Haveri News: ಹಾವೇರಿ ಸಾಹಿತ್ಯ ಸಮ್ಮೇಳನ; ಪಾರ್ಕಿಂಗ್​, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾ ಟ್ರಾಫಿಕ್ ಪೋಲಿಸರಿಂದ ವಿನೂತನ ಪ್ರಯೋಗ

| Updated By: ವಿವೇಕ ಬಿರಾದಾರ

Updated on: Dec 28, 2022 | 3:34 PM

ಜನವರಿ 6, 7 ಹಾಗೂ 8 ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

Haveri News: ಹಾವೇರಿ ಸಾಹಿತ್ಯ ಸಮ್ಮೇಳನ; ಪಾರ್ಕಿಂಗ್​, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾ ಟ್ರಾಫಿಕ್ ಪೋಲಿಸರಿಂದ ವಿನೂತನ ಪ್ರಯೋಗ
ಸಾಹಿತ್ಯ ಸಮ್ಮೇಳನದ ಸಂಚಾರ ನಿಯಂತ್ರಣಕ್ಕೆ ಕ್ಯು ಆರ್​ ಕೋಡ್
Follow us on

ಹಾವೇರಿ: ಜನವರಿ 6, 7 ಹಾಗೂ 8 ರಂದು ದಾಸಶ್ರೇಷ್ಠ ಕನಕದಾಸರ ನಾಡು ಹಾವೇರಿಯಲ್ಲಿ ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಧ್ಯೆಯದೊಂದಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Akhila Bharata sahitya sammelana) ನಡೆಯಲಿದೆ. ಈ ಸಮ್ಮೇಳನಕ್ಕೆ ಬರುವ ವಾಹನ ನಿಲುಗಡೆಗಾಗಿ ಜಿಲ್ಲಾ ಸಂಚಾರಿ ಪೋಲಿಸ್ ವಿನೂತನ ಪ್ರಯೋಗ ಮಾಡಿದೆ. ಹೌದು ಹಾವೇರಿ (Haveri) ಜಿಲ್ಲಾ ಸಂಚಾರಿ ಪೋಲಿಸರು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ಯು ಆರ್​ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ.

ಸಮ್ಮೇಳನಕ್ಕೆ ಬರುವವರಿಗಾಗಿ ಸುಲಲಿತ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾ ಸಂಚಾರ ಪೋಲಿಸರು ಕ್ಯು ಆರ್​ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದು, ಸಂಚಾರ ಮಾರ್ಗಸೂಚಿಯನ್ನು ಗುಗಲ್ ಮ್ಯಾಪ್​ನಲ್ಲಿ ಅತಿ ಸರಳವಾಗಿ ತಿಳಿಯಬಹುದಾಗಿದೆ. ಇದರಿಂದ ಜನರು ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ದಿನದ ವೇತನ ನೀಡುವಂತೆ ಜಿಲ್ಲಾ ಪೊಲೀಸ್​ ಇಲಾಖೆಗೆ ಮಹೇಶ್ ಜೋಶಿ ಪತ್ರ

ಸಂಚಾರ ಮಾರ್ಗಸೂಚಿ

  1. ಹಾವೇರಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನ, ಸಮ್ಮೇಳನದ ಸ್ಥಳಕ್ಕೆ ಬಸ್ ವ್ಯವಸ್ಥೆ
  2. ಹುಬ್ಬಳ್ಳಿ ಮಾರ್ಗದಿಂದ ಬರುವ ವಿವಿಐಪಿಗಳ ಕಾರ್​ ಹುಬ್ಬಳ್ಳಿ ಬೈಪಾಸ್​ನಲ್ಲಿಯೆ ಪಾರ್ಕಿಂಗ್ ವ್ಯವಸ್ಥೆ
  3. ಕೆ.ಎಲ್.ಇ ಶಾಲೆಯ ಆವರಣದಲ್ಲಿ ಗಣ್ಯರಿಗಾಗಿ ಹೆಲಿಪ್ಯಾಡ್
  4. ಹಾನಗಲ್ ರಸ್ಥೆಯ ಮಾರ್ಗದಿಂದ ದೈನಂದಿನ ಲಘು ವಾಹನ ಮತ್ತು ಮೋಟಾರಗಳ ಸಂಚಾರ.
  5. ಸಮ್ಮೇಳನದ ಸ್ಥಳದ ಸುತ್ತಲು ಕೆ.ಎಸ್.ಆರ್.ಟಿ.ಸಿ ಬಸ್​ಗಳ ಸಂಚಾರ ಹಾಗೂ ನಿಲುಗಡೆ.
  6. ಹುಬ್ಬಳ್ಳಿ ಮಾರ್ಗದಿಂದ ಬರುವ ವಾಹನಗಳನ್ನು ಹಾನಗಲ್ ಬೈಪಾಸ್​ನಿಂದ ಹಾವೇರಿ ನಗರಕ್ಕೆ ಬರಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ.
  7. ದಾವಣಗೆರೆಯಿಂದ ಬರುವ ವಾಹನ ಹಾಗೂ ಬಸ್​ಗಳಿಗೆ ಹಾನಗಲ್ ಬೈ ಪಾಸ್​ನಿಂದ ತೆರಳಲು ಮಾರ್ಗ ಸೂಚಿಸಲಾಗಿದೆ.
    ಇವೆಲ್ಲವು ಮೊಬೈಲ್​ನಲ್ಲಿ ಗೂಗಲ್ ಮ್ಯಾಪ್​ನಲ್ಲಿಯೇ ಲಭ್ಯವಾಗುವಂತೆ ಹಾವೇರಿ ಸಂಚಾಇ ಪೋಲಿಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Wed, 28 December 22