೌರವಾರ್ಥ ಶೋಕಾಚರಣೆ 3 ದಿನಗಳಿಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ
ಅರಣ್ಯ ಸಚಿವ ಉಮೇಶ್ ಕತ್ತಿ ಸೆ.6ರಂದು ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಕತ್ತಿ ಗೌರವಾರ್ಥ ಶೋಕಾಚರಣೆ 3 ದಿನಗಳಿಗೆ ವಿಸ್ತರಿಸಿ ರಾಕ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಅರಣ್ಯ ಸಚಿವ ಉಮೇಶ್ ಕತ್ತಿ ಸೆ.6ರಂದು ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಕತ್ತಿ ಗೌರವಾರ್ಥ ಶೋಕಾಚರಣೆ 3 ದಿನಗಳಿಗೆ ವಿಸ್ತರಿಸಿ ರಾಕ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಖುದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮಾಹಿತಿ ನೀಡಿದ್ದಾರೆ. ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಿಎಂ ಬೊಮ್ಮಾಯಿ ಆತ್ಮೀಯ ಸ್ನೇಹಿತ, ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ, ರಾಜ್ಯ ಕಂಡ ಧೀಮಂತ ನಾಯಕ ಉಮೇಶ್ ಕತ್ತಿ ಎಂದು ಭಾವುಕರಾಗಿ ನುಡಿದರು.
ಅತ್ಯಂತ ಭಾರವಾದ ಮನಸ್ಸಿನಿಂದ ಬೆಳಗಾವಿಗೆ ಬಂದಿದ್ದೇನೆ, ಇವತ್ತು ಉಮೇಶ್ ಕತ್ತಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ತಿಳಿಸಿದರು.
Published On - 6:03 pm, Wed, 7 September 22