ಹಾವೇರಿ: ಸರ್ಕಾರಿ ಬಸ್‌ನಿಂದ (Bus( ಬಿದ್ದು ಪ್ರೌಢಶಾಲೆ ವಿದ್ಯಾರ್ಥಿನಿ(Student) ಮೃತಪಟ್ಟಿರುವ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಮಧು ಕುಂಬಾರ(14) ಮೃತ ದುರ್ದೈವಿ ವಿದ್ಯಾರ್ಥಿನಿ. ವಾಸನ ಗ್ರಾಮದಿಂದ ಕುಸನೂರು ಶಾಲೆಗೆ ಹೋಗಲು ಸರ್ಕಾರಿ ಬಸ್ ಹತ್ತಿದ್ದ ವಧು, ರಶ್ ಇದ್ದುದರಿಂದ ಬಾಗಿಲ ಬಳಿ ನಿಂತಿದ್ದಳು. ಆದ್ರೆ, ನಿಯಂತ್ರಣ ತಪ್ಪಿ ಬಸ್‌ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಇಂದು ಎಲ್ಲಡೆ ಸಭೆ ಸಮಾರಂಭ ಹಾಗೂ ವಿವಾಹ ಕಾರ್ಯಕ್ರಮಗಳು ಇದ್ದ ಹಿನ್ನೆಲೆಯಲ್ಲಿ ಬಸ್ನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಮಹಿಳೆಯರು ಸೇರಿದಂತೆ ಶಾಲಾ ಮಕ್ಕಳಿಂದ ತುಂಬಿದ್ದರು. ಈ ಹಿನ್ನೆಲೆಯಲ್ಲಿ ಮಧು ಬಸ್ ಬಾಗಿಲು ಬಳಿ ನಿಂತುಕೊಂಡಿದ್ದಳು. ಆದರೆ ರಸ್ತೆ ತಿರುವಿನಲ್ಲಿ ಬಸ್ ಟರ್ನ್ ಆಗುವಾಗ ಕೈಜಾರಿ ನೆಲಕ್ಕೆ ಬಿದ್ದಿದ್ದಾಳೆ. ಈ ಸಂಬಂಧ ಮೃತ ಮಧು ಪೋಷಕರು, ಸರ್ಕಾರಿ ಬಸ್ ಚಾಲಕನ ವಿರುದ್ಧ ಆಡೂರು ಠಾಣೆಗೆ ದೂರು ದಾಖಲಿಸಿದ್ದಾರೆ.
ಶಕ್ತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಸಂಬಂಧ ಮಹಿಳೆಯರು ಖಾಸಗಿ ವಾಹನಗಳಿಗೆ ಬೈ ಹೇಳಿ ಸರ್ಕಾರಿ ಬಸ್ನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಿ ಬಸ್ಗಳು ಫುಲ್ ರಶ್ ಆಗುತ್ತಿವೆ.
ಶಾಲೆಗೆ ಹೋಗುತ್ತಿದ್ದ ಬಾಲಕಿಯ ಜೀವನ ದುರಂತ ಅಂತ್ಯ ಕಂಡಿದ್ದು ಬಸ್ ರಶ್ ಆಗಿದ್ದೇ ವಿದ್ಯಾರ್ಥಿನಿಯ ಪಾಲಿಗೆ ಶಾಪವಾಯ್ತಾ?