‘ಬೇರೆಯವರು ಆರ್ಸಿಬಿ ತಂಡವನ್ನು ಪ್ರೀತಿಸ್ತಾರೆ, ನಾನು ಉಸಿರಾಡ್ತೀನಿ’: ಸಿಂಪಲ್ ಸುನಿ
ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಸುನಿ ಅವರಿಗೆ ಸಿನಿಮಾದ ರೀತಿಯೇ ಕ್ರಿಕೆಟ್ ಮೇಲೂ ಪ್ರೀತಿ ಇದೆ. ಆರ್ಸಿಬಿ ತಂಡದ ದೊಡ್ಡ ಅಭಿಮಾನಿ ಅವರು. ಆದರೂ ತಂಡದ ಮ್ಯಾನೇಜ್ಮೆಂಟ್ ಬಗ್ಗೆ ತಮಗೆ ಕೋಪ ಇದೆ ಎಂದು ಅವರು ಹೇಳಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ನಿರ್ದೇಶಕ ಸಿಂಪಲ್ ಸುನಿ (Simple Suni) ಅವರು ಆ್ಯಕ್ಷನ್-ಕಟ್ ಹೇಳಿರುವ ‘ಒಂದು ಸರಳ ಪ್ರೇಮಕಥೆ’ (Ondu Sarala Premakathe) ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅನೇಕ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಚಿತ್ರತಂಡದವರ ಜೊತೆ ವೇದಿಕೆ ಏರಿದ ಸುನಿ ಅವರಿಗೆ ‘ಆರ್ಸಿಬಿ’ (RCB) ಬಗ್ಗೆ ಪ್ರಶ್ನೆ ಎದುರಾಯಿತು. ‘ಆರ್ಸಿಬಿ ಮೂರು ವರ್ಷ ಸೋಲುತ್ತೆ ಅಂತ ಹೇಳಿದ್ದೇರಿ. ಅದೇನು ಗಿಮಿಕ್ ಇರಬಹುದಾ’ ಎಂದು ನಿರೂಪಕಿ ಕೇಳಿದ್ದಕ್ಕೆ ಸುನಿ ಉತ್ತರ ನೀಡಿದ್ದಾರೆ. ಆಟಗಾರರ ಸೆಲೆಕ್ಷನ್ ಬಗ್ಗೆ ಸುನಿಗೆ ಬೇಸರ ಇದೆ. ‘ಟೀಮ್ ಬಂದಾಗಲೇ ಎಲ್ಲರೂ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಬೇಕಾದ ಪ್ಲೇಯರ್ಸ್ ಇಲ್ಲ. ಅದಕ್ಕಾಗಿ ಮ್ಯಾನೇಜ್ಮೆಂಟ್ ಮೇಲೆ ನಮಗೆ ಕೋಪ. ಆರ್ಸಿಬಿಯನ್ನು ಬೇರೆಯವರು ಪ್ರೀತಿಸಬಹುದು. ಆದರೆ ನಾನು ಅದನ್ನೇ ಉಸಿರಾಡುತ್ತೇನೆ. ಈ ಸಲ ಕಪ್ ನಮ್ದೇ ಅಂತ 10 ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದನ್ನು ಯಾರೂ ಕೇಳ್ತಿಲ್ಲ’ ಎಂದು ಸುನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ