ದೇಶದಲ್ಲಿ ಮಹಾತ್ಮಾ ಗಾಂಧಿಯನ್ನು ಬಿಟ್ಟರೆ ಕುಮಾರಸ್ವಾಮಿ ಮಾತ್ರ ಸತ್ಯವಂತ: ಎನ್ ಚಲುವರಾಯಸ್ವಾಮಿ, ಸಚಿವ
ಅವರು ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಏನೆಲ್ಲ ಮಾತಾಡುತ್ತಿದ್ದರೋ ಈಗಲೂ ಅದನ್ನೇ ಮಾತಾಡುತ್ತಿದ್ದಾರೆ ಅವರು ಹೇಳಿದ್ದೆಲ್ಲ ಕರೆಕ್ಟ್ ನಾವು ಹೇಳೋದು ತಪ್ಪು ಅಂತ ಸಚಿವ ಕುಹಕವಾಡಿದರು. ಅವರಿಗೆ ಯಾರ ಮಾರ್ಗದರ್ಶನವೂ ಬೇಕಿಲ್ಲ, ಒಬ್ಬರೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದರು
ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರಿಗೆ (N Cheluvarayaswamy) ತಮ್ಮ ಹಳೆಯ ದೋಸ್ತಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಮಾತಾಡುವುದೆಂದರೆ ಎಲ್ಲಿಲ್ಲದ ಖುಷಿ. ಕುಮಾರಸ್ವಾಮಿ ಸಹ ಹಾಗೇನೇ! ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಬಗ್ಗೆ ಕೆಳೋದು ಮತ್ತು ಕುಮಾರಸ್ವಾಮಿಗೆ ಸಚಿವನ ಬಗ್ಗೆ ಕೇಳೋದು ಸಹ ಮಾಧ್ಯಮ ಪ್ರತಿನಿಧಿಗಳಿಗೆ ರೂಟೀನ್ ಆಗಿಬಿಟ್ಟಿದೆ. ಇವತ್ತು ಮಂಡ್ಯದಲ್ಲಿ ಪತ್ರಕರ್ತರು ಕುಮಾರಸ್ವಾಮಿಯವರ ಯಾವುದೋ ಒಂದು ಟೀಕೆy ಬಗ್ಗೆ ಕೃಷಿಮಂತ್ರಿಯ ಗಮನ ಸೆಳೆದಾಗ ಅವರು, ಜೆಡಿಎಸ್ ರಾಜ್ಯಾಧ್ಯಕ್ಷನ ಹೆಸರು ಪ್ರಸ್ತಾಪಿಸಿದೆ, ಅವರು ಭಾರಿ ಸತ್ಯವಂತರು, ನಮ್ಮ ದೇಶದಲ್ಲಿ ಮಹಾತ್ಮಾ ಗಾಂಧಿಯವರ (Mahatma Gandhi) ನಂತರ ಯಾರಾದರೂ ಸತ್ಯವಂತರಿದ್ದರೆ ಅದು ಅವರು ಮಾತ್ರ ಎಂದರು. ಅವರು ಬಾಯಿಂದ ಕುಮಾರಸ್ವಾಮಿ ಅನ್ನಿಸಬೇಕೆಂಬ ಉದ್ದೇಶದಿಂದ ಪತ್ರಕರ್ತರೊಬ್ಬರು, ‘ಯಾರು ಸರ್?’ ಅಂತ ಕೇಳಿದಾಗ ತಮ್ಮ ಎಂದಿನ ರಾಜಕೀಯ ಪರಿಣಿತಿ ಪ್ರದರ್ಶಿಸಿದ ಚಲುವರಾಯಸ್ವಾಮಿ, ‘ಅದೇ ನೀವು ಹೇಳಿದ್ರಲ್ಲ, ಅವರೇ’ ಅನ್ನುತ್ತಾರೆ! ಅವರು ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಏನೆಲ್ಲ ಮಾತಾಡುತ್ತಿದ್ದರೋ ಈಗಲೂ ಅದನ್ನೇ ಮಾತಾಡುತ್ತಿದ್ದಾರೆ ಅವರು ಹೇಳಿದ್ದೆಲ್ಲ ಕರೆಕ್ಟ್ ನಾವು ಹೇಳೋದು ತಪ್ಪು ಅಂತ ಸಚಿವ ಕುಹಕವಾಡಿದರು. ಅವರಿಗೆ ಯಾರ ಮಾರ್ಗದರ್ಶನವೂ ಬೇಕಿಲ್ಲ, ಒಬ್ಬರೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ