Bullock Cart Race: ಹಾವೇರಿಯಲ್ಲಿ ಖಾಲಿ ಗಾಡಾ ಓಟದ ಝಲಕ್ ಇಲ್ಲಿದೆ ನೋಡಿ
ಬರಗಾಲದ ನಡುವೆಯೂ ಹಾವೇರಿ ರೈತರು ಗ್ರಾಮೀಣ ಕ್ರೀಡೆಯನ್ನು ಆಯೋಜಿಸಿ ಖುಷಿ ಪಟ್ಟರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಗಾಡಾ ಸ್ಪರ್ಧೆಗೆ ವಿಧಿಸಿದ್ದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ ಯಶಸ್ವಿ ಸ್ಪರ್ಧೆ ಮಾಡಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ರೈತರು ಕ್ರೀಡೆಗಳನ್ನು ಆಯೋಜಿಸಿ ಖುಷಿ ಪಡುತ್ತಿದ್ದಾರೆ. ಬಹುತೇಕ ಕೃಷಿ ಚಟುವಟಿಕೆಗಳು ಮುಕ್ತಾಯವಾದ ನಂತರ, ತನ್ನ ಸಹಪಾಠಿ ಜಾನುವಾರುಗಳ ಕ್ರೀಡೆಗಳನ್ನ ಆಯೋಜಿಸಿ ಮನರಂಚನೆ ಪಡುತ್ತಿದ್ದಾರೆ . ದನ ಬೆದರಿಸುವುದು, ಎತ್ತಿನಗಾಡಿ ಓಟ ಮತ್ತು ಟಗರು ಕಾಳಗ ಹೀಗೆ ಗ್ರಾಮೀಣ ಸೊಗಡಿನ ಕ್ರೀಡೆ ನೋಡಲು ಬಲು ಚಂದ. ಹಾವೇರಿಯಲ್ಲಿ ಆಯೋಜಿಸಿದ ಖಾಲಿ ಗಾಡಾ ಓಟದ ಝಲಕ್ ಇಲ್ಲಿದೆ ನೋಡಿ
ಒಂದಡೆ ಮಿಂಜಿನ ನಂತೆ ಓಡಿ ದುಳೆಬ್ಬಿಸುತ್ತಿರುವ ಎತ್ತುಗಳು. ಇನ್ನೊಂದಡೆ ಗಾಡಿ ಮೇಲೆ ಕುಳಿತು ಸಿಳ್ಳೆ,ಕೇಕೆ ಚಪ್ಪಾಳೆ ಹೊಡೆದು ಎತ್ತುಗಳನ್ನು ಓಡಿಸುತ್ತಿರುವ ರೈತರು ಮೊತ್ತೊಂದಡೆ ಎತ್ತುಗಳು ಓಡಿದ ಅಂತರ ಗುರುತು ಮಾಡುತ್ತಿರುವ ಆಯೋಜಕರು ಇತ್ತ ಗಾಡಾ ಓಟವನ್ನು ಕಣ್ಣು ತುಂಬಿಕೊಂಡು ಮನರಂಜನೆ ಪಡುತ್ತಿರುವ ರೈತ ಸಮೂಹ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೇಳ್ಳಗಟ್ಟಿ ಗ್ರಾಮದ ಹೊರ ಒಲಯದಲ್ಲಿ.
ಈ ಗ್ರಾಮದಲ್ಲಿ ಇರುವ ಬಸವೇಶ್ವರ ಯುವಕ ಮಂಡಳಿ ರೈತರನ್ನು ರಂಜಿಸಲು ಪ್ರಪ್ರಥಮ ರಾಜ್ಯ ಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಿದ್ದರು. ಇಲ್ಲಿ ಅತೀ ವೇಗದಲ್ಲಿ ಓಡಿದ ಜೋಡಿ ಎತ್ತಿಗೆ ಮೊದಲನೇ ಬಹುನಾ ಒಂದು ಎಚ್.ಎಫ್ ಬೈಕ್. ಎರಡನೇ ಬಹುಮಾನ ಐದು ಗ್ರಾಮ ಚಿನ್ನ ನೀಡಿ ಗೌರವಿಸಿದರು. ಈ ಸ್ಪರ್ಧೆಗೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ರೈತರು ಆಗಮಿಸಿದ್ದರು ದೂರ ದೂರದ ಊರುಗಳಿಂದ ಆಗಮಿಸಿದ ರೈತರು ತಮ್ಮ ನೆಚ್ಚಿನ ಹೋರಿಗಳನ್ನ ಗಾಡಿಗೆ ಕಟ್ಟಿ ಓಡಿಸಿದರು.
ಕೆಲ ಹೋರಿಗಳು ಧೂಳೆಬ್ಬಿಸಿದರೆ, ಇನ್ನೂ ಕೆಲ ಎತ್ತುಗಳು ಮಿಂಚಿನಂತೆ ಓಡಿ ನೋಡುಗರ ಮೈಜುಮ್ಮೆನಿಸಿದವು. ರೈತರ ಈ ಹುಮ್ಮಸ್ಸಿಗೆ ಪ್ರೇಕ್ಷಕರು ಚಪ್ಪಾಳೆ ಸೀಟಿ ಕೇಕೆ ಹಾಕಿ ಉತ್ತೇಜನ ನೀಡಿದರು. ಪ್ರತಿ ವರ್ಷವು ಉತ್ತರ ಕರ್ನಾಟಕ ಭಾಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ಈ ಸ್ಪರ್ಧೆಗಳು ಮುಂಗಾರು ಆರಂಭವಾಗುವರೆಗೆ ಮುಂದುವರೆಯುತ್ತವೆ.
ಈ ಕ್ರೀಡೆ ಎಂದರೆ ರೈತರಿಗೆ ಬಹಳ ಅಚ್ಚು ಮೇಚ್ಚು. ಕೃಷಿ ಕೆಲಸದ ಜೊತೆಗೆ ಬಂಡಿ ಓಟಕ್ಕೆ ಅಂತಲೇ ಎತ್ತುಗಳ ಮಾಲೀಕರು ಎತ್ತುಗಳನ್ನ ಕಟ್ಟುಮಸ್ತಾಗಿ ಬೆಳೆಸಿರುತ್ತಾರೆ. ಹುರುಳಿ ಕಾಳು, ಜೋಳದ ನುಚ್ಚು, ಹಿಂಡಿ ಸೇರಿದಂತೆ ವಿವಿಧ ರೀತಿಯ ಪೌಷ್ಠಿಕಾಂಶಭರಿತ ಪದಾರ್ಥಗಳನ್ನ ತಿನ್ನಿಸಿ ಮಾಲೀಕರು ಎತ್ತುಗಳನ್ನ ಭರ್ಜರಿಯಾಗಿ ರೆಡಿ ಮಾಡಿ ಅಖಾಡಕ್ಕೆ ತಂದಿರುತ್ತಾರೆ. ಒಂದು ನಿಮಿಷದಲ್ಲಿ ಯಾವ ಜೋಡಿ ಎತ್ತುಗಳು ಹೆಚ್ಚಿನ ದೂರ ಓಡುತ್ತವೆಯೋ ಆ ಜೋಡಿ ಎತ್ತುಗಳಿಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಗುತ್ತೆ.
ಬೆಳಿಗ್ಗೆಯಿಂದ ಬೇರೆ ಬೇರೆ ಊರುಗಳಿಂದ ಬಂದ ರೈತರು ತಮ್ಮ ಹೋರಿಗಳ ತಾಕತ್ತು ಪರೀಕ್ಷೆ ಮಾಡಿದರು. ಒಂದು ನಿಮಿಷದಲ್ಲಿ ಕೆಲವು ಜೋಡಿಗಳು 14 ನೂರು ಅಡಿವರೆಗೆ ಓಡಿದರೆ, ಕೆಲವು ಜೋಡಿಗಳು 15, 16, 18 19 ನೂರು ಅಡಿಗಳವರೆಗೆ ಓಡಿ ನೋಡುಗರ ಗಮನ ಸೆಳೆದವು. ಕೆಲವು ಜೋಡಿ ಎತ್ತುಗಳ ಅಭಿಮಾನಿಗಳು ಎತ್ತುಗಳು ಅಖಾಡದಲ್ಲಿ ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ ಜೊತೆಗೆ ಓಡಿ ಹುರುಪು ತುಂಬಿದರು.
ಇನ್ನು ಗಾಡಾ ಓಡೋ ಅಖಾಡದ ಅಕ್ಕಪಕ್ಕದಲ್ಲಿ ನಿಂತಿರುವ ರೈತರು ಹಾಗೂ ಎತ್ತುಗಳ ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಎತ್ತುಗಳಿಗೆ ಶರವೇಗದ ಓಟ ಓಡಲು ಹುಮ್ಮಸ್ಸು ತುಂಬಿದರು ಎತ್ತುಗಳ ಮಾಲೀಕರಂತೂ ತಮ್ಮ ತಮ್ಮ ಎತ್ತುಗಳು ಭರ್ಜರಿಯಾಗಿ ಓಡುವುದನ್ನು ನೋಡಿ ಸಂತೋಷಪಟ್ಟರು.
(ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ)