ಮಂಗಳೂರಲ್ಲಿ ಎನ್ ಎಸ್ ಯುಐ ಪ್ರತಿಭಟನೆ, ವಿದ್ಯಾರ್ಥಿ ನಾಯಕರಿಂದ ಸಂಸದ ಕಟೀಲ್ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ

ಮಂಗಳೂರಲ್ಲಿ ಎನ್ ಎಸ್ ಯುಐ ಪ್ರತಿಭಟನೆ, ವಿದ್ಯಾರ್ಥಿ ನಾಯಕರಿಂದ ಸಂಸದ ಕಟೀಲ್ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 08, 2024 | 1:25 PM

ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಸದನೆಂಬ ಹೆಸರು ಪಡೆದಿರುವ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಜಿಲ್ಲೆಯಲ್ಲಿ ಅನೇಕ ಹೆಸರಾಂತ ಕಾಲೇಜುಗಳಿವೆ, ಆದರೆ ಸಂಸದರಿಂದ ಉದ್ಯೋಗ ಸೃಷ್ಟಿ ಮಾಡಲಾಗಿಲ್ಲ, ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಕೇಂದ್ರದ ವಾಪಸ್ಸು ಕೊಡಿಸುವುದು ಇವರಿಗೆ ಸಾಧ್ಯವಾಗುತ್ತಿಲ್ಲ, ಇಂಥ ಸಂಸದರು ನಮಗೆ ಬೇಕಿಲ್ಲ ಅಂತ ಯುವಕರು ಘೋಷೆಣೆ ಕೂಗಿದರು.

ಮಂಗಳೂರು: ನಿನ್ನೆ ದೆಹಲಿಯಲ್ಲಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯ ವಿಸ್ತರಣೆ ಇದು. ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಂಗ್ ಎನ್ ಎಸ್ ಯು ಐ ನ (NSUI) ದಕ್ಷಿಣ ಕನ್ನಡ ಘಟಕ ಇಂದು ಸ್ಥಳೀಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಮನೆಯೆದುರು ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕುವ (lay siege) ಪ್ರಯತ್ನವನ್ನೂ ಮಾಡಿತು. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಪೊಲೀಸ್ ವ್ಯಾನ್ ಹತ್ತುವಾಗ ಎನ್ ಎಸ್ ಯು ಐ ಘಟಕದ ಅಧ್ಯಕ್ಷ ಅಥವಾ ಕಾರ್ಯದರ್ಶಿಯಂತೆ ಕಾಣುವ ಯುವಕನೊಬ್ಬ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಕೂಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಸದನೆಂಬ ಹೆಸರು ಪಡೆದಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಜಿಲ್ಲೆಯಲ್ಲಿ ಅನೇಕ ಹೆಸರಾಂತ ಕಾಲೇಜುಗಳಿವೆ, ಆದರೆ ಸಂಸದರಿಂದ ಉದ್ಯೋಗ ಸೃಷ್ಟಿ ಮಾಡಲಾಗಿಲ್ಲ, ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಕೇಂದ್ರದ ವಾಪಸ್ಸು ಕೊಡಿಸುವುದು ಇವರಿಗೆ ಸಾಧ್ಯವಾಗುತ್ತಿಲ್ಲ, ಇಂಥ ಸಂಸದರು ನಮಗೆ ಬೇಕಿಲ್ಲ, ಎಂದು ಹೇಳುತ್ತಾ ಯುವಕ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಅಂತ ತನ್ನ ಸಹಪಾಠಿಗಳೊಂದಿಗೆ ಘೋಷಣೆ ಕೂಗಿದ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ