ಹಾವೇರಿ: ಜಿ ಪ್ಲಸ್ ಒನ್​ ಮನೆ ಹಂಚಿಕೆಗೆ ನೀತಿ ಸಂಹಿತೆ ಅಡ್ಡಿ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೊಟ್ಟ ಫಲಾನುಭವಿಗಳು

|

Updated on: Apr 02, 2023 | 10:50 AM

ಅವರೆಲ್ಲ ಕಡುಬಡವರು, ಕಳೆದ ಹನ್ನೆರಡು ವರ್ಷಗಳ ಹಿಂದೆ ಮನೆಗೆ ಆರ್ಜಿ ಹಾಕಿದ್ದರು. ಈಗ ಸರ್ಕಾರ ಜಿ ಪ್ಲಸ್ ಒನ್​ ಮನೆ ನಿರ್ಮಾಣ ಮಾಡಿದೆ. ಅದರೆ ಉದ್ಘಾಟನೆಗೆ ಮೂರು ಭಾರಿ ದಿನಾಂಕ ನಿಗದಿಯಾಗಿ, ಏಕಾಏಕಿ ನೀತಿ ಸಂಹಿತೆ ಘೋಷಣೆ ಆದ ಕಾರಣ ರದ್ದು ಮಾಡಲಾಗಿದೆ. ಇದೀಗ 350 ಮನೆಗಳ ಫಲಾನುಭವಿಗಳು ಪರದಾಡುತ್ತಿದ್ದಾರೆ. ಅಧಿಕಾರಿಗಳು ಮನೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ಹಾಕಿದ್ದಾರೆ.

ಹಾವೇರಿ: ಜಿ ಪ್ಲಸ್ ಒನ್​ ಮನೆ ಹಂಚಿಕೆಗೆ ನೀತಿ ಸಂಹಿತೆ ಅಡ್ಡಿ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೊಟ್ಟ ಫಲಾನುಭವಿಗಳು
ಜಿ ಪ್ಲಸ್ ಒನ್​ ಮನೆ ಉದ್ಘಾಟನೆಗೆ ನೀತಿ ಸಂಹಿತೆ ಅಡ್ಡಿ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಫಲಾನುಭವಿಗಳು
Follow us on

ಹಾವೇರಿ: ಸುಂದರವಾಗಿ ನಿರ್ಮಾಣಗೊಂಡಿರುವ ಜಿ ಪ್ಲಸ್ ಒನ್​ ಮಾದರಿಯ ಮನೆಗಳು. ಮನೆಯ ಮುಂದೆ ನಿಂತಿರುವ ಫಲಾನುಭವಿಗಳು. ಇದು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಕಂಡುಬಂದ ದೃಶ್ಯಗಳಿವು. ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಕಡುಬಡವರು ಅರ್ಜಿಯನ್ನ ಹಾಕಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅದ ನಂತರ ಜಿ ಪ್ಲಸ್ ಒನ್​ ಮನೆಗೆ ಕಾಮಾಗಾರಿ ವೇಗ ನೀಡಿ ಕಾಮಾಗಾರಿ ಪೂರ್ಣಗೊಳಿಸಿದರು. ಅದರೆ ಮೂರು ಬಾರಿ ಉದ್ಘಾಟನೆ ದಿನಾಂಕ ನಿಗದಿಯಾಗಿ ಕಾರ್ಯಕ್ರಮವನ್ನ ಮುಂದೂಡಲಾಯಿತು. ಹೌದು ಸುಮಾರು 12 ವರ್ಷಗಳಿಂದ ಕಾದು ಸುಸ್ತಾದ ಫಲಾನುಭವಿಗಳಿಗೆ ಮತ್ತೆ ನಿರಾಸೆ ಮೂಡಿಸಿದೆ. ಇದರಿಂದ ರೊಚ್ಚಿಗೆದ್ದ ಫಲಾನುಭವಿಗಳು ‘ಸುಮಾರು ವರ್ಷಗಳಿಂದ ಬಾಡಿಗೆ ಮನೆ, ಗುಡಿಸಲಿನಲ್ಲಿ ವಾಸವಾಗಿದ್ದೇವೆ. ಅದರೆ ಕೆಲವು ಫಲಾನುಭವಿಗಳ ಮನೆಗಳು ನಿರಂತರ ಮಳೆ ಬಿದ್ದು ಹೋಗಿದೆ. ಕೂಡಲೇ ಎಲ್ಲಾ ಫಲಾನುಭವಿಗಳಿಗೆ ಜಿ ಪ್ಲಸ್ ಮನೆಗೆ ನೀಡುವಂತೆ ಆಗ್ರಹಿಸಿದ್ದಾರೆ.

350 ಕ್ಕೂ ಅಧಿಕ ಜಿ ಪ್ಲಸ್ ಮನೆ ನಿರ್ಮಾಣ

ಬಂಕಾಪುರ ಗ್ರಾಮದಲ್ಲಿ 350 ಕ್ಕೂ ಅಧಿಕ ಜಿ ಪ್ಲಸ್ ಮನೆ ನಿರ್ಮಾಣ ಮಾಡಲಾಗಿದೆ. ಎಲ್ಲಾ ಕಡುಬಡವರು ಮೊದಲು 40 ಸಾವಿರ ರೂಪಾಯಿ, ನಂತರ ಐದು ಸಾವಿರ ಒಟ್ಟು 45 ಸಾವಿರ ರೂಪಾಯಿ ಶುಲ್ಕವನ್ನ ಕಟ್ಟಿದ್ದಾರೆ. ಅದರೆ ಕಡುಬಡವರಿಗೆ ಮನೆಗಳನ್ನ ಇವತ್ತು ಕೊಡುತ್ತಾರೆ. ನಾಳೆ ಕೊಡುತ್ತಾರೆ ಎಂದು ಮೂರು ದಿನಗಳ ಕಾಲ ಉದ್ಘಾಟನೆ ದಿನಾಂಕ ನಿಗದಿ ಮಾಡಿದ್ದರು. ಏಕಾಏಕಿ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಿದ್ದು ಉದ್ಘಾಟನೆ ಕಾರ್ಯಕ್ರಮ ರದ್ದಾಗಿದೆ. ಇದೀಗ ನಮಗೆ ಅಧಿಕಾರಿಗಳಾದರೂ ಮನೆ ಹಸ್ತಾಂತರ ಮಾಡಬೇಕು. ಇಲ್ಲವಾದರೆ ಎಲ್ಲರೂ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ಹಾಕಿದ್ದಾರೆ.

ಇದನ್ನೂ ಓದಿ: ​2ನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಹೆಸರು ಫೈನಲ್? ಕಳೆದ ಬಾರಿ ಸೋತ 9 ಅಭ್ಯರ್ಥಿಗಳಿಗೆ ಟಿಕೆಟ್​ ಸಾಧ್ಯತೆ

ಒಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಮನೆ ಸಿಗುತ್ತೆ ಕನಸು ಕಂಡಿದ್ದ ಜನರಿಗೆ ನಿರಾಸೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇವರ ಸಮಸ್ಯೆ ಆಲಿಸಿ, ಜಿ ಪ್ಲಸ್ ಒನ್​ ಮನೆಗಳನ್ನ ಹಸ್ತಾಂತರ ಮಾಡಿ ಬಡ ಪಲಾನುಭವಿಗಳಿಗೆ ಅನೂಕೂಲ ಮಾಡಬೇಕಿದೆ. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:51 am, Sun, 2 April 23