ಸುಮಲತಾ ಅಂಬರೀಶ್ ಅವರಿಗೆ ಫೋನ್ ಮಾಡಿಲ್ಲ ಅವಶ್ಯಕತೆ ಬಿದ್ದರೆ ಮಾಡ್ತೀನಿ: ಎನ್ ಚಲುವರಾಯಸ್ವಾಮಿ
ಸಂಸದರು ಬುದ್ಧಿವಂತರು ಮತ್ತು ಈಗ ಬಿಜೆಪಿ ಟಿಕೆಟ್ ಗಾಗಿ ಫೈಟ್ ಬೇರೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ, ಯಾರು ಯಾವುದಕ್ಕೆ ಸೂಟ್ ಅಗುತ್ತಾರೆ ಅಂತ ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳ ಜನ ತೀರ್ಮಾನ ಮಾಡುತ್ತಾರೆ, ನಾನು ಇಲ್ಲಿ ಕೂತ್ಕೊಂಡು ಕುಮಾರಸ್ವಾಮಿ ಆಗಲಿ ಸುಮಲತಾ ಅಗಲಿ ಅಂತ ಹೇಳಿದರೆ ಅದು ನಡೆಯಲ್ಲ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ: ಸಚಿವ ಮತ್ತು ಮಂಡ್ಯ ಭಾಗದ ಪ್ರಮುಖ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ನಡುವೆ ಶೀತಲ ಸಮರ (cold war) ಶುರುವಾದಂತಿದೆ. ಅವರ ಮಾತಿಗೆ ಇವರು, ಇವರ ಹೇಳಿಕೆಗೆ ಅವರು ಕೌಂಟರ್ ನೀಡುವ ಕಾರ್ಯ ಕೆಲದಿನಗಳಿಂದ ಜಾರಿಯಲ್ಲಿದೆ. ಮೊನ್ನೆ ಸುಮಲತಾ ಅವರು ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಬೇಕಿದೆ ಎಂದು ಹೇಳಿದ್ದರು. ಅವರಿಗೆ ಫೋನ್ ಮಾಡಿದ್ರಾ ಸರ್ ಅಂತ ಸಚಿವನನ್ನು ಕೇಳಿದಾಗ, ಇಲ್ಲ ಅವಶ್ಯಕತೆ ಬಿದ್ರೆ ಮಾಡ್ತೀನಿ ಅಂತ ಚುಟುಕಾಗಿ ಹೇಳಿದರು. ಚಲುವರಾಯಸ್ವಾಮಿ ಒಂದು ಸಂದರ್ಭದಲ್ಲಿ ನಾಟಿ ಅಂತ ಶಬ್ದ ಬಳಸಿದ್ದಕ್ಕೆ, ಸುಮಲತಾ ಅವರು ನಾಟಿ ಪಾರ್ಲಿಮೆಂಟ್ ಗೆ ಸೂಟ್ ಆಗಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕೌಂಟರ್ ನೀಡಿದ ಚಲುವರಾಯಸ್ವಾಮಿ, ಸಂಸದರು ಬುದ್ಧಿವಂತರು ಮತ್ತು ಈಗ ಬಿಜೆಪಿ ಟಿಕೆಟ್ ಗಾಗಿ ಫೈಟ್ ಬೇರೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ, ಯಾರು ಯಾವುದಕ್ಕೆ ಸೂಟ್ ಅಗುತ್ತಾರೆ ಅಂತ ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳ ಜನ ತೀರ್ಮಾನ ಮಾಡುತ್ತಾರೆ, ನಾನು ಇಲ್ಲಿ ಕೂತ್ಕೊಂಡು ಕುಮಾರಸ್ವಾಮಿ ಆಗಲಿ ಸುಮಲತಾ ಅಗಲಿ ಅಂತ ಹೇಳಿದರೆ ಅದು ನಡೆಯಲ್ಲ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ