ಹಾವೇರಿ: ರೈತರ ಕೂಗಿಗೆ ಕಿವಿ ಕೊಡದ ಸರ್ಕಾರ; ಸ್ವಂತ ಹಣದಿಂದಲೇ ಕೆರೆ ಹೂಳು ತೆಗೆದ ಗ್ರಾಮಸ್ಥರು

ಆ ಐತಿಹಾಸಿಕ ಕೆರೆ, ಆ ಗ್ರಾಮದ ಜೀವನಾಡಿ. ಮಳೆಗೆ ಆ ಕೆರೆ ಸಂಪೂರ್ಣವಾಗಿ ತುಂಬಿರುತ್ತೆ. ಅದರೆ ಕೆರೆಯಲ್ಲಿ ಹೂಳು ತುಂಬಿರೋ ಹಿನ್ನಲೆಯಲ್ಲಿ ಬೇಸಿಗೆ ಬರುವ ಮುನ್ನವೇ ನೀರು ಖಾಲಿಯಾಗುತ್ತಿದೆ. ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಹೂಳು ತೆಗೆಯಲು ಮನವಿ ನೀಡಿದರೂ, ಯಾರು ಹೂಳು ತೆಗೆಯುವ ಕಾರ್ಯ ಮಾಡಿಲ್ಲ. ಇದೀಗ ಆ ಗ್ರಾಮದ ರೈತರೇ ಸೇರಿ ಹಣಹಾಕಿ ಕೆರೆಯ ಹೂಳು ತೆಗೆಯುವ ಕಾರ್ಯ ಮಾಡುತ್ತಿದ್ದಾರೆ.

ಹಾವೇರಿ: ರೈತರ ಕೂಗಿಗೆ ಕಿವಿ ಕೊಡದ ಸರ್ಕಾರ; ಸ್ವಂತ ಹಣದಿಂದಲೇ ಕೆರೆ ಹೂಳು ತೆಗೆದ ಗ್ರಾಮಸ್ಥರು
ಹೂಳು ತೆಗೆಸುತ್ತಿರುವ ರೈತರು

Updated on: Apr 30, 2023 | 9:09 AM

ಹಾವೇರಿ: ಗ್ರಾಮದಲ್ಲಿರುವ ಐತಿಹಾಸಿಕ ದೊಡ್ಡ ಕೆರೆ, ಕೆರೆಯಲ್ಲಿ ಜೆಸಿಬಿಯ ಆರ್ಭಟ. ಫಲವತ್ತಾದ ಮಣ್ಣನ್ನ ತೆಗೆದುಕೊಂಡು ಹೋಗುತ್ತಿರುವ ಅನ್ನದಾತರು. ಹೌದು ಇದು ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ ಕೆರೆಯಲ್ಲಿ ಕಂಡುಬಂದ ದೃಶ್ಯಗಳಿವು. ನೆರೇಗಲ್ ಗ್ರಾಮದ ಬಳಿ 350 ಕ್ಕೂ ಅಧಿಕ ಎಕರೆಯ ವಿಶಾಲವಾದ ಕೆರೆ ಇದೆ. ಪ್ರತಿವರ್ಷ ಮಳೆಗಾಲದಲ್ಲಿ ಕೆರೆ ಸಂಪೂರ್ಣವಾಗಿ ನೀರಿನಿಂದ ತುಂಬುತ್ತದೆ. ಅದರೆ, ದೊಡ್ಡಕೆರೆ ಇದ್ದರೂ ಸಂಪೂರ್ಣವಾಗಿ ಹೂಳಿನಿಂದ ತುಂಬಿ ಹೋಗಿದೆ. ಕೆರೆ ಸಂಪೂರ್ಣ ತುಂಬಿದರೂ, ಬೇಸಿಗೆ ಆರಂಭಕ್ಕೂ ಮುನ್ನವೇ ಬೇಗನೆ ನೀರು ಖಾಲಿಯಾಗಿ ಹೋಗುತ್ತಿದೆ. ಇದರಿಂದ ಪ್ರತಿವರ್ಷವು ಕೆರೆಯ ಹೂಳು ತೆಗೆಯಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಇನ್ನುವರೆಗೂ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವ ಕಾರ್ಯವನ್ನು ಮಾಡಿಲ್ಲ. ಇದೀಗ ಗ್ರಾಮದ ರೈತರು ಒಟ್ಟಾಗಿ ತಮ್ಮ ತಮ್ಮ ಟ್ರ್ತಾಕ್ಟರ್ ಮೂಲಕ ಜಮೀನಿಗೆ ಫಲವತ್ತಾದ ಮಣ್ಣು ತೆಗೆದುಕೊಂಡು ಹೋಗುತ್ತಿದ್ದು, ಕೆರೆಯ ಹೂಳು ತೆಗೆಯುವ ಕಾರ್ಯ ಮಾಡುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಕೆರೆ ತುಂಬಿದರು, ಬೇಸಿಗೆ ಆರಂಭಕ್ಕೂ ಮೊದಲೆ ನೀರು ಖಾಲಿಯಾಗುತ್ತಿದೆ. ಹೀಗಾಗಿ ರೈತರೆಲ್ಲರೂ ಸೇರಿ ಒಂದು ಟ್ರ್ಯಾಕರ್​ಗೆ 50,100,150ರೂಪಾಯಿ ಜೆಸಿಬಿಗೆ ನೀಡಿ. ಜಮೀನಿಗೆ ಫಲವತ್ತಾದ ಮಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ. ಹೌದು ಕಳೆದ ಒಂದು ವಾರದಿಂದ ನೆರೇಗಲ್, ಕೂಡಲ್, ವರ್ದಿ ಸೇರಿದಂತೆ ಸುತ್ತಮುತ್ತಲಿನ ಜನರು ಕೆರೆಯಲ್ಲಿ ಹೂಳು ತೆಗೆಯುವ ಮೂಲಕ ಉಚಿತವಾಗಿ ಮಣ್ಣನ್ನ ಜಮೀನಿಗೆ ಹಾಕಿಕೊಳ್ಳತ್ತಿದ್ದಾರೆ.

ಇದನ್ನೂ ಓದಿ:ಛತ್ತೀಸಗಡ ಬಾಂಬ್ ದಾಳಿ ಪ್ರಕರಣ: ಹಾವೇರಿಯ ಸಿಆರ್​ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಸಾವು

ಇನ್ನು ಈ ಕೆರೆಯಿಂದ ಸುತ್ತಮುತ್ತಲಿನ 500 ಕ್ಕೂ ಅಧಿಕ ಎಕರೆ ಜಮೀನಿಗೆ ನೀರಾವರಿ ಮಾಡಲು ಅನಕೂಲವಾಗಲಿದೆ. ಒಟ್ಟಿನಲ್ಲಿ ಕಳೆದ ಒಂದು ವಾರದಿಂದ ನೆರೇಗಲ್ ಗ್ರಾಮದ ರೈತರು ಒಗ್ಗಟ್ಟು ಮಾಡಿಕೊಂಡು ಕೆರೆ ಹೂಳು ತೆಗೆಯುವ ಕಾರ್ಯವನ್ನ ಮಾಡುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನ ಅನ್ನದಾತರು ಮಾಡುತ್ತಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:08 am, Sun, 30 April 23