HDK ಸಿಎಂ ಆಗಿದ್ದಾಗ ದಾಸರಹಳ್ಳಿಗೆ 30 ಕೋಟಿ ರೂ. ಅನುದಾನ, ಶಾಸಕರು ಪರ್ಸೆಂಟೇಜ್​ ತೆಗೆದುಕೊಂಡು ಬಿಲ್‌ ಮಾಡಿರುವ ಆರೋಪ

2 ಕೋಟಿ 80 ಲಕ್ಷ ಅವ್ಯವಹಾರ ಆಗಿದೆ ಎಂದು ಟಿವಿಸಿಸಿ ವರದಿ ಮಾಡಿದೆ. ಹಣವನ್ನ ರಿಕವರಿ ಮಾಡಿ ಎಂದು ಆದೇಶ ಮಾಡಿದೆ ಎಂದು ಶಾಸಕ ಮಂಜುನಾಥ ವಿರುದ್ಧ ಮಾಜಿ ಶಾಸಕ ಎಸ್​. ಮುನಿರಾಜ್ ವಾಗ್ದಾಳಿ ಮಾಡಿದರು.

HDK ಸಿಎಂ ಆಗಿದ್ದಾಗ ದಾಸರಹಳ್ಳಿಗೆ 30 ಕೋಟಿ ರೂ. ಅನುದಾನ, ಶಾಸಕರು ಪರ್ಸೆಂಟೇಜ್​ ತೆಗೆದುಕೊಂಡು ಬಿಲ್‌ ಮಾಡಿರುವ ಆರೋಪ
ಮಾಜಿ ಶಾಸಕ ಮುನಿರಾಜ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 11, 2023 | 3:48 PM

ನೆಲಮಂಗಲ: ಹೆಚ್​.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ 30 ಕೋಟಿ ರೂ. ಅನುದಾನ (Grant) ಕೊಟ್ಟಿದ್ರು. ಶಾಸಕರು ಪರ್ಸೆಂಟೇಜ್ ತಗೊಂಡು ಬಿಲ್ ಮಾಡಿದ್ರು. ಆದ್ರೆ ಯಾವುದೇ ಕಾಮಗಾರಿ ಆಗಿರಲಿಲ್ಲ. 2 ಕೋಟಿ 80 ಲಕ್ಷ ಅವ್ಯವಹಾರ ಆಗಿದೆ ಎಂದು ಟಿವಿಸಿಸಿ ವರದಿ ಮಾಡಿದೆ. ಹಣವನ್ನ ರಿಕವರಿ ಮಾಡಿ ಎಂದು ಆದೇಶ ಮಾಡಿದೆ ಎಂದು ಶಾಸಕ ಮಂಜುನಾಥ ವಿರುದ್ಧ ಮಾಜಿ ಶಾಸಕ ಎಸ್​. ಮುನಿರಾಜ್ (Former MLA Muniraj) ವಾಗ್ದಾಳಿ ಮಾಡಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 4 ವರ್ಷದಲ್ಲಿ ವಾರ್ಡ್ ಕಾಮಗಾರಿಗೆ 471 ಕೋಟಿ ಬಂದಿದೆ. ಕಾಮಗಾರಿ ಮುಗಿದಿದೆ ಎಂದು ಬಿಲ್ ಮಾಡಿದ್ದಾರೆ. ಇವರ ಕಾಲದಲ್ಲಿ ಆಗಿರುವ ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ 700 ಕೋಟಿ ಅನುದಾನ

ಸಮ್ಮಿಶ್ರ ಸರ್ಕಾರ ಪತನ ನಂತರ ಕುಮಾರಸ್ವಾಮಿ 700 ಕೋಟಿ ಕೊಟ್ಟಿದ್ದರು. ಅದನ್ನ ಸಮ್ಮಿಶ್ರ ಸರ್ಕಾರ ವಾಪಸ್​ ಪಡೆದುಕೊಂಡಿದೆ ಎಂದು ಶಾಸಕರು ಭಾಷಣಗಳಲ್ಲಿ ಹೇಳ್ತಾರೆ. ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರಕ್ಕೆ ವಾರ್ಡ್ ಕಾಮಗಾರಿಗೆಂದು 471 ಕೋಟಿ ರೂ. ಬಿಲ್ ಆಗಿದೆ. ಮುಖ್ಯ ರಸ್ತೆಗಳಿಗೆ 89 ಕೋಟಿ ಅನುದಾನ ಕೊಡಲಾಗಿದೆ. ತೋಟಗಾರಿಕೆಗೆ 20 ಕೋಟಿ 82 ಲಕ್ಷ ಹಣ ಕೊಟ್ಟಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು: ಸಾಂವಿಧಾನಿಕ ಮಾನ್ಯತೆಗೆ ಮತ್ತೊಮ್ಮೆ ಶಿಫಾರಸ್ಸು ಮಾಡುವಂತೆ ಕೇಂದ್ರಕ್ಕೆ ಒತ್ತಾಯ

ಕಳಪೆ ಕಾಮಗಾರಿ ಎಂದು ಆರೋಪ

ಆದ್ರೆ ಒಂದು ಪಾರ್ಕಿನ ಅಭಿವೃದ್ದಿ ಸಹ ಆಗಿಲ್ಲ. ಕೋವಿಡ್ ನಿರ್ವಹಣೆಗೆ 245 ಕೋಟಿ 89 ಲಕ್ಷ ಹಣ ಬಂದಿದೆ. ನಗರೋತ್ಥಾನದಲ್ಲಿ 110 ಕೋಟಿ ಕೊಟ್ಟಿದ್ದಾರೆ. ಕಳೆದ ಸರ್ಕಾರದಲ್ಲಿ ನಾನು ಶಾಸಕನಾಗಿದ್ದ 100 ಕೋಟಿ ಹಣ ಫ್ರೀ ಮಾಡಿದ್ರು. ಬೃಹತ್ ನೀರು ಗಾವಲಿಗೆ 80 ಕೋಟಿ ಹಣ ಕೊಟ್ಟಿದ್ದಾರೆ. 110 ವಿಲೇಜ್ ಪ್ರಾಜೆಕ್ಟ್‌ನಲ್ಲಿ 50 ಕೋಟಿ ರೂ. ಹೆಸರಘಟ್ಟ ಮುಖ್ಯರಸ್ತೆಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಜೆಡಿಎಸ್​ಗೆ ಮತ ಹಾಕಿದರೆ ನೀವು ಬಿಜೆಪಿಗೆ ಮತ ಹಾಕಿದಂತೆ: ಶಾಸಕ ಜಮೀರ್ ಅಹ್ಮದ್​

ಪೈಪ್‌ಲೈನ್‌ಗೆ 3 ಕೋಟಿ, ಎಮೆರ್ಜನ್ಸಿ ಫಂಡ್ 5 ಕೋಟಿ ಬಿಡುಗಡೆಯಾಗಿದೆ. ಮಾಡಿರುವ ಯಾವ ಕಾಮಗಾರಿಗಳು ಗುಣಮಟ್ಟದಲ್ಲ. ಎಲ್ಲಾ ಕಳಪೆ ಕಾಮಗಾರಿಯಾಗಿದೆ. ನಾವು ಯಾವುದೇ ಅಭಿವೃದ್ದಿ ಕೆಲಸಗಳಿಗೆ ಅಡ್ಡ ಹಾಕಿಲ್ಲ. ಇವರು ಮಾಡುವ ಲೂಟಿಗೆ ಅಡ್ಡ ಹಾಕಿದ್ದೇವೆ. ಸುಮಾರು 900 ಕೋಟಿ ಹಣ ಲೂಟಿ ಹೊಡೆಯಲಾಗಿದೆ ಎಂದು ಮಾಜಿ ಶಾಸಕ ಮುನಿರಾಜ್ ಆರೋಪ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:38 pm, Sat, 11 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ