ಕಾಂತಾರ ಚಿತ್ರ ನೋಡಿದ ಬಳಿಕ ಪ್ರದೇಶದ ಬಗ್ಗೆ ಗೊತ್ತಾಯ್ತು: ಮಂಗಳೂರಲ್ಲಿ ಅಮಿತ್ ಶಾ ಭಾಷಣದ ಹೈಲೇಟ್ಸ್ ಇಲ್ಲಿದೆ
ಮಂಗಳೂರು ಪವಿತ್ರವಾದ ಭೂಮಿ, ಅರಬ್ಬೀ ಸಮುದ್ರದ ತಟದ ಪಶ್ಚಿಮ ಘಟ್ಟ ನೋಡಿದ್ದೇನೆ. ಹಾಗೇ ಕಾಂತಾರ ಸಿನಿಮಾ ನೋಡಿದ್ದು, ಚಿತ್ರ ನೋಡಿದ ಬಳಿಕ ಸಮೃದ್ಧ ಪ್ರದೇಶದ ಬಗ್ಗೆ ಗೊತ್ತಾಯ್ತು. ನಾವು ಮಂಗಳೂರಿನ ತೆಂಗು, ಅಡಿಕೆ ತಿಂದು ನಿಮ್ಮನ್ನು ಸ್ಮರಿಸಿಕೊಳ್ಳುತ್ತೇವೆ. ಗುಜರಾತ್ನ ಜನರು ಮಂಗಳೂರಿನ ಅಡಿಕೆ ತಿನ್ನುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮರಿಸಿಕೊಂಡರು.
ದಕ್ಷಿಣ ಕನ್ನಡ: ಮಂಗಳೂರು (Mangaluru) ಪವಿತ್ರವಾದ ಭೂಮಿ, ಅರಬ್ಬೀ ಸಮುದ್ರದ ತಟದ ಪಶ್ಚಿಮ ಘಟ್ಟ ನೋಡಿದ್ದೇನೆ. ಹಾಗೇ ಕಾಂತಾರ ಸಿನಿಮಾ ನೋಡಿದ್ದು, ಚಿತ್ರ ನೋಡಿದ ಬಳಿಕ ಸಮೃದ್ಧ ಪ್ರದೇಶದ ಬಗ್ಗೆ ಗೊತ್ತಾಯ್ತು. ನಾವು ಮಂಗಳೂರಿನ ತೆಂಗು, ಅಡಿಕೆ ತಿಂದು ನಿಮ್ಮನ್ನು ಸ್ಮರಿಸಿಕೊಳ್ಳುತ್ತೇವೆ. ಗುಜರಾತ್ನ ಜನರು ಮಂಗಳೂರಿನ ಅಡಿಕೆ ತಿನ್ನುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸ್ಮರಿಸಿಕೊಂಡರು. ಇಂದು (ಫೆ.11) ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಸಮಾವೇಶವನ್ನು ಅಮಿತ್ ಶಾ ಉದ್ಘಾಟಿಸಿದರು.
ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಇಂದು ಬಿಜೆಪಿ ವಿಚಾರಧಾರೆ ಪಂಡಿತ್ ದಿನದಯಾಳ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಸುಭದ್ರವಾಗಿದೆ. ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸೋಣ. ಕೇಂದ್ರ ಸರ್ಕಾರ ರೈತರ ಹಿತ ಕಾಯುತ್ತದೆ. ಸಹಕಾರ ಇಲಾಖೆ ಮೂಲಕ ರೈತರ ಹಾಗೂ ಗ್ರಾಮಗಳ ಅಭಿವೃದ್ಧಿಗೊಳಿಸಲು ಅವಕಾಶ ಸಿಕ್ಕಿದೆ. ಕೇಂದ್ರ ಬಜೆಟ್ನಲ್ಲಿ ಸಹಕಾರ ಇಲಾಖೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ವೋಟ್ ಬ್ಯಾಂಕ್ಗಾಗಿ ಟಿಪ್ಪು ಜಯಂತಿ ಮಾಡುತ್ತಿದ್ದಾರೆ
ವೋಟ್ ಬ್ಯಾಂಕ್ಗಾಗಿ ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ನಾವು ರಾಣಿ ಅಬ್ಬಕ್ಕ ಜಯಂತಿ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪಿಎಫ್ಐ ಬ್ಯಾನ್ ಮಾಡಿದ್ದೇವೆ. ದೇಶ ವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತೆ ಎಂದು ಕಾಂಗ್ರೆಸ್ ಅಮಿತ್ ಶಾ ವಾಗ್ದಾಳಿ ಮಾಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ಸುರಕ್ಷತೆಯಿಂದ ಇದೆ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ಸುರಕ್ಷತೆಯಿಂದ ಇದೆ. ನಕ್ಸಲವಾದ, ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟಲಾಗಿದೆ. ಜಮ್ಮು ಮತ್ತು ಕಾಶ್ಮೀರದ 370 ವಿಶೇಷ ಕಾಯ್ದೆಯನ್ನು ತೆಗೆದು ಹಾಕಿದ್ದೇವೆ. ಇಂಥದೊಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ಮಾದು ಮೋದಿ ಸರ್ಕಾರ. ಈ ಮೂಲಕ ಭಾರತದ ಮುಕುಟವನ್ನು ನಮ್ಮದಾಗಿಯೇ ಉಳಿದುಕೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ನಿರ್ಣಯ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಒಂದೇ. ಹೀಗಾಗಿ ಮಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ. ಈ ಮೂಲಕ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಕರೆ ನೀಡಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Sat, 11 February 23