ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ರ ಮೂರ್ತಿ(Chhatrapati Shivaji Maharaj Statue) ಪ್ರತಿಷ್ಠಾಪನೆಗೆ ಸ್ಥಳ ವಿವಾದ ಎದುರಾಗಿದೆ. ಹಾವೇರಿ ತಾಲೂಕಿನ ಹಂದಿನೂರು ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದ ಶಿವಾಜಿ ಮೂರ್ತಿಯನ್ನು ಕಿತ್ತು ಬೇರೆಡೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಜಾಡರ್ ಸಮುದಾಯದ ವ್ಯಕ್ತಿ, ವಕ್ಫ್ ಬೋರ್ಡ್ ಆಸ್ತಿಯನ್ನ ಖರೀದಿಸಿದ್ದ. ಜಾಡರ್ ಖರೀದಿಸಿದ ಜಾಗದ ಪಕ್ಕದಲ್ಲಿಯೇ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದ್ರೆ ಜಾಡರ ಕುಟುಂಬ ಏಕಾಏಕಿ ಮೂರ್ತಿಯನ್ನ ಕಿತ್ತು ಬೇರೆ ಕಡೆ ಇಟ್ಟಿದೆ. ಅಷ್ಟೇ ಅಲ್ಲದೆ ತಾವು ಖರೀದಿಸಿದ ಜಾಗಕ್ಕೆ ತಂತಿ ಬೇಲಿ ಹಾಕಲಾಗಿದೆ. ಹೀಗಾಗಿ ಸ್ಥಳೀಯರು ಶಿವಾಜಿ ಮೂರ್ತಿಯನ್ನ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಜಾಗವನ್ನ ಸರ್ವೆ ಮಾಡಿಸಿ, ಶಿವಾಜಿ ಮೂರ್ತಿಗೆ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದರೆ. ಏಕಾಏಕಿ ಶಿವಾಜಿ ಮೂರ್ತಿಯನ್ನ ತೆರವುಗೊಳ್ಳಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಶಿವಾಜಿ ಮೂರ್ತಿಗೆ ಅಪಮಾನ ಮಾಡಿದ್ದಾರೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಮತ್ತಷ್ಟು ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:22 am, Mon, 1 May 23