ಶಾಸಕ ನೆಹರು ಓಲೇಕಾರ್​ಗೆ ಬಿಗ್​ ರಿಲೀಫ್: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ ಹೈಕೋರ್ಟ್

|

Updated on: Mar 03, 2023 | 4:40 PM

50 ಲಕ್ಷದ ಕಾಮಗಾರಿಗಳನ್ನು ಪುತ್ರರಿಗೇ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ನೆಹರು ಓಲೇಕಾರ್​ಗೆ ಹೈಕೋರ್ಟ್​ನಿಂದ ರಿಲೀಫ್​ ಸಿಕ್ಕಿದೆ. 2 ವರ್ಷ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ಅಮಾನತ್ತಿನಲ್ಲಿಟ್ಟು ಹೈಕೋರ್ಟ್ ಜಾಮೀನು ನೀಡಿದೆ.

ಶಾಸಕ ನೆಹರು ಓಲೇಕಾರ್​ಗೆ ಬಿಗ್​ ರಿಲೀಫ್: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ ಹೈಕೋರ್ಟ್
ನೆಹರು ಓಲೇಕಾರ್
Image Credit source: (All images credit - ekpraet)
Follow us on

ಹಾವೇರಿ: 50 ಲಕ್ಷದ ಕಾಮಗಾರಿಗಳನ್ನು ಪುತ್ರರಿಗೇ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ನೆಹರು ಓಲೇಕಾರ್​ಗೆ (Nehru olekar) ಹೈಕೋರ್ಟ್​ನಿಂದ ರಿಲೀಫ್​ ಸಿಕ್ಕಿದೆ. 2 ವರ್ಷ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ಅಮಾನತ್ತಿನಲ್ಲಿಟ್ಟು ಹೈಕೋರ್ಟ್ ಜಾಮೀನು ನೀಡಿದೆ. ಕಾಂಕ್ರೀಟ್ ರಸ್ತೆ ಸೇರಿ ಕೆಲ ಕಾಮಗಾರಿ ನಡೆಸಿದ ಆರೋಪದಡಿ ಶಾಸಕ ನೆಹರು ಓಲೇಕಾರ್ ಪುತ್ರರಾದ ಮಂಜುನಾಥ್​ ಮತ್ತು ದೇವರಾಜ್ ಓಲೇಕಾರ್​ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿತ್ತು.

ಘಟನೆ ಹಿನ್ನೆಲೆ

50 ಲಕ್ಷ ರೂ. ಮೊತ್ತದ ಕಾಮಗಾರಿ ಪುತ್ರರಿಗೇ ನೀಡಿದ ಆರೋಪದಡಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್‌  ಮತ್ತು ಪುತ್ರರಾದ ಮಂಜುನಾಥ್‌, ದೇವರಾಜ್‌ ಓಲೆಕಾರ್​ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯಲ್ಲಿ ಶಾಸಕ ಓಲೆಕಾರ್‌ ವಿರುದ್ಧ ಸ್ವಜನ ಪಕ್ಷಪಾತ ಆರೋಪಿಸಿತ್ತು. ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ‌ ಜಾಮೀನು ಮಂಜೂರು ಮಾಡಲಾಗಿತ್ತು.

ಇದನ್ನೂ ಓದಿ: ಅಭಿವೃದ್ಧಿ ವಿಚಾರದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ತಾರತಮ್ಯ: ಎಂಟಿಬಿ ನಾಗರಾಜ್ ವಿರುದ್ಧ ಆರೋಪ, ಶರತ್ ಬಚ್ಚೇಗೌಡ ಏಕಾಂಗಿ ಪ್ರತಿಭಟನೆ

ಶಾಸಕಿ ರೂಪಾಲಿ ನಾಯ್ಕ್​ ವಿರುದ್ಧ ಕಾಂಗ್ರೆಸ್​ ಮಾಜಿ ಶಾಸಕ ಸತೀಶ್ ಸೈಲ್ ಆರೋಪ

ಕಾರವಾರ: ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿ ಸಲ್ಲಿಸಲು ಬಂದಾಗ ದರ್ಪ ತೋರಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಕಾಂಗ್ರೆಸ್​ ಮಾಜಿ ಶಾಸಕ ಸತೀಶ್ ಸೈಲ್ ಆರೋಪ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಘಟನೆ ನಡೆದಿದೆ. ರೂಪಾಲಿ ನಾಯ್ಕ್​​ ಮತ್ತು ಸತೀಶ್ ಸೈಲ್ ನಡುವೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಸತೀಶ್‌ ಸೈಲ್‌ಗೆ ಕುಡುಕ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು ಮೇಜಿನ ಮೇಲಿದ್ದ ಪೇಪರ್ ವೇಟೇಜ್‌ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸದ್ಯ ಶಾಸಕಿ ದರ್ಪವನ್ನ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

ಇದನ್ನೂ ಓದಿ: Traffic Fine Rebate: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ಇನ್ನೂ 15 ದಿನ ಅವಕಾಶ

ಪಿಡಿಓ ಬದಲಾವಣೆ ವಿಚಾರವಾಗಿ ಸತೀಶ್​ ಸೈಲ್​​ ಸಿಇಒ ಭೇಟಿಗೆ ಮುಂದಾಗಿದ್ದಾರೆ. ಈ ವೇಳೆ ರೂಪಾಲಿ ನಾಯ್ಕ್​​ ತಮ್ಮ ಬೆಂಬಲಿಗರೊಂದಿಗೆ ಸಿಇಒ ಕಚೇರಿಗೆ ಬಂದು ಸಿಇಒವನ್ನು ಬೇರೆ ಚರ್ಚೆಗೆ ಕರೆದುಕೊಂಡು ಹೋಗಿದ್ದಾರೆ. ಕಳೆದ ಆರೇಳು ತಿಂಗಳಲ್ಲಿ ಗ್ರಾಮದಲ್ಲಿ ಮೂವರು ಪಿಡಿಒಗಳು ಬದಲಾಗಿದ್ದಾರೆ. ಹಾಗಾಗಿ ಅಭಿವೃದ್ಧಿ ಚಟುವಟಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ.  ಈ ವಿಚಾರವನ್ನು ಬಗೆ ಹರಿಸಲು ಸಿಇಒ ಬಳಿ ಚರ್ಚಿಸಲು ಸತೀಶ್​ ಸೈಲ್ ಹೋಗಿದ್ದಾಗ ಶಾಸಕಿ ರೂಪಾ ನಾಯ್ಕ್​ ಇಬ್ಬರ ನಡುವೆ ಪರಸ್ಪರ ವಾಗ್ವಾದ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:35 pm, Fri, 3 March 23