ಹಾವೇರಿ: ಜಿಲ್ಲೆಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೆಳನ (Kannada Sahitya Sammelana) ಪ್ರಯುಕ್ತ ಹಾವೇರಿ ಪಟ್ಟಣದ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜನವರಿ 6, 7, 8ರಂದು ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹೀಗಾಗಿ ಜನವರಿ 6 ಮತ್ತು 7ರಂದು ಹಾವೇರಿಯ ಐದು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಹಾವೇರಿ, ಗುಡ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್ ಜೆ.ಎಂ ಪದವಿ ಪೂರ್ವ ಕಾಲೇಜು, ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ಐದು ಕಾಲೇಜಿಗೆ ರಜೆ ನೀಡಲಾಗಿದೆ. ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವಂತಾಗಳು ರಜೆ ನೀಡಲಾಗಿದೆ.
ಇದನ್ನೂ ಓದಿ: ಏಲಕ್ಕಿ ಕಂಪಿನ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ತಯಾರಾಗುತ್ತಿವೆ ಸಾವಿರಾರು ಯಾಲಕ್ಕಿ ಹಾರಗಳು!
ಹಾವೇರಿ: ಜನವರಿ 6, 7 ಹಾಗೂ 8 ರಂದು ದಾಸಶ್ರೇಷ್ಠ ಕನಕದಾಸರ ನಾಡು ಹಾವೇರಿಯಲ್ಲಿ ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಧ್ಯೆಯದೊಂದಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಬರುವ ವಾಹನ ನಿಲುಗಡೆಗಾಗಿ ಜಿಲ್ಲಾ ಸಂಚಾರಿ ಪೋಲಿಸ್ ವಿನೂತನ ಪ್ರಯೋಗ ಮಾಡಿದೆ. ಹೌದು ಹಾವೇರಿ (Haveri) ಜಿಲ್ಲಾ ಸಂಚಾರಿ ಪೋಲಿಸರು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ.
ಸಮ್ಮೇಳನಕ್ಕೆ ಬರುವವರಿಗಾಗಿ ಸುಲಲಿತ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾ ಸಂಚಾರ ಪೋಲಿಸರು ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದು, ಸಂಚಾರ ಮಾರ್ಗಸೂಚಿಯನ್ನು ಗುಗಲ್ ಮ್ಯಾಪ್ನಲ್ಲಿ ಅತಿ ಸರಳವಾಗಿ ತಿಳಿಯಬಹುದಾಗಿದೆ. ಇದರಿಂದ ಜನರು ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:03 pm, Mon, 2 January 23