ಹಾಸನದಲ್ಲಿ ಮೆಕ್ಯಾನಿಕ್ ಹತ್ಯೆ: ಬಳಿಕ ಶವದೊಂದಿಗೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕರು

ಹಾಸನ ಜಿಲ್ಲೆಯಲ್ಲಿ ಗಾಂಜಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಮಲಿನಲ್ಲಿದ್ದ ಯುವಕನೊಬ್ಬ ಇನ್ನೊಬ್ಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಗಾಂಜಾದ ನಶೆಯಲ್ಲಿ ಕೊಲೆ ಮಾಡಿದ ಕಿರಾತಕ, ಕೃತ್ಯದ ನಂತರ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಸನದಲ್ಲಿ ಮೆಕ್ಯಾನಿಕ್ ಹತ್ಯೆ: ಬಳಿಕ ಶವದೊಂದಿಗೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕರು
Kirthi
Updated By: ರಮೇಶ್ ಬಿ. ಜವಳಗೇರಾ

Updated on: Dec 09, 2025 | 4:36 PM

ಹಾಸನ, (ಡಿಸೆಂಬರ್ 09): ಹಾಸನ  ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಸನ (Hassan) ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್  ಕೀರ್ತಿ(22) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ (Murder) ಮಾಡಲಾಗಿದ್ದು, ಬಳಿಕ ಹಂತಕರು ಶವ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಶವದೊಂದಿಗೆ ಸೆಲ್ಫಿ ವಿಡಿಯೋ  (selfie video ) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದೇ ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎ‌ಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಡಿಯೋ ವೈರಲ್ ಬಳಿಕ ಕೊಲೆ ಬಯಲಿಗೆ

ಆತ ವೃತ್ತಿಯಲ್ಲಿ ವ್ಯಕ್ಯಾನಿಕ್ ಆಗಿದ್ದ. ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನಿದ್ದವನು. ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡ್ತಾ ಇದ್ದವನು ನಿನ್ನೆ (ಡಿಸೆಂಬರ್ 08) ಎಷ್ಟೊತ್ತಾದ್ರು ಮನೆಗೆ ಬಂದಿಲ್ಲ ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಿಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ. ಕ್ರೂರಿಯೊಬ್ಬ ಶವದ ಮುಂದೆ ಸೆಲ್ಪೀ ವೀಡಿಯೋ ಮಾಡಿ ನಾವು ಕೊಲೆ ಮಾಡಿದಿವಿ ಸಾಯಿಸಿದ್ದೇವೆ ಎಂದು ಹೇಳುತ್ತ ಕ್ರೌರ್ಯ ಮೆರೆದಿದ್ದಾನೆ. ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಹೋಗಿ ಪಾರ್ಟಿ ಮಾಡಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.

ಇದನ್ನೂ ಓದಿ: ಮದ್ವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ದುರಂತ ಸಾವು: ನಟಿ ಆಶಿಕಾ ರಂಗನಾಥ್ ಸಂಬಂಧಿ ಸಾವಿನ ರಹಸ್ಯ ಬಯಲು

ಕೊಲೆ ಮಾಡಿ ಶವದ ಎದುರೇ ವೀಡಿಯೋ ಮಾಡಿ ಕ್ರೌರ್ಯ

ಕೊಲೆ ಮಾಡಿದ ಬಳಿಕ  ಮನುಷ್ಯತ್ವ ಮರೆತ ಕ್ರೂರಿಯೊಬ್ಬ ನಾವು ಹೊಡೆದಿದ್ದೇವೆ. ನಾವು ಇವನನ್ನ ಸಾಯಿಸಿದ್ದೇವೆ ಎಂದು ವಿಕೃತ ಆನಂದಪಟ್ಟಿದ್ದಾರೆ. ಇನ್ನು ಮತ್ತೊಂದು ವೀಡಿಯೋದಲ್ಲಿ ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನ ಸಂಭ್ರಮಿಸಿದ್ದಾರೆ.ಕೊಲೆ ಮಾಡಿ ನಾವು ದೊಡ್ಡವರಾದ್ವಿ ನಾವೂ ಬೆಳೆದ್ವಿ ಎಂದು ಹೇಳುತ್ತಾ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ಅಮಲಿನಲ್ಲಿ ಪುಂಡರ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಹೀಗಾಗಿ ಈ ಹತ್ಯೆ ವಿಡಿಯೋ ಹಾಸನದಾದ್ಯಂತ ವೈರಲ್ ಆಗಿದ್ದು, ಜನರನ್ನ ಬೆಚ್ಚಿಬೀಳೀಸಿದೆ.

ವಿಡಿಯೋ ಮಾಡಿದವನ ಗುರುತು ಪತ್ತೆ

ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಉಲ್ಲಾಸ್ ಹಾಗು ಕೀರ್ತಿ ಎಲ್ಲರೂ ಪರಿಚಿತರಾಗಿದ್ದು, ನಿನ್ (ಡಿಸೆಂಬರ್ 09) ಕೂಡ ಒಟ್ಟಿಗೆ ಇದ್ದವರು ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಆದ್ರೆ ಬಳಿಕ ಏನಾಯ್ತೋ ಏನೋ ಜೊತೆಗೆ ಬಂಧವನನ್ನ ಬಡಿದು ಕೊಂದು ಶವದ ಎದುರು ವೀಡಿಯೋ ಮಾಡಿದ್ದಾರೆ. ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ ಉಲ್ಲಾಸ್ ಒಂದು ವೀಡಿಯೋದಲ್ಲಿ ತಾನೊಬ್ಬನೇ ಇದ್ದರೆ ಇನ್ನೊಂದು ವೀಡಿಯೋದಲ್ಲಿ ಮತ್ತಿಬ್​ಬರು ಇರೋದನ್ನ ತೋರಿಸಿದ್ದಾನೆ. ಜೊತೆಗೇ ತೆರಳಿದ್ದ ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಹಾಸನ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಸೆಲ್ಫಿ ವೀಡಿಯೋ ವೈರಲ್ ಆಗುತ್ತಲೆ ಅಲರ್ಟ್ ಆದ ಪೊಲೀಸರು ವೀಡಿಯೋ ಜಾಡು ಹಿಡಿದು ಪರಿಶೀಲನೆ ನಡಸಿದಾಗ ಶವ ಬಿಟ್ಟಗೌಡನಹಳ್ಳಿ ಬಳಿ ಇರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅದಿಕಾರಿಗಳು, ಸ್ಥಳಕ್ಕೆ ಸೂಕೊ ಟೀಂ, ಶ್ವಾನದಳ, ಬೆರಳಚ್ಚು ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಹಾಸನ ನಗರ ಠಾಣೆ ಪೊಲೀಸರು ಉಲ್ಲಾಸ್​​ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ