ಜನರಿಂದ ಅಧಿಕ ವಿದ್ಯುತ್​ ಬಿಲ್​ ವಸೂಲಿ, ಆದ್ರೆ ಸರ್ಕಾರಿ ಇಲಾಖೆ-ಸಂಸ್ಥೆಗಳ ಸಾವಿರಾರು ಕೋಟಿ ಬಿಲ್​​ ಬಾಕಿ, ಮೌನವಹಿಸಿದ ಸರ್ಕಾರ

ಎಸ್ಕಾಂ ಅಧಿಕಾರಿಗಳು ಜನರಿಗೊಂದು, ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೊಂದು ನಿಯಮ ಮಾಡಲು ಹೊರಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಎಸ್ಕಾಂಗಳಿಗೆ ಕಟ್ಟಬೇಕಾದ ಕೋಟಿ ಕೋಟಿ ಬಿಲ್​​ ಅನ್ನು ಬಾಕಿ ಉಳಿಸಿಕೊಂಡರೂ, ಅಧಿಕಾರಿಗಳು ಮಾತ್ರ ಧ್ವನಿ ಎತ್ತದೆ ಶಾಂತರೂಪಿಗಳಾಗಿದ್ದಾರೆ.

ಜನರಿಂದ ಅಧಿಕ ವಿದ್ಯುತ್​ ಬಿಲ್​ ವಸೂಲಿ, ಆದ್ರೆ ಸರ್ಕಾರಿ ಇಲಾಖೆ-ಸಂಸ್ಥೆಗಳ ಸಾವಿರಾರು ಕೋಟಿ ಬಿಲ್​​ ಬಾಕಿ, ಮೌನವಹಿಸಿದ ಸರ್ಕಾರ
ಕೆಪಿಟಿಸಿಎಲ್​​​​
Follow us
ವಿವೇಕ ಬಿರಾದಾರ
|

Updated on:Jun 12, 2023 | 12:08 PM

ಬೆಂಗಳೂರು: ಗೃಹ ಜ್ಯೋತಿ (Gruha Jyoti) ಯೋಜನೆ ಅಡಿ ರಾಜ್ಯ ಸರ್ಕಾರ 200 ಯುನಿಟ್​​ವರೆಗು ಪ್ರತಿ ಮನೆಗೆ ಉಚಿತ ವಿದ್ಯುತ್​​ (Free Electricity) ಅಂತ ಘೋಷಿಸಿದೆ. ಆದರೆ ಇದಕ್ಕೂ ಮುನ್ನ ಜನರು ಏರಿಕೆಯಾದ ವಿದ್ಯುತ್​ ಬಿಲ್ (Electricity Bill)​​ ದರದಿಂದ ಪರದಾಡುತ್ತಿದ್ದಾರೆ. ಈ ಬಿಲ್​​​ ಗ್ರಾಹಕರು ಕಡ್ಡಾಯವಾಗಿ ಕಟ್ಟಬೇಕಾಗಿದ್ದು, ಇಲ್ಲವಾದಲ್ಲಿ 200 ಯುನಿಟ್​ ಉಚಿತ ವಿದ್ಯುತ್​ ಸಿಗುವುದಿಲ್ಲ ಎಂದು ಎಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಎಸ್ಕಾಂ ಅಧಿಕಾರಿಗಳು ಜನರಿಗೊಂದು, ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೊಂದು ನಿಯಮ ಮಾಡಲು ಹೊರಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಎಸ್ಕಾಂಗಳಿಗೆ ಕಟ್ಟಬೇಕಾದ ಕೋಟಿ ಕೋಟಿ ಬಿಲ್​​ ಅನ್ನು ಬಾಕಿ ಉಳಿಸಿಕೊಂಡರೂ, ಅಧಿಕಾರಿಗಳು ಮಾತ್ರ ಧ್ವನಿ ಎತ್ತದೆ ಶಾಂತರೂಪಿಗಳಾಗಿದ್ದಾರೆ.

ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಕರೆಂಟ್ ಬಳಸಿ ಬೆಸ್ಕಾಂಗೆ ಬಿಲ್‌ಕಟ್ಟದೆ ನಿರ್ಲಕ್ಷ್ಯ ವಹಿಸಿದ್ದು, ವಿವಿಧ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೆ 5 ಸಾವಿರ ಕೋಟಿಗೂ ಹೆಚ್ಚು ಬಿಲ್ ಬಾಕಿ ಇದೆ. ಪ್ರತಿ ವರ್ಷ ಕರೆಂಟ್ ಬಿಲ್ ಬಾಕಿ ಹೆಚ್ಚುತ್ತಲೇ ಇದ್ದು, ಜೊತೆಗೆ ಬಡ್ಡಿಯೂ ಏರುತ್ತಿದೆ. ಆದರೂ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಬಿಲ್ ಕಟ್ಟಲು ಮೀನಾಮೇಷ ಎಣಿಸುತ್ತಿವೆ.

ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸ್ಪಷ್ಟನೆ

ಕಳೆದ ವರ್ಷ ಮಾರ್ಚ್ ತಿಂಗಳಿಂದ 2023ವರೆಗೆ ಬರಬೇಕಾದ ಬಿಲ್ ಬಾಕಿ ಇದ್ದು, ಇದೀಗ ಗೃಹಜ್ಯೋತಿ ಉಚಿತ ವಿದ್ಯುತ್​ ಹಿನ್ನೆಲೆ ಬಾಕಿ ಉಳಿಸಿಕೊಂಡ ಬಿಲ್​​ಗಳನ್ನು ಕ್ಲಿಯರ್ ಮಾಡುವಂತೆ ಬೆಸ್ಕಾಂ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೆ ನೋಟೀಸ್ ನೀಡಿದೆ.

ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಂದ ಬರಬೇಕಾದ ಬಾಕಿ

  1. BBMP (ವಾರ್ಡ್​​ಗಳ ಬೀದಿ ದೀಪಗಳು) – 640 ಕೋಟಿ
  2. BBMP (ಬೀದಿ ದೀಪ) – 52.56 ಕೋಟಿ
  3. BWSSB ಬೋರ್ ವೆಲ್ – 468.25 ಕೋಟಿ
  4. ನೀರಾವರಿ ಇಲಾಖೆ – 46.91 ಕೋಟಿ
  5. ಸ್ಲಮ್ ಬೋರ್ಡ್ – 16.69 ಕೋಟಿ
  6. ಪವರ್ ಲೂಮ್ ಕಚೇರಿ – 4.52 ಕೋಟಿ
  7. ಸ್ಥಳೀಯ ಗ್ರಾಮೀಣ ಸಂಸ್ಥೆಗಳು – 3,785.87 ಕೋಟಿ
  8. ಸ್ಥಳೀಯ ನಗರ ಸಂಸ್ಥೆಗಳು – 113.16 ಕೋಟಿ
  9. ಇತರೆ ಸರ್ಕಾರಿ ಇಲಾಖೆ ಕಚೇರಿ – 43.49 ಕೋಟಿ
  10. ಕೇಂದ್ರ ಸರ್ಕಾರ – 33.02 ಕೋಟಿ

ಒಟ್ಟು 5,246.64 ಕೋಟಿ ಬಾಕಿ ಇದೆ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Mon, 12 June 23

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್