ಹಾವೇರಿ: ಕರಾವಳಿ ಭಾಗದಲ್ಲಿನ ಹತ್ಯೆ ಪ್ರಕರಣಗಳು (Dakshina Kannada) ಬಹಳ ನೋವು ತರುವ ಸಂಗತಿ. ಇಂಥಾ ಘಟನೆಗಳು ಆಗಬಾರದು ಎಂದು ಹಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಬಸವರಾಜ ಹೊರಟ್ಟಿ (Basavaraj Horatti) ಹೇಳಿದ್ದಾರೆ. ಇಂಥಾ ಸಮಯದಲ್ಲಿ ಇಂಟಲಿಜೆನ್ಸಿಯವರು ಪೊಲೀಸರಿಗಿಂತ ಬಹಳ ಕೆಲಸ ಮಾಡಿ ಸರಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲ ನಡೆಯಬಾರದು, ನಡೀತಿವೆ. ಯಾವುದೇ ಜಾತಿ ಇರಲಿ, ಏನೇ ಇರಲಿ ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂಥದ್ದು ಮಾಡಿದವರಿಗೆ ಶಿಕ್ಷೆ ಆಗಿದ್ದು ಇವತ್ತಿನರವೆಗೂ ನನಗೆ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂಥಾ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಅಂತಾ 20 ಕಾನೂನುಗಳಿವೆ. 10-15 ವರ್ಷ ಆಗೋದರಲ್ಲಿ ಜನರು ಅದನ್ನು ಮರೆತು ಬಿಡ್ತಾರೆ ಎಂದು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೊರಟ್ಟಿ ಖೇದ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಮೊನ್ನೆ ಇಸ್ರೇಲ್ ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ ಇಂಥಾ ಘಟನೆಯಾದರೆ ಸಂಜೆ ವೇಳೆಗೇ ಹ್ಯಾಂಗ್ ಮಾಡ್ತಾರೆ. ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು. ಇಲ್ಲದಿದ್ದರೆ ಇನ್ನಷ್ಟು ಜಾಸ್ತಿ ಆಗುತ್ತವೆ ಎಂದು ಅವರು ಸೂಕ್ಷ್ಮವಾಗಿ ಹೇಳಿದರು.
ಹೈದರಾಬಾದ್ ನಲ್ಲಿ ನಮ್ಮ ಸಜ್ಜನ ಐಪಿಎಸ್ ಅಧಿಕಾರಿಯಂತೆ ಶೂಟೌಟ್ ಮಾಡಬೇಕು:
ಇಂಥಾ ಸಮಯದಲ್ಲಿ ಎಲ್ಲ ಪಕ್ಷಗಳು ಒಂದಾಗಿ ನಾಡಿನಲ್ಲಿ ಶಾಂತಿ ಕಾಪಾಡಬೇಕು. ನಾ ಹಾಗೆ ಮಾಡಿದೆ, ನೀ ಹೀಗೆ ಮಾಡಿದೆ ಎನ್ನುತ್ತಾ ಒಬ್ಬರನ್ನೊಬ್ಬರು ಎತ್ತಿ ಕಟ್ಟೋ ಪರಿಸ್ಥಿತಿ ಆಗಬಾರ್ದು. ವಿರೋಧ ಪಕ್ಷ ಬರಿ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಸಿಎಂ ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂಥಾ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು. ನಾನು ಯೋಗಿ, ಮತ್ತೊಬ್ಬನನ್ನು ನೋಡಿಲ್ಲ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಅದನ್ನು ಮಾಧ್ಯಮದವರ ಮೂಲಕ ಜನರಿಗೆ ಗೊತ್ತು ಮಾಡಬೇಕು. ಹಾಗಾದಾಗ ಇಂಥಾ ಘಟನೆಗಳು ನಡೆಯೋದಿಲ್ಲ. ಯಾವುದೇ ಪಕ್ಷ, ಸಂಘದಲ್ಲಿದ್ದಾರೂ ಅವರನ್ನು ಮರ್ಡರ್ ಮಾಡೋದು ಸರಿಯಲ್ಲ. ಬಹಳ ನೋವಿನ ಸಂಗತಿಯಿದು. ಕೋಳಿ, ಕುರಿಗಿಂತ ಮನುಷ್ಯನ ಜೀವನ ಕಡೆ ಆದ ಹಾಗೆ ಆಗ್ತಿದೆ. ಸರಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೈದರಾಬಾದ್ ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನೂ. ಇಂಥಾ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿ, ಇಂಥಾ ಘಟನೆಗಳು ಆಗೋದು ನಿಂತರೆ ನಾನೇನು ಪೊಲೀಸರದನ್ನು ತಪ್ಪು ಅನ್ನೋದಿಲ್ಲ ಎಂದು ಪರೋಕ್ಷವಾಗಿ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬಿದರು.
Published On - 4:09 pm, Sat, 30 July 22