ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಂದ ಪತ್ನಿ

ಮಹಿಳೆಯೊಬ್ಬಳಿಗೆ ಮದುವೆಯಾಗಿದ್ದು, ಆದರೂ ಆಕೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಅಲ್ಲೇ ಮದುವೆ ಮಾಡಿಕೊಳ್ಳುವಂತೆ ಪ್ರಿಯಕರನಿಗೆ ಒತ್ತಾಯಿಸಿದ್ದಾಳೆ. ಆದ್ರೆ, ಇಬ್ಬರ ಮಹಿಳೆ ಗಂಡ ಅಡ್ಡಿಯಾಗಿದ್ದಾನೆ. ಇದರಿಂದ ತಲೆಕೆಟ್ಟು ಪ್ಲ್ಯಾನ್ ಮಾಡಿ ಮಹಿಳೆ ತಾಳಿ ಕಟ್ಟಿದ್ದ ತನ್ನ ಗಂಡನನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಂದ ಪತ್ನಿ
ಮುಬಾರಕ್(ಪ್ರಿಯಕರ), ಶಹೀನಾಬಾನು, ಶಫಿವುಲ್ಲಾ ಅಬ್ದುಲ್ ಮಹೀಬ್(ಕೊಲೆಯಾದವ)
Edited By:

Updated on: Jul 31, 2025 | 9:00 PM

ಹಾವೇರಿ, (ಜುಲೈ 31): ಅಕ್ರಮ ಸಂಬಂಧಕ್ಕೆ (Illicit Relationship) ಅಡ್ಡಿಯಾಗಿದ್ದಾನೆಂದು ಪತ್ನಿಯೇ(Wife) ಪ್ರಿಯಕರನ (Lover) ಜೊತೆ ಸೇರಿಕೊಂಡು ಪತಿಯನ್ನೇ (Husband) ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಹಾವೇರಿಯ (Haveri) ರಟ್ಟಿಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹರಿಹರ ಮೂಲದ ಶಫಿವುಲ್ಲಾ ಅಬ್ದುಲ್ ಮಹೀಬ್ (38) ಕೊಲೆಯಾದ ಪತಿ ಎಂದು ಗುರುತಿಸಲಾಗಿದೆ.  ತಮ್ಮಿಬ್ಬರ ಲವ್ವಿಡವ್ವಿಗೆ ಅಡ್ಡಿಯಾಗಿದ್ದಾನೆಂದು ಶಫಿವುಲ್ಲಾ ಅಬ್ದುಲ್ ಮಹೀಬ್ ನನ್ನು ಕರೆಗೆ ತಳ್ಳಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಿದ್ದರು. ಆದರೆ, ಪೊಲೀಸತ ತನಿಖೆ ವೇಳೆ ಪತ್ನಿ ಶಹೀನಾಬಾನು ಹಾಗೂ ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್‌ನ ನೌಟಂಕಿ ಆಟ ಬಯಲಿಗೆ ಬಿದ್ದಿದೆ.

ಮುಬಾರಕ್ ಖಲಂದರಸಾಬ್ ಮತ್ತು ಶಹೀನಾಬಾನು ಮಧ್ಯೆ ಅನೈತಿಕ ಸಂಬಂಧ ಇತ್ತು. ಮುಬಾರಕ್ ಖಲಂದರಸಾಬ್‌ನನ್ನು ಮದುವೆ ಆಗುವಂತೆ ಶಹೀನಾಬಾನು ಪೀಡಿಸುತ್ತಿದ್ದಳು. ನಮ್ಮಿಬ್ಬರ ಮದುವೆಗೆ ನಿನ್ನ ಪತಿ ಅಡ್ಡಿಯಾಗಿದ್ದಾನೆಂದು ಹೇಳಿದ್ದ. ಹೀಗಾಗಿ ಇಬ್ಬರೂ ಸೇರಿ ಶಫೀವುಲ್ಲಾನ ಹತ್ಯೆಗೆ ಸಂಚು ರೂಪಿಸಿದ್ದರು. ಬಳಿಕ ಮುಬಾರಕ್ ಖಲಂದರಸಾಬ್, ಶಫೀವುಲ್ಲಾ ಜೊತೆ ಗೆಳೆತನ ಬೆಳಸಿ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಅದರಂತೆ ಜುಲೈ 27ರಂದು ಕೆರೆ ನೋಡಲು ಹೋಗೋಣ ಎಂದು ಪುಸಲಾಯಿಸಿ ಶಫೀವುಲ್ಲಾನನ್ನು ಕೆರೆ ಕಡೆ ಕರೆದುಕೊಂಡು ಹೋಗಿದ್ದು, ಅಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

ಇದನ್ನೂ ಓದಿ: ತಾಳಿ ಕಟ್ಟುವ ಮುನ್ನವೇ ತಾಯಿಯಾಗಿದ್ದ ಯುವತಿ ದುರಂತ ಅಂತ್ಯ

ಬಳಿಕ ಶಫೀವುಲ್ಲಾನನ್ನು ಕೆರೆಗೆ ತಳ್ಳಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ, ದೇಹದಲ್ಲಿ ಗಾಯಗಳಿರುವುದು ಕಂಡು ಅನುಮಾನ ಮೂಡಿತ್ತು. ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ಈ ವೇಳೆ ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಹಿರೇಕೆರೂರು ಪೊಲೀಸರು, ಆರೋಪಿಗಳಾದ ಪತ್ನಿ ಶಹೀನಾಬಾನು ಹಾಗೂ ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us