Haveri News: ಶೂನ್ಯ ದಾಖಲಾತಿ; ಹಾವೇರಿ ಜಿಲ್ಲೆಯಲ್ಲಿ 23 ಶಾಲೆಗಳು ಬಂದ್​

|

Updated on: Jun 11, 2023 | 1:51 PM

ಹಾವೇರಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶೂನ್ಯ ವಿದ್ಯಾರ್ಥಿಗಳ ದಾಖಲಾತಿಯಿಂದಾಗಿ 23 ಶಾಲೆಗಳು ಬಾಗಿಲು ಮುಚ್ಚಿವೆ.

Haveri News: ಶೂನ್ಯ ದಾಖಲಾತಿ; ಹಾವೇರಿ ಜಿಲ್ಲೆಯಲ್ಲಿ 23 ಶಾಲೆಗಳು ಬಂದ್​
ಸಾಂದರ್ಭಿಕ ಚಿತ್ರ
Follow us on

ಹಾವೇರಿ: ಜೂನ್​​ ತಿಂಗಳು ಶಾಲೆಗಳು (School) ಆರಂಭವಾಗಿದ್ದು, ಮಕ್ಕಳು ಮರಳಿ ಶಾಲೆಗೆ ತೆರಳುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲವು ಶಾಲೆಗಳ ಬಾಗಿಲು ತೆರೆದಿಲ್ಲ. ಹೌದು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶೂನ್ಯ ವಿದ್ಯಾರ್ಥಿಗಳ (Students) ದಾಖಲಾತಿಯಿಂದಾಗಿ 19 ಕನ್ನಡ ಮಾಧ್ಯಮ ಮತ್ತು 4 ಆಂಗ್ಲ ಮಾಧ್ಯಮ ಸೇರಿದಂತೆ 23 ಶಾಲೆಗಳು ಮುಚ್ಚಲ್ಪಟ್ಟಿವೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 2 ಸರಕಾರಿ, 4 ಅನುದಾನಿತ ಹಾಗೂ 17 ಅನುದಾನ ರಹಿತ ಶಾಲೆಗಳು ಮುಚ್ಚಿವೆ.

ಶಾಲಾ ಆಡಳಿತ ಮಂಡಳಿಗಳ ನಿರೀಕ್ಷೆಗೆ ವಿರುದ್ಧವಾಗಿ ಕೊರೊನಾ ನಂತರ ದಾಖಲಾತಿಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ನಗರ ಪ್ರದೇಶಗಳಲ್ಲಿ 12 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 11 ಶಾಲೆಗಳನ್ನು ಮುಚ್ಚಲಾಗಿದೆ. ವರದಿಗಳ ಪ್ರಕಾರ, 13 ಸರ್ಕಾರಿ ಮತ್ತು 3 ಅನುದಾನರಹಿತ ಶಾಲೆಗಳು ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದವು.

ಹಾವೇರಿ ಮತ್ತು ಬ್ಯಾಡಗಿ ನಗರ ಹೊರತುಪಡಿಸಿ ಉಳಿದ ಎಲ್ಲಾ ಆರು ತಾಲೂಕುಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ರಾಣೆಬೆನ್ನೂರು ಒಂದರಲ್ಲೇ 9 ಶಾಲೆಗಳು ಮುಚ್ಚಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ