AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ವರಿತವಾಗಿ ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್​​ಗೆ ಬಸವರಾಜ ಬೊಮ್ಮಾಯಿ ಆಗ್ರಹ: ಹೋರಾಟದ ಎಚ್ಚರಿಕೆಯನ್ನೂ ಕೊಟ್ಟ ಸಂಸದ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಡಿಪಿಆರ್ ತ್ವರಿತವಾಗಿ ಸಿದ್ಧಪಡಿಸುವಂತೆ ಸಿಎಂ ಅವರನ್ನು ಒತ್ತಾಯಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಯೋಜನೆಗೆ ವಿಳಂಬವಾದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಯೋಜನೆಯಿಂದ ಬೇಡ್ತಿ ನದಿ ಪಾತ್ರದಲ್ಲಿ ಯಾವುದೇ ಮುಳುಗಡೆ ಆಗುವುದಿಲ್ಲ ಎಂದು ಸಂಸದರು ಉಲ್ಲೇಖಿಸಿದ್ದು, ಡಿಪಿಆರ್​​ನಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ತ್ವರಿತವಾಗಿ ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್​​ಗೆ ಬಸವರಾಜ ಬೊಮ್ಮಾಯಿ ಆಗ್ರಹ: ಹೋರಾಟದ ಎಚ್ಚರಿಕೆಯನ್ನೂ ಕೊಟ್ಟ ಸಂಸದ
ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ಮತ್ತೆ ಧ್ವನಿ ಎತ್ತಿದ ಸಂಸದ ಬಸವರಾಜ ಬೊಮ್ಮಾಯಿImage Credit source: PTI
ಪ್ರಸನ್ನ ಹೆಗಡೆ
|

Updated on:Oct 28, 2026 | 3:45 PM

Share

ಹಾವೇರಿ, ಅಕ್ಟೋಬರ್​​ 28: ಬೇಡ್ತಿ-ವರದಾ ನದಿ ಜೋಡಣೆ ಇವತ್ತಿನ ಯೋಜನೆಯಲ್ಲ. 1980ರಲ್ಲಿಯೇ ಈ ಬಗ್ಗೆ ಪ್ರಸ್ತಾಪ ಆಗಿತ್ತು. 2025ರ ಡಿಸೆಂಬರ್​​ 8ರಂದು ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮಾಡಲು ಎಂಒಯು ಆಗಿತ್ತು. ಈಗ ಡಿಪಿಆರ್ ಕೂಡ ಮಾಡಲಾಗುತ್ತಿದ್ದು, ಅದರಲ್ಲಿ ಎಲ್ಲವೂ ಗೊತ್ತಾಗಲಿದೆ. ಯೋಜನೆಯಿಂದ ಬೇಡ್ತಿ ನದಿ ಪಾತ್ರದಲ್ಲಿ ಯಾವುದೇ ಮುಳುಗಡೆ ಆಗುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಯೋಜನಗೆ ಉತ್ತರ ಕನ್ನಡ ಜಿಲ್ಲೆಯ ಜನರಿಂದ ತೀವ್ರ ವಿರೋಧದ ನಡುವೆಯೂ ಸಂಸದರು ನೀಡಿರುವ ಈ ಹೇಳಿಕೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಹೋರಾಟದ ಎಚ್ಚರಿಕೆ ಕೊಟ್ಟ ಬಸವರಾಜ ಬೊಮ್ಮಾಯಿ

ಡಿಪಿಆರ್ ಬಗ್ಗೆ ರಾಜ್ಯ ಸರಕಾರ ಆಸಕ್ತಿ ತೆಗೆದುಕೊಂಡಿದೆ. ಅತಿ ವೇಗವಾಗಿ ಡಿಪಿಆರ್ ಮಾಡಬೇಕು ಎಂದು ಸಿಎಂ ಅವರನ್ನು ಒತ್ತಾಯಿಸುತ್ತೇನೆ. ಹೊಸ ತಂತ್ರಜ್ಞಾನ ಬಳಸಿ ಸರ್ವೇ ಮಾಡಿಸಿ, ಡಿಪಿಆರ್ ಮಾಡಬೇಕು. ಒಂದೆರಡು ತಿಂಗಳಲ್ಲಿ ಈ ಕಾರ್ಯ ಮುಗಿಯಬೇಕಿದ್ದು, ಅದಾಗದಿದ್ದರೆ ಹೋರಾಟ ಮಾಡುತ್ತೇವೆ. ಹುಕ್ಕೇರಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಸಭೆ ಮಾಡಿ, ಹೋರಾಟ ಮಾಡಿದ್ದೇವೆ. ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಯೋಜನೆ ಲಾಭ ಪಡೆಯುವ ಎಲ್ಲ ಭಾಗದ ರೈತರನ್ನು ಸಂಪರ್ಕ ಮಾಡಿ ಮತ್ತೆ ನಾವೆಲ್ಲರೂ ಈ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ‘ಬೇಡ್ತಿ–ವರದಾ ನದಿ ಜೋಡಣೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು’: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಸ್ಪಷ್ಟನೆ

‘ಸಭೆಗೆ ಸಿಎಂ ಇನ್ನೂ ಸಮಯ ನೀಡಿಲ್ಲ’

ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ಸಭೆ ಕರೆಯುವಂತೆ ಸಿಎಂ ಅವರಿಗೆ ಸಮಯ ಕೋರಿ ಪತ್ರ ಬರೆದಿದ್ದೇವೆ. ಆದರೆ ಅವರಿನ್ನೂ ಸಮಯ ಕೊಟ್ಟಿಲ್ಲ. ಎರಡೂ ಜಿಲ್ಲೆಗೆ ನೀರು ಸಿಗುವಂತೆ ನೀರು ಸಂಗ್ರಹಣಾ ವ್ಯವಸ್ಥೆ ಮಾಡಬೇಕು. ಈ ವಿಚಾರ ಡಿಪಿಆರ್​​ನಲ್ಲಿ ಸೇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ವರದಾ-ಬೇಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಆ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಹಾವೇರಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದ್ಯಸ್ಯರು ಮತ್ತು ಇತರ ಪ್ರಮುಖರು ಹೋರಾಟಗಾರರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಲ ಸಪನ್ಮೂಲ ಸಚಿವ ಎನ್. ಚಲುವರಾಯ ಸ್ವಾಮಿ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿ ಈ ಹಿಂದೆ ಪತ್ರ ಬರೆದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:44 pm, Wed, 28 October 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ