ಗ್ಯಾಸ್​ ಗೀಸರ್​ ಸೋರಿಕೆ: ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವು

ಇನ್ನೇನು ಗೃಹಸ್ಥಾಶ್ರಮ ಕಾಲಿಡಲು ತಯಾರಿಯಲ್ಲಿ ಜೋಡಿ ಬಾತ್​ರೂಮ್​ನಲ್ಲಿ ದುರಂತ ಅಂತ್ಯಕಂಡಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗ್ಯಾಸ್​ ಗೀಸರ್​ ಸೋರಿಕೆ: ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವು
ಮೃತಪಟ್ಟ ಜೋಡಿ
Follow us
ರಮೇಶ್ ಬಿ. ಜವಳಗೇರಾ
|

Updated on: Jun 12, 2023 | 11:11 AM

ಬೆಂಗಳೂರು: ಸ್ನಾನಕ್ಕೆಂದು ಒಟ್ಟಿಗೆ ಹೋಗಿದ್ದಾಗ ಬಾತ್​ರೂಮ್​ನಲ್ಲಿ ಗ್ಯಾಸ್​ ಗೀಸರ್(gas geyser)​ ಸೋರಿಕೆಯಾಗಿ ಯುವಕ-ಯುವತಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ. ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್​​ನ ಸುಧಾರಾಣಿ ಮೃತ ದುರ್ವೈವಿಗಳು. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಈ ಜೋಡಿ ದುರಂತ ಅಂತ್ಯ ಕಂಡಿದೆ. ಜೂನ್ 10ರಂದು ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಜೂನ್ 10ರಂದು ಸಂಜೆ ಸುಧಾರಾಣಿ ಆಗಮಿಸಿದ್ದಳು. ರಾತ್ರಿ ಸ್ನಾನಕ್ಕೆಂದು ಗ್ಯಾಸ್​ ಗೀಸರ್​ ಆನ್ ಮಾಡಿ ಬಾತ್​ರೂಮ್​ಗೆ ಹೋಗಿದ್ದಾರೆ. ದುರದೃಷ್ಟವಶಾತ್ ಆ ವೇಳೆ ಗ್ಯಾಸ್​ ಗೀಸರ್​ನಿಂದ ವಿಷಾನಿಲ ಸೋರಿಕೆಯಾಗಿದೆ. ಇದರಿಂದ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಬಾತ್​ರೂಮ್​ನ್ಲಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಳಿಕ ಮನೆಯಿಂದ ಹೊರಗೆ ಬಾರದೆ ಇದ್ದಾಗ ಬೆಳಗ್ಗೆ ಮನೆ ಮಾಲೀಕ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ ಇಬ್ಬರು ಮದುವೆಯಾಗಲು ತಯಾರಿಯಾಗಿದ್ದರು. ಆದ್ರೆ, ಹೊಸ ಜೀವನ ಆರಂಭಿಸಬೇಕೆನ್ನುವಷ್ಟರಲ್ಲೇ ವಿಧಿ ಬಿಟ್ಟಿಲ್ಲ. ಮದುವೆಗೆ ಮುಂಚೆಯೇ ಜೋಡಿ ಮಸಣ ಸೇರಿದೆ.