ಹಾವೇರಿ: ಶಿಗ್ಗಾವಿ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಕಣಕ್ಕಿಳಿಸುವ ಲೆಕ್ಕಾಚಾರದ ಬೆನ್ನಲೆ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಲು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ (Ajjampir Khadri) ಕೂಡ ಮುಂದಾಗಿದ್ದರು. ಸಿಎಂ ವಿರುದ್ಧ ನಾಲ್ಕು ಬಾರಿ ಸೋತಿದ್ದೇನೆ ಆದ್ದರಿಂದ ಹೈಕಮಾಂಡ್ ಸ್ಪರ್ಧೆ ಬೇಡ ಅಂತ ಹೇಳಿದೆ. ಹಾಗಾಗಿ ವಿನಯ್ ಕುಲಕರ್ಣಿಗೆ ಕ್ಷೇತ್ರ ಬಿಟ್ಟುಕೊಡುತ್ತಿದ್ದೇನೆ ಎಂದು ಇತ್ತೀಚೆಗೆ ಅಜ್ಜಂಪೀರ್ ಖಾದ್ರಿ ಹೇಳಿದ್ದರು. ಆದರೆ ಇಂದು ವಿನಯ್ ಕುಲಕರ್ಣಿ ಮತ್ತು ಅಜ್ಜಂಪೀರ್ ಖಾದ್ರಿ ಭೇಟಿ ಮಾಡಿದ್ದಾರೆ. ಈ ಕುರಿತಾಗಿ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ವಿನಯ್ ಕುಲಕರ್ಣಿ ಭೇಟಿ ಮಾಡಿದ್ದೇವೆ. ಇಬ್ಬರು ಮಾತಾಡಿದ್ದೇವೆ, ಅವರು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಆಗುತ್ತಾರೆ. ಸಾಧಕ ಬಾಧಕಗಳ ಬಗ್ಗೆ, ಪ್ರತಿ ಬೂತನಲ್ಲೂ ಕಾಂಗ್ರೆಸ್ ಗೆಲ್ಲಬೇಕು ಎಂದು ಮಾತುಕತೆ ಮಾಡಿದ್ದೇವೆ. ಹೀಗಾಗಿ ವಿನಯ ಕುಲಕರ್ಣಿ ಅವರೇ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಈಗಾಗಲೇ ನಾಲ್ಕು ಭಾರಿ ಟಿಕೆಟ್ ಕೊಟ್ಟಿದಾರೆ. ನಮಗೆ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲಬೇಕು, ಸಿಎಂ ಬೊಮ್ಮಾಯಿವರು ಸೋಲಬೇಕು ಎನ್ನುವುದು ನಮ್ಮ ಗುರಿ. ವಿನಯ ಕುಲಕರ್ಣಿ ಅವರೇ ಸ್ಪರ್ಧಿಸುತ್ತಾರೆ. ನಮಗೂ ವಾಸನೆ ಕಂಡುಬಂದಿದೆ. ಪೆನ್ನು ಹಾಳೆ ತಗೊಂಡು ಬರಕೊಂಡು ಮಾತಾಡಿದ್ದೇವೆ ಎಂದರೆ ನೀವೆ ಯೋಚಿಸಿ. ಅವರು ಬರೋದಕ್ಕೆ ಒಪ್ಪಿದಾರೆ.
ಇದನ್ನೂ ಓದಿ: ವಿನಯ್ ಕುಲಕರ್ಣಿ ಹೆಸರು ಕೇಳಿಬರುತ್ತಿದ್ದಂತೆಯೇ ಬದಲಾದ ಶಿಗ್ಗಾಂವಿ ರಾಜಕೀಯ ಚಿತ್ರಣ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸಿಎಂ ಆಪ್ತರು
ಪ್ರತಿ ಬೂತ ಮಟ್ಟದಲ್ಲೂ ಏನೇನೂ ಆಗಬೇಕು ಎಂದು ಚರ್ಚೆ ಮಾಡಿದ್ದೇವೆ. ಮಾಜಿ ಶಾಸಕರು, ಸಂಸದರು ಆಗಿದ್ದ ಮಂಜುನಾಥ್ ಕುನ್ನೂರು ಬಂದಿದಾರೆ. ನಮಗೂ ಒಳ್ಳೆಯದೆ. ಅವರು ಟಿಕೆಟ್ಗಾಗಿ ಅರ್ಜಿ ಹಾಕಿಲ್ಲ. ಅವರಿಗೆ ಟಿಕೆಟ್ ಕೊಡುತ್ತಾರೆ ಅಂತಾ ನಂಗೆ ಅನಿಸುವುದಿಲ್ಲ.
ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಪಂಚಮಸಾಲಿ ಸಮಾಜದ 65 ಸಾವಿರ ಮತಗಳಿದ್ದರೆ, 50 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ಈ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕದಲ್ಲಿ ಬಿಜೆಪಿ ನಾಯಕರು ಇದ್ದಾರೆ.
ವಿನಯ್ ಕುಲಕರ್ಣಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ, ಸಿಎಂ ಬಸವರಾಜ ಬೊಮ್ಮಾಯಿ ಆಪ್ತರು ಲಾಭ-ನಷ್ಟದ ಲೆಕ್ಕಚಾರಗಳನ್ನು ಹಾಕುತ್ತಿದ್ದಾರೆ. ವಿನಯ್ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಪಂಚಮಸಾಲಿ ಮತಗಳು ಕಾಂಗ್ರೆಸ್ ಪಾಲಾಗುವ ಭಯ ಶುರುವಾಗಿದೆ. ಇನ್ನು ಅಜ್ಜಂಪೀರ್ ಖಾದ್ರಿ ಅಭ್ಯರ್ಥಿಯಾದರೆ ಕ್ಷೇತ್ರದ ಮುಸ್ಲಿಂ ಮತಗಳು ಸಂಪೂರ್ಣ ಖಾದ್ರಿ ಪಾಲಾಗಲಿವೆ.
ಖಾದ್ರಿಗೆ ಬಿಟ್ಟು ವಿನಯ್ ಕುಲಕರ್ಣಿ ಅವರಿಗೆ ಕೈ ಟಿಕೆಟ್ ನೀಡಿದರೆ ಮುಸ್ಲಿಂ ಮತಗಳು ಕೈತಪ್ಪುವ ಆತಂಕ ಕೂಡ ಕಾಂಗ್ರೆಸ್ ನಾಯಕರಲ್ಲಿದೆ. ಕೈ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆಯೂ ಅವರಿಗಿದ್ದು, ಇದು ಕಾಂಗ್ರೆಸ್ಸಿಗೇ ಹೊಡೆತ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಒಳಜಗಳ ಬೊಮ್ಮಾಯಿಗೆ ವರವಾಗಿ ಪರಿಣಮಿಸಲಿದೆ.
ಇದನ್ನೂ ಓದಿ: ಚೆಕ್‌ಬೌನ್ಸ್ ಪ್ರಕರಣ: ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಒಂದು ವೇಳೆ ಕುಲಕರ್ಣಿ ಅಭ್ಯರ್ಥಿಯಾದರೆ ಮುಸ್ಲಿಂ ಮತಗಳು ಬೊಮ್ಮಾಯಿ ಪರ ಬೀಳುವ ವಿಶ್ವಾಸ ಹೊಂದಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರ ಪ್ರತಿಕೂಲವಾಗುವ ಆತಂಕವನ್ನೂ ಸಿಎಂ ಬೊಮ್ಮಾಯಿಗೆ ಇದೆ. ಈ ಹಿನ್ನೆಲೆಯಲ್ಲಿಯೇ ನಾಟಕ ಆಯೋಜನೆಗೆ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಮೂರು ದಿನಗಳ ವೀರ ರಾಣಿ ಕಿತ್ತೂರು ಚೆನ್ಮಮ್ಮ ನಾಟಕ ಆಯೋಜನೆ ಮಾಡಲಾಗಿದೆ.
ಲೆಕ್ಕಾಚಾರದ ಪ್ರಕಾರ ವಿನಯ್ ಕುಲಕರ್ಣಿ ಲಿಂಗಾಯತ ಸಮುದಾಯದ ಪಂಚಮಸಾಲಿ ಉಪಜಾತಿಗೆ ಸೇರಿದವರು. ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದ ಸಾದರ ಉಪಜಾತಿ ಸೇರಿದವರು. ಪಂಚಮಸಾಲಿ ಉಪಪಂಗಡದ ಮತಗಳು ಶಿಗ್ಗಾವಿ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಒಬಿಸಿ ಕೋಟಾದಡಿ ಮೀಸಲಾತಿ ಪಡೆಯಬೇಕೆಂಬ ಪಂಚಮಸಾಲಿಗಳ ಬೇಡಿಕೆಗೆ ಬಿಜೆಪಿ ಸ್ಪಂದಿಸಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ ಸರಣಿ ಘಟನೆಗಳು ಬಿಜೆಪಿಗೆ ಸಂಕಷ್ಟವನ್ನು ತಂದೊಡ್ಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 pm, Thu, 30 March 23