ಅತ್ಯಾಚಾರ ಕೇಸ್: ಬೇಲ್ ಸಿಕ್ಕ ಖುಷಿಯಲ್ಲಿ ರೋಡ್​ ಶೋ ಮಾಡಿದ್ದ ಆರೋಪಿಗಳು ಮತ್ತೆ ಪೊಲೀಸ್ ವಶಕ್ಕೆ

ಅತ್ಯಾಚಾರ ಪ್ರಕರಣದ ಏಳು ಆರೋಪಿಗಳು ಜಾಮೀನು ಪಡೆದ ನಂತರ ರೋಡ್ ಶೋ ಮಾಡಿದ್ದಾರೆ. ಸಂತ್ರಸ್ತೆಯು ಆರೋಪಿಗಳನ್ನು ಗುರುತಿಸಲು ವಿಫಲಳಾದ ಕಾರಣ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನು ಪಡೆದ ನಂತರ ಆರೋಪಿಗಳು ಹಾವೇರಿಯಲ್ಲಿ ರೋಡ್ ಶೋ ವೈರಲ್ ನಡೆಸಿದರು. ಪೊಲೀಸರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.

ಹಾವೇರಿ, ಮೇ 23: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳು ರೋಡ್​ ಶೋ ಮಾಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಆರೋಪಿತರನ್ನು ಗುರುತಿಸಲು ವಿಫಲವಾದ ಹಿನ್ನಲೆಯಲ್ಲಿ ಹಾವೇರಿ (Haveri) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ (Court) ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. A1- ಅಪ್ತಾಬ್ ಚಂದನಕಟ್ಟಿ, A2- ಮದರ್ ಸಾಬ್ ಮಂಡಕ್ಕಿ, A3- ಸಮಿವುಲ್ಲಾ ಲಾಲನವರ, A7- ಮಹಮದ್ ಸಾದಿಕ್ ಅಗಸಿಮನಿ, A8- ಶೊಯಿಬ್ ಮುಲ್ಲಾ, A11- ತೌಸಿಪ್ ಚೋಟಿ ಮತ್ತು A13- ರಿಯಾಜ್ ಸಾವಿಕೇರಿ ಜಾಮೀನು ಪಡೆದವರು.

2024ರ ಜನವರಿ 8 ರಂದು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ಥೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು 19 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಜೈಲುಪಾಲಾಗಿದ್ದ 19 ಮಂದಿ ಆರೋಪಿಗಳ ಪೈಕಿ 12 ಜನರು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಹಲವು ಬಾರಿ ತಿರಸ್ಕರಿಸಿತ್ತು. ಇದೀಗ ಸಂತ್ರಸ್ಥೆ ನ್ಯಾಯಾಲಯದ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ಜಾಮೀನು ಸಿಗುತ್ತಿದ್ದಂತೆ ಆರೋಪಿಗಳು ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರ ಪಟ್ಟಣದವರೆಗೆ ರೋಡ್ ಶೋ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಐದು ಕಾರುಗಳಲ್ಲಿ 20 ಕ್ಕೂ ಹೆಚ್ಚು ಹಿಂಬಾಲಕರ ಜೊತೆ ಮೆರವಣಿಗೆ ಮಾಡಿದ್ದಾರೆ.

ಇದನ್ನೂ ಓದಿ
ಗ್ಯಾಂಗ್ ರೇಪ್ ಆಗಿದೆ ಎಂದು ಪೊಲೀಸರನ್ನೇ ಬೇಸ್ತು ಬೀಳಿಸಿದ ಮಹಿಳೆ!
ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾಲು ಒಕ್ಕೂಟ: ಲೀಟರ್​ ಹಾಲಿನ ದರ ಏರಿಕೆ
ಶುಭ ಸುದ್ದಿ ನೀಡಿದ ರೈಲ್ವೆ: ಈ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ
ಮ್ಯಾನ್ಮಾರ್‌, ಬ್ಯಾಂಕಾಕ್​ ಭೂಕಂಪ: ಕನ್ನಡಿಗರ ಪರಿಸ್ಥಿತಿ ಹೇಗಿದೆ?

ಇದನ್ನೂ ಓದಿ: ಅನ್ಯಕೋಮಿನ ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ ಯುವತಿ ಆತ್ಮಹತ್ಯೆ, ಆರೋಪ

ರೋಡ್​ ಶೋ ನಡೆಸಿದ್ದ ಆರೋಪಿಗಳು ಪೊಲೀಸರ ವಶಕ್ಕೆ

ಇನ್ನು, ರೋಡ್​ ಶೋ ನಡೆಸಿದ್ದ ಏಳು ಮಂದಿ ಆರೋಪಿಗಳು ಶುಕ್ರವಾರ ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಹಾಜರಾಗಿ ವಾಪಾಸ್ ಹೊರ ಬರುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಮೇಲೆ ಮತ್ತೆ ಪ್ರಕರಣ ದಾಖಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಜಾಮೀನು ಪಡೆಯುತ್ತಿದ್ದಂತೆ ರೋಡ್​ ಶೋ ಮಾಡಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೇಲ್ ಷರತ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Fri, 23 May 25