ಹಾವೇರಿ: ತನ್ನ ಪ್ರೀತಿಯ ಬಗ್ಗೆ ಹೇಳುತ್ತಿರುವ ಪ್ರೇಯಸಿ. ವಾಟ್ಸಪ್ ಮೆಸೇಜ್, ತನ್ನೊಂದಿಗೆ ಇದ್ದ ಪೊಲೀಸ್ ಪೇದೆಯ ಪೋಟೋ ತೋರಿಸುವ ಮೂಲಕ ನ್ಯಾಯ ಬೇಕು ಅಂತೀರೋ ಯುವತಿ. ಹೌದು ಇದು ಹಾವೇರಿಯಲ್ಲಿ ಪ್ರೀತಿಸಿ ಡಿ.ಆರ್. ಪೊಲೀಸ್ನಿಂದ ಮೋಸ ಹೋದ ಯುವತಿಯ ಕಥೆ. ಕಳೆದ ಐದು ವರ್ಷಗಳಿಂದ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರವಿ ಬನ್ನಿಮಟ್ಟಿ ಎಂಬ ಡಿ.ಆರ್. ಪೊಲೀಸ್ ಪೇದೆಯನ್ನ ಪ್ರೀತಿಸಿದ್ದಳು. ಇಬ್ಬರದ್ದು ಮೊದಲು ಪರಿಚಯವಾಗಿ ಸ್ನೇಹ ಆಗಿತ್ತು. ಸ್ನೇಹ ಪ್ರೀತಿಯಾಗಿ, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗುವುದಕ್ಕೆ ಸಿದ್ದತೆ ನಡೆಸಿದ್ದರು. ಅದರೆ ಇದಕ್ಕೆ ಮನೆಯವರು ವಿರೋಧ ಮಾಡುತ್ತಾ ಡಿ.ಆರ್. ಪೊಲೀಸ್ ರವಿ ಬನ್ನಿಮಟ್ಟಿಗೆ ಬೇರೆ ಹುಡುಗಿಯ ಜೊತೆಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ. ನನ್ನನ್ನ ಕಳೆದ ಐದು ವರ್ಷಗಳಿಂದ ಪ್ರೀತಿಸಿ, ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಅಲ್ಲದೆ ನಾಲ್ಕು ಬಾರಿ ನನಗೆ ಅಬಾರ್ಷನ್ ಮಾಡಿಸಿದ್ದಾನೆ. ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಯುವತಿ ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.
ಕಳೆದ ಒಂದು ತಿಂಗಳಿನಿಂದ ಯುವತಿ ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರ ಸೇರಿದಂತೆ ಗ್ರಾಮಸ್ಥರ ಜೊತೆಗೆ ರಾಜಿ ಸಂದಾನ ನಡೆಸಿ ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಅದರೆ ರವಿ ಬನ್ನಿಮಟ್ಟಿ ಮನೆಯವರು ಇದಕ್ಕೆ ಒಪ್ಪುತ್ತಿಲ್ಲ. ಬೇರೆ ಮದುವೆ ಮಾಡುತ್ತೇವೆ ಅಂತಾ ಹಠಕ್ಕೆ ಬಿದ್ದಿದ್ದಾರೆ. ಇತ್ತ ಡಿ.ಆರ್.ಪೊಲೀಸ್ ಕೂಡ ಮನೆಯವರ ಮಾತಿನಂತೆ ಬೇರೆ ಮದುವೆಯಾಗಲು ಸಿದ್ದನಾಗಿದ್ದಾನಂತೆ. ಇನ್ನು ಯುವತಿ ‘ಜನವರಿಯಲ್ಲಿ ಮಹಿಳಾ ಠಾಣೆಗೆ ದೂರು ಕೊಡಲು ಬಂದಿದ್ದೆ, ಪೊಲೀಸರು ಸಂಧಾನ ಮಾಡಿಕೊಂಡು ಮದುವೆ ಮಾಡಿಕೋ ಅಂದಿದ್ದರು. ಕಳೆದ ಐದು ವರ್ಷಗಳಿಂದ ನನ್ನ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ, ದೈಹಿಕವಾಗಿ ಬಳಿಸಿಕೊಂಡಿದ್ದಾನೆ. ಅಲ್ಲದೇ ಪೊಲೀಸ್ ವಾಹನದಲ್ಲಿಯೇ ಸುತ್ತಾಡಿಸಿದ್ದಾನೆ’. ನನಗೆ ಆದ ಅನ್ಯಾಯ ಬೇರೆ ಯುವತಿಗೆ ಆಗಬಾರದು. ನನಗೆ ನ್ಯಾಯ ಬೇಕು ಅಂತಿದ್ದಾಳೆ.
ಇದನ್ನೂ ಓದಿ:ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ಗೆ ಜೈಲುಶಿಕ್ಷೆ: ತಂದೆ, ಮಕ್ಕಳು 2 ವರ್ಷ ಜೈಲುಪಾಲು
ಇನ್ನು ಈ ಬಗ್ಗೆ ಆರೋಪಿ ರವಿ ಕೇಳಿದ್ರೆ, ನಾನು ಅವಳು ಫ್ರೆಂಡ್ ಆಗಿ ಇದ್ವಿ ಅಷ್ಟೆ, ಲವ್ ಮಾಡಿ ಲೈಂಗಿಕವಾಗಿ ಬಳಿಸಿಕೊಂಡು, ನಾಲ್ಕು ಸಲ ಅಬಾರ್ಷನ್ ಮಾಡಿಸಿಕೊಂಡಿದ್ದೆಲ್ಲಾ ಸುಳ್ಳು, ಬ್ಲ್ಯಾಕ್ಮೇಲ್ ಮಾಡಲು ಫ್ರೆಂಡ್ ಶೀಪ್ನಲ್ಲಿ ಮಾತನಾಡಿರುವ ಹೆಳಿಕೆಯೇ ಸತ್ಯ ಎಂದು ಸಾಬೀತು ಮಾಡಲು ಹೊರಟಿದ್ದಾಳೆ. ಅವರು ಮಾಡುವ ಆರೋಪ ಸತ್ಯ ಆಗಿದ್ರೆ, ಕೆಸ್ ದಾಖಲು ಮಾಡಲಿ ನಾನು ಎದುರಿಸುತ್ತೆನೆ. ನಾನು ಈ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡುವುದಿಲ್ಲ ಎಂದು ತಿಳಿಸಿದ್ದಾನೆ.
ಕಳೆದ ಐದು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸಿ, ಪ್ರೇಮ ಪ್ರಣಯ ಅಂತಾ ಕರೆದುಕೊಂಡು ಓಡಾಡಿದ್ದಾನೆ. ಈ ಬಗ್ಗೆ ಹಾವೇರಿ ಎಸ್ಪಿ ಡಾ.ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಡಿ.ಆರ್.ಪೊಲೀಸ್ ಸಿಬ್ಬಂದಿಯ ಮನೆಯವರು ಹಾಗೂ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಅನ್ಯಾಯವಾದ ಯುವತಿಗೆ ನ್ಯಾಯ ಕೊಡಸಿಬೇಕಿದೆ.
ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ