ಹಾವೇರಿ: ಹೋರಿ ಹಬ್ಬ, ಎತ್ತಿನ ಗಾಡಿ ಸ್ಪರ್ಧೆಗೆ ಷರತ್ತು ವಿಧಿಸಿ ಒಪ್ಪಿಗೆ ಕೊಟ್ಟ ಜಿಲ್ಲಾಡಳಿತ
ರೈತರ ಪ್ರೀತಿಯ ಹೊರಿ ಹಬ್ಬ ಹಾಗೂ ಎತ್ತಿನ ಗಾಡಿ ಶರ್ಯತ್ತಿಗೆ ಸ್ವಲ್ಪ ದಿನಗಳ ಕಾಲ ನಿರ್ಬಂಧ ವಿಧಿಸಲಾಗಿತ್ತು, ಇದೀಗ ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದೂ ಕೆಲವು ಷರತ್ತುಗಳನ್ನು ವಿಧಿಸಿದೆ.
ಹಾವೇರಿ: ರೈತರ ಪ್ರೀತಿಯ ಹೊರಿ ಹಬ್ಬ ಹಾಗೂ ಎತ್ತಿನ ಗಾಡಿ ಶರ್ಯತ್ತಿಗೆ ಸ್ವಲ್ಪ ದಿನಗಳ ಕಾಲ ನಿರ್ಬಂಧ ವಿಧಿಸಲಾಗಿತ್ತು, ಇದೀಗ ಸರ್ಕಾರ ಒಪ್ಪಿಗೆ ನೀಡಿದ್ದು, 18 ಷರತ್ತುಗಳನ್ನು ವಿಧಿಸಿದೆ. ಹೋರಿ, ಎತ್ತು ಹಾಗೂ ಕುದುರೆ ಬಗ್ಗೆ ವಿಶೆಷ ಪ್ರೀತಿ ಹೊಂದಿರುವ ಅನೇಕ ರೈತರು, ವರ್ಷದಲ್ಲಿ ಬರುವ ಜಾತ್ರೆ ಹಾಗೂ ಕಾರ ಹುಣ್ಣಿಮೆ ಸಮಯದಲ್ಲಿ ಎತ್ತಿನ ಗಾಡಾ, ಕುದುರೆ ಗಾಡಾ ಹಾಗೂ ಹೋರಿಗಳ ಶರ್ಯತ್ತುಗಳ ಸ್ಪರ್ಧೆ ಆಯೋಜನೆ ಮಾಡುವುದರ ಮೂಲಕ ತಾವು ಸಾಕಿರುವ ಜಾನುವಾರಗಳ ಶಕ್ತಿ ಪ್ರದರ್ಶನ ಮಾಡುವುದರೊಂದಿಗೆ ಸಂತಸ ವ್ಯಕ್ತಪಡಿಸುವುದು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ವರ್ಷಗಳಿಂದ ನಡೆದು ಬಂದಿದೆ. ತಮ್ಮ ಜಾನುವಾರಗಳು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯಬೇಕೆಂದು ಪ್ರಾಣಿಗಳ ಮೇಲೆ ಕ್ರೌರ್ಯ ಎಸಗಲಾಗುತ್ತಿತ್ತು. 2017 ರಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ವಿಧೆಯಕಕ್ಕೆ ತಿದ್ದಪಡಿ ತರುವುದರ ಮೂಲಕ, ಕಲಂ 2ಎ(i) (ಎ)(ಎಎ) ರನ್ವಯ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.
ಎತ್ತಿನ ಗಾಡಾ ಶರ್ಯತ್ತಿಗೆ ಷರತ್ತುಗಳು ಈ ಕೆಳಗಿನಂತಿವೆ
1. ಆಯೋಜಕರು ಕನಿಷ್ಠ 15 ದಿನಗಳ ಒಳಗೆ ಸ್ಪರ್ಧೆಗೆ ಅನುಮತಿ ಕೇಳಬೇಕು.
2. ಪಶುಸಂಗೋಪಣೆ, ಕಂದಾಯ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂಧಿ ಸ್ಪರ್ದೆವೇಳೆ ಹಾಜರಿರಬೇಕು.
3. 38 ಡಿಗ್ರಿ ಸೆಲ್ಸಿಯಸ್ ಮಿರಿದ ಉಷ್ಣಾಂಶ ಪ್ರದೇಶದಲ್ಲಿ ಸ್ಪರ್ಧೆ ಆಯೋಜನೆ ಮಾಡಬಾರದು.
4. ಎತ್ತುಗಳನ್ನು ಓಡಿಸುವಾಗ ಚಾಟಿ, ಕೋಲುಗಳಿಂದ ಪ್ರಹಾರ ಮಾಡುವಂತಿಲ್ಲ.
5. ಎತ್ತುಗಳು ಉದ್ರೇಕವಾಗಿ ಓಡಲು ಮೆಣಸಿನಕಾಯಿ ಪುಡಿ ಹಾಗೂ ರಾಸಾಯನಿಕಗಳನ್ನು ಎತ್ತುಗಳ ದೇಹಕ್ಕೆ ಬಳಸುವಂತಿಲ್ಲ.
6. ಪಶು ಇಲಾಖೆಯಿಂದ ಎತ್ತುಗಳ ದೈಹಿಕ ಸ್ಥಿತಿ ಬಗ್ಗೆ ಸರ್ಟಿಫಿಕೇಟ್ ಪಡೆದಿರಬೇಕು.
7. ಎತ್ತುಗಳ ಓಟದ ಸ್ಪರ್ಧೆಯನ್ನು ಅರ್ಥಿಕ ಲಾಭಕ್ಕಾಗಿ ಆಯೋಜಿಸುವಂತಿಲ್ಲ.
ಹೀಗೆ ಒಟ್ಟು 18 ಶರತ್ತುಗಳನ್ನು ವಿಧಿಸಿ ಸರ್ಕಾರ ಎತ್ತಿನ ಗಾಡಿ ಶರ್ಯತ್ತಿಗೆ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ:ಹೋರಿ ಹಬ್ಬದ ವಿಶೇಷ: ಹೋರಿಗಳು ಮಿಂಚಿನ ಓಟ ಓಡಿದ್ದು ಎಲ್ಲಿ ಗೊತ್ತಾ?
ಒಟ್ಟಾರೆಯಾಗಿ ರೈತರು ತಾವು ಪ್ರೀತಿಯಿಂದ ಸಾಕುವ ಪ್ರಾಣಿಗಳ ಸಾಮರ್ಥ್ಯವನ್ನು ಸಾರ್ವಜನಿಕರ ಮುಂದೆ ತೊರ್ಪಡಿಸುವುದರೊಂದಿಗೆ ಮನರಂಜನೆ ನೀಡುವುದರ ಮೂಲಕ ಸಂತಸ ಗೊಳ್ಳುತ್ತಿದ್ದು, ಸರ್ಕಾರ ವಿಧಿಸಿದ ಷರತ್ತನ್ನು ಜನ ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Sun, 22 January 23