ಜಾನಪದ ಜಾತ್ರೆಯಲ್ಲಿ ಕಿಕ್ಕೇರಿಸೋ ದಂಗಲ್, ಗೆದ್ದು ಬೀಗಿದ ಕುಸ್ತಿಪಟುಗಳು!
ಹಾವೇರಿ: ಅಖಾಡ ಯಾವುದೇ ಇರಲಿ.. ಎದುರಾಳಿ ಯಾರೇ ಇರಲಿ.. ಎಷ್ಟೇ ಬಲಶಾಲಿ ಆಗಿರಲಿ.. ಮುಂದಿಟ್ಟ ಹೆಜ್ಜೆ ಹಿಂದಿಡದೇ ಹೊಡೆಯೋದೇ. ಎದುರಾಳಿನ ಮಣ್ಣು ಮುಕ್ಕಿಸೋದೇ ಅಂತಾ ಪೈಲ್ವಾನರು ತೊಡೆ ತಟ್ಟುತ್ತಿದ್ರೆ, ನೆರೆದಿದ್ದವರು ಜೈಕಾರದ ಮಳೆ ಸುರಿಸುತ್ತಿದ್ರು. ಹಾವೇರಿಯಲ್ಲಿ ಜಾನಪದ ಜಾತ್ರೆ ಸಂಭ್ರಮ: ಹಾವೇರಿಯಲ್ಲಿ ಕುಸ್ತಿ ಪೈಲ್ವಾನರು ಧೂಳೆಬ್ಬಿಸಿದ್ರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತು. ತೂಕದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲಾಯ್ತು. ದಾವಣಗೆರೆ, ಧಾರವಾಡ, […]
ಹಾವೇರಿ: ಅಖಾಡ ಯಾವುದೇ ಇರಲಿ.. ಎದುರಾಳಿ ಯಾರೇ ಇರಲಿ.. ಎಷ್ಟೇ ಬಲಶಾಲಿ ಆಗಿರಲಿ.. ಮುಂದಿಟ್ಟ ಹೆಜ್ಜೆ ಹಿಂದಿಡದೇ ಹೊಡೆಯೋದೇ. ಎದುರಾಳಿನ ಮಣ್ಣು ಮುಕ್ಕಿಸೋದೇ ಅಂತಾ ಪೈಲ್ವಾನರು ತೊಡೆ ತಟ್ಟುತ್ತಿದ್ರೆ, ನೆರೆದಿದ್ದವರು ಜೈಕಾರದ ಮಳೆ ಸುರಿಸುತ್ತಿದ್ರು.
ಹಾವೇರಿಯಲ್ಲಿ ಜಾನಪದ ಜಾತ್ರೆ ಸಂಭ್ರಮ: ಹಾವೇರಿಯಲ್ಲಿ ಕುಸ್ತಿ ಪೈಲ್ವಾನರು ಧೂಳೆಬ್ಬಿಸಿದ್ರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತು. ತೂಕದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲಾಯ್ತು. ದಾವಣಗೆರೆ, ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಎಂಟ್ರಿ ಕೊಟ್ಟಿದ್ರು.
ನಾನಾ ನೀನಾ ಅಂತಾ ಅಖಾಡದಲ್ಲಿ ಸೆಣಸಾಡಿ ಮಿಂಚಿದ್ರು. ಇನ್ನು, ಯುವಕರಲ್ಲಿನ ದುಶ್ಚಟಗಳನ್ನ ದೂರ ಮಾಡೋದು, ಕುಸ್ತಿ ಉಳಿಸಿ ಬೆಳೆಸಲು ಈ ಪಂದ್ಯಾವಳಿ ಆಯೋಜಿಸಲಾಗಿತ್ತು. ಯುವಕರು ಮಾತ್ರವಲ್ಲದೇ ಬಾಲಕರೂ ಸಹ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೇಂಜಲ್ಲಿ ಜಬರದಸ್ತ್ ಆಗಿ ಕಾದಾಡಿದ್ರು.
ದಂಗಲ್ ಕಂಡು ನೆರೆದಿದ್ದವರು ಥ್ರಿಲ್: ಹಲಗೆ ಬಾರಿಸುತ್ತಾ ಪೈಲ್ವಾನರನ್ನ ಸಂಘಟಕರು ಅಖಾಡಕ್ಕೆ ಕರೆತರ್ತಿದ್ದಂತೆ ಪ್ರೇಕ್ಷಕರು ಕೇಕೆ, ಚಪ್ಪಾಳೆಗಳ ಸುರಿಮಳೆ ಸುರಿಸ್ತಿದ್ರು. ಕುಸ್ತಿಯಲ್ಲಿ ಸೆಣಸಾಡಿ ಗೆದ್ದವರಿಗೆ ಬಹುಮಾನ ವಿತರಿಸಲಾಯ್ತು. ಒಟ್ನಲ್ಲಿ, ಹಾವೇರಿಯಲ್ಲಿ ಕುಸ್ತಿ ಪಟುಗಳ ಸಮಾಗಮವೇ ಆಗಿತ್ತು. ನಾನಾ ನೀನಾ ಅಂತಾ ಶಕ್ತಿ ಮೀರಿ ಕಾದಾಡಿ ಬಹುಮಾನ ತಮ್ಮದಾಗಿಸಿಕೊಂಡ್ರು. ಈ ಕಿಕ್ಕೇರಿಸೋ ದಂಗಲ್ ಕಂಡು ನೆರೆದಿದ್ದವರು ಥ್ರಿಲ್ ಆದ್ರು.