ಹಾವೇರಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರ ತವರು ಜಿಲ್ಲೆಯಲ್ಲಿ ಆರಂಭವಾಗಿರುವ ವೈದ್ಯಕೀಯ ಕಾಲೇಜ್ಗೆ ಯಾವುದೇ ಸಮಸ್ಯೆ ಇರಲ್ಲ ಎಂಬ ಆಶಯದಿಂದ ಪಿಯುಸಿ ಮತ್ತು ಸಿಇಟಿ ಯಲ್ಲಿ ಉತ್ತಮ ಅಂಕ ಪಡೆದ 149 ವಿದ್ಯಾರ್ಥಿಗಳು ಇಲ್ಲಿ ಅಡ್ಮಿಷನ್ ಪಡೆದಿದ್ದಾರೆ. ಆದರೆ ಇಲ್ಲಿ ಡಿನ್ ಮತ್ತು ಓರ್ವ ಪ್ರಾದ್ಯಾಪಕರು ಬಿಟ್ಟರೆ ಪಾಠ ಬೋಧನೆ ಮಾಡಲು ಶಿಕ್ಷಕರೆ ಇಲ್ಲ. ಕಳೆದ ವರ್ಷ ಸಂದರ್ಶನ ಮಾಡಿದ್ರೂ ಕೂಡ ಇದುವರೆಗೂ ಓರ್ವ ಶಿಕ್ಷಕನನ್ನು ಕೂಡ ನೇಮಕ ಮಾಡಿಕೊಳ್ಳದ ಹಿನ್ನಲೆ ವಾರದಲ್ಲಿ ಓಮ್ಮೆ ಮಾತ್ರ ಕ್ಲಾಸ್ ನಡೆಯುತ್ತಿದೆ. ಉಳಿದ ದಿನ ಹಾಸ್ಟೇಲ್ನಲ್ಲಿಯೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಜಗದೀಶ್ ಶೇಟ್ಟರ್ ವಿಧಾನಸಭೆ ಕಲಾಪದಲ್ಲಿ ಆರೋಗ್ಯ ಸಚಿವರಿಗೆ ತರಾಟೆಗೆ ತೆಗೆದುಕೊಂಡರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ.
ಕಳೆದ ವರ್ಷ ಆರಂಭವಾಗಿರುವ ಸರ್ಕಾರಿ ಮೇಡಿಕಲ್ ಕಾಲೇಜ್ಗೆ, ಹಾವೇರಿ ಹೊರವಲಯದ ದೇವಗಿರಿ, ಯಲ್ಲಾಪುರ ಬಳಿ 56 ಎಕರೆ ಜಾಗದಲ್ಲಿ ಸುಮಾರು 478 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದುವರೆಗೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಡದಲ್ಲಿಯೇ ಪಾಠ ಮಾಡಲಾಗುತ್ತಾ ಇದೆ. ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ನಲ್ಲೂ ವಿದ್ಯಾರ್ಥಿಗಳು ಇದ್ದೂ ಅಲ್ಲಿಯೂ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಜಾಸ್ತಿ ಆಗಿದೆ. ಇನ್ನೊಂದು 15 ದಿನಗಳಲ್ಲಿ ಬೋಧಕರನ್ನು ನೆಮಕ ಮಾಡದೆ ಇದ್ದರೆ, ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಚಿವ ರುದ್ರಪ್ಪಾ ಲಮಾಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಶಿಕ್ಷಕರಿಬ್ಬರ ಜಗಳದಿಂದ ಮೇಗಲಹುಂಡಿ ಸರ್ಕಾರಿ ಫ್ರೌಢಶಾಲೆ ಬಂದ್; ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಒಟ್ಟಾರೆಯಾಗಿ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿಗಳು ಕಷ್ಟ ಆನುಭವಿಸುತ್ತಿದ್ದು, ಇನ್ನಾದ್ರೂ ಮುಖ್ಯಮಂತ್ರಿಗಳು ತವರು ಜಿಲ್ಲೆ ಎಂಬ ಭಾವನೆಯಿಂದ ಸಮಸ್ಯೆಯನ್ನು ಬೇಗ ಪರಿಹರಿಸ್ತಾರಾ ಎಂಬುವುದನ್ನ ಕಾದು ನೋಡಬೆಕಿದೆ.
ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ