ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಅಪರಾಧಿಗೆ ಗಲ್ಲುಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2023 | 8:24 PM

Haveri News: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಅಪರಾಧಿ ಶೆಟ್ಟಪ್ಪ ವಡ್ಡರ್‌ಗೆ ಗಲ್ಲುಶಿಕ್ಷೆ ಮತ್ತು 1.5 ಲಕ್ಷ ರೂ. ದಂಡ ವಿಧಿಸಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ನಿಂಗೌಡ ಪಾಟೀಲರಿಂದ ತೀರ್ಪು ಪ್ರಕಟಿಸಲಾಗಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಅಪರಾಧಿಗೆ ಗಲ್ಲುಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ
ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Follow us on

ಹಾವೇರಿ, ಅಕ್ಟೋಬರ್​​​ 22: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಅಪರಾಧಿ ಶೆಟ್ಟಪ್ಪ ವಡ್ಡರ್‌ಗೆ ಗಲ್ಲುಶಿಕ್ಷೆ (Death penalty) ಮತ್ತು 1.5 ಲಕ್ಷ ರೂ. ದಂಡ ವಿಧಿಸಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ನಿಂಗೌಡ ಪಾಟೀಲರಿಂದ ತೀರ್ಪು ಪ್ರಕಟಿಸಲಾಗಿದೆ. ದಂಡದ ಹಣದಲ್ಲಿ  75 ಸಾವಿರ ರೂ. ಮತ್ತು ಪೋಷಕರಿಗೆ 10 ಲಕ್ಷ ರೂ. ಪರಿಹಾರ ನೀಡಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. 2019ರ ಮೇ 6ರಂದು ಶಿಗ್ಗಾಂವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ನೇತ್ರಾವತಿ ಪೀಕ್​ಗೆ ಟ್ರಕ್ಕಿಂಗ್‌ಗೆ ತೆರಳಿದ್ದ ವೈದ್ಯೆಯ ಕಾಲುಮುರಿತ

ಚಿಕ್ಕಮಗಳೂರು: ನೇತ್ರಾವತಿ ಪೀಕ್​ಗೆ ಟ್ರಕ್ಕಿಂಗ್ ಮುಗಿಸಿ ವಾಪಸ್​​​ ಬರುತ್ತಿದ್ದ ವೈದ್ಯೆಯ ಕಾಲುಮುರಿದಿರುವಂತಹ ಘಟನೆ ಜಿಲ್ಲೆಯ ಕಳಸ‌ ತಾಲೂಕಿನ ನೇತ್ರಾವತಿ ಪೀಕ್​ನಲ್ಲಿ ನಡೆದಿದೆ. ಸ್ನೇಹಿತರ ಜೊತೆ ಇಂದು ಟ್ರಕ್ಕಿಂಗ್​ಗೆ ನೇತ್ರಾವತಿ ಪೀಕ್​ನ ತಿರುವಿನಲ್ಲಿ ಮೈಸೂರು ಮೂಲದ ವೈದ್ಯೆ ಮಾಧುರಿ ಜಾರಿ ಬಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ: ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಗಳನ್ನೇ ಹತ್ಯೆ ಮಾಡಿದ ತಂದೆ

ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಿರಿದಾದ ಎತ್ತರದ ಬೆಟ್ಟದಿಂದ ಜಾರಿ ಬಿದ್ದ ವೈದ್ಯೆಯನ್ನ ಪ್ರವಾಸಿಗರು ರಕ್ಷಿಸಿದ್ದಾರೆ. ಕಳಸ‌ ಪಟ್ಟಣದ ಖಾಸಗಿ ಆಸ್ಪತ್ರೆಗೆ ವೈದ್ಯೆ ಮಾಧುರಿಯನ್ನು ದಾಖಲು ಮಾಡಲಾಗಿದೆ.

ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ಸವಾರ ಸಾವು

ಧಾರವಾಡ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ‌ ಗ್ರಾಮದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಧರ್ಮರಾಜ್ ಕೇದಾರಿ(50) ಮೃತ ಬೈಕ್ ಸವಾರ. ತಾರಿಹಾಳದಿಂದ ಮಂಡಿಹಾಳಕ್ಕೆ ಬೈಕ್ ಮೇಲೆ ಹೊರಟಿದ್ದಾಗ ಘಟನೆ ಸಂಭವಿಸಿದೆ.

ಸ್ವಿಫ್ಟ್ ಕಾರು, ಬೊಲೆರೊ ವಾಹನದ ನಡುವೆ ಡಿಕ್ಕಿ-ಓರ್ವನ ಸ್ಥಿತಿ ಗಂಭೀರ

ಆನೇಕಲ್: ಸ್ವಿಫ್ಟ್ ಕಾರು, ಬೊಲೆರೊ ವಾಹನದ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಅತ್ತಿಬೆಲೆ ಸಮೀಪ ನಡೆದಿದೆ. ಅತಿವೇಗವಾಗಿ ಬಂದು ಬೊಲೆರೊ ವಾಹನಕ್ಕೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಛಿದ್ರವಾಗಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಹೆದ್ದಾರಿಯ ಡಿವೈಡರ್ ಮುರಿದುಬಿದಿದ್ದೆ. ಚಂದಾಪುರದಿಂದ ಅತ್ತಿಬೆಲೆ ಮಾರ್ಗದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಎನ್​ಹೆಚ್​ಎಐ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.