Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್​ಗೆ ಮತ ಹಾಕಿದರೆ ನೀವು ಬಿಜೆಪಿಗೆ ಮತ ಹಾಕಿದಂತೆ: ಶಾಸಕ ಜಮೀರ್ ಅಹ್ಮದ್​

ಜೆಡಿಎಸ್​ಗೆ ವೋಟ್ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಅಲ್ಪಸಂಖ್ಯಾತರು ಜೆಡಿಎಸ್​ಗೆ ಮತ ಹಾಕಬಾರದು ಎಂದು ಶಾಸಕ ಜಮೀರ್ ಅಹ್ಮದ್​ ಹೇಳಿದರು.

ಜೆಡಿಎಸ್​ಗೆ ಮತ ಹಾಕಿದರೆ ನೀವು ಬಿಜೆಪಿಗೆ ಮತ ಹಾಕಿದಂತೆ: ಶಾಸಕ ಜಮೀರ್ ಅಹ್ಮದ್​
ಶಾಸಕ ಜಮೀರ್ ಅಹ್ಮದ್Image Credit source: prajavani.net
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 10, 2023 | 10:04 PM

ಕಲಬುರಗಿ: ಜೆಡಿಎಸ್​ಗೆ ಮತ ಹಾಕಿದರೆ ನೀವು ಬಿಜೆಪಿಗೆ ಮತ ಹಾಕಿದಂತೆ ಎಂದು ಶಾಸಕ ಜಮೀರ್ ಅಹ್ಮದ್ (Zameer Ahmed)​ ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್​ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಜೆಡಿಎಸ್​ಗೆ ವೋಟ್ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಅಲ್ಪಸಂಖ್ಯಾತರು ಜೆಡಿಎಸ್​ಗೆ ಮತ ಹಾಕಬಾರದು ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನೇಕ ಭಾಗ್ಯಗಳನ್ನು ತಂದಿದ್ದಾರೆ. ಶೂ ಭಾಗ್ಯ ಎಂದು ಹೇಳುವ ಬರದಲ್ಲಿ ಶೀಲ ಭಾಗ್ಯ ಎಂದರು. ಪ್ರತಿ ಸಮಾವೇಶದಲ್ಲಿ ಸಿದ್ದರಾಮಯ್ಯರನ್ನು ಜಮೀರ್ ಅಹ್ಮದ್ ಹಾಡಿ ಹೊಗಳುತ್ತಾರೆ.

ಬಿಜೆಪಿ ಸಮಾಜವನ್ನು ಒಡೆಯೋ ಕೆಲಸ ಮಾಡುತ್ತಿದೆ: ಸಿದ್ಧರಾಮಯ್ಯ

ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೊಟ್ಟ ಭರವಸೆ ಈಡೇರಿಸದಿದ್ರೆ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ನಾವು ಜನರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ಬಿಜೆಪಿ ಹೇಳಿದಂತೆ ಇಲ್ಲಿವರಗೆ ನಡೆದುಕೊಂಡಿಲ್ಲಾ. ಸರ್ಕಾರ, ರಾಜ್ಯಪಾಲರಿಂದ ಬರಿ ಸುಳ್ಳು ಹೇಳಿಸಿದೆ. ಹಿಂದುತ್ವದ ಹೆಸರಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಾಜವನ್ನು ಒಡೆಯೋ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕೋಮುವಾದಿ ಸರ್ಕಾರ ಅಧಿಕಾರದಲ್ಲಿರಬಾರದೆಂದು ಕುಮಾರಸ್ವಾಮಿಗೆ ಸಿಎಂ ಸ್ಥಾನ ಕೊಟ್ಟೆವು: ಸಿದ್ಧರಾಮಯ್ಯ

ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ?

ಬಿಜೆಪಿ ಮತ್ತು ಆರ್​ಎಸ್​ಎಸ್​ನವರು, ನಾವು ಮಹಾನ ದೇಶಭಕ್ತರು ಅಂತಾರೆ. ದೇಶಕ್ಕಾಗಿ ಒಬ್ಬನಾದ್ರು ಆರ್​ಎಸ್​ಎಸ್​ ಬಿಜೆಪಿ ಯವಕರು ಸತ್ತಿದ್ದಾರಾ? ಭಾವನಾತ್ಮಕ ವಿಚಾರ ಮುಂದಿಟ್ಚು ಅಧಿಕಾರಕ್ಕೆ ಬರೋ ಹುನ್ನಾರ ಬಿಜೆಪಿ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಮಕ್ಮಲ್ ಟೋಪಿ ಹಾಕುತ್ತಿದೆ. ಈ ಭಾಗದ ಜನರಿಗೆ ತಿರುಪತಿ ತಿಮ್ಮಪ್ಪನ ಮೂರು ನಾಮ ಎಳೆಯುತ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

ಜನರು ಭಯದಲ್ಲಿ ಬದಕುತ್ತಿದ್ದಾರೆ

ಮೋದಿ ತಾವು ಚೌಕಿದಾರ್ ಅಂತಾರೆ. ಹಾಗಾದ್ರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿಯೂ ಯಾಕೆ ಸುಮ್ಮನಿದ್ದಾರೆ? ನಾವು ಭ್ರಷ್ಟಾಚಾರ ದ ಬಗ್ಗೆ ಮಾತನಾಡಿದ್ರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿರಲಿಲ್ವಾ ಅಂತ ಬಿಜೆಪಿಯವರು ಅಂತಾರೆ. ಹಾಗಾದ್ರೆ ನೀವು ವಿರೋಧ ಪಕ್ಷದಲ್ಲಿದ್ದಾಗ ಬಾಯಲ್ಲಿ ಕಡಬು ಸಿಕ್ಕಿತ್ತಾ, ಜನರು ಭಯದಲ್ಲಿ ಬದಕುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Hassan Politics: ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯ ಅಲ್ಲ; ಹೆಚ್​ಡಿ ಕುಮಾರಸ್ವಾಮಿ

ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ ಸಾಧನೆ ಏನು

ನಿರುದ್ಯೋಗ, ಬೆಲೆ ಏರಿಕೆ, ರೈತರ ಬಿಕ್ಕಟ್ಟು, ಸಾಮರಸ್ಯ ಹಾಳಾಗಿರೊ ಬಗ್ಗೆ ಸರ್ಕಾರ ಮಾತನಾಡ್ತಿಲ್ಲ. ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ. ಅದರ ಸಾಧನೆ ತೋರಿಸಬೇಕಿತ್ತು. ಬಿಜೆಪಿ 600 ಭರವಸೆಯಲ್ಲಿ 50 ಈಡೇರಿಸಿರಬಹುದು‌. ಇನ್ನೂ 550 ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಸೊಸೈಟಿ, ಬ್ಯಾಂಕ್​ಗಳನ್ನ ಒಂದು ಲಕ್ಷ ಕೂಡಲೇ ಮನ್ನ ಮಾಡುತ್ತೇವೆ. 150 ಲಕ್ಷ ಕೋಟಿ ನೀರಾವರಿಗೆ ಖರ್ಚು ಮಾಡ್ತಿನಿ ಅಂದ್ರು‌. ಬರೀ 50 ಸಾವಿರ ಕೋಟಿ ಖರ್ಚು ಮಾಡಿಲ್ಲ. ಇದು ಯಡಿಯೂರಪ್ಪನವರು ಅಧ್ಯಕ್ಷರಿದ್ದಾಗ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.