ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಬರುತ್ತೆ ಪಶು ಸಂಜೀವಿನಿ

| Updated By: ಆಯೇಷಾ ಬಾನು

Updated on: Aug 29, 2021 | 12:40 PM

ಮಂತ್ರಿಯಾದ್ಮೇಲೆ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡ್ತಿದ್ದಾರೆ. ಪಶು ಸಂಜೀವಿನಿ ಌಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ರೈತರ ಮನೆ ಬಾಗಿಲಿಗೆ ಌಂಬುಲೆನ್ಸ್ ಹೋಗುತ್ತದೆ. ಶೀಘ್ರದಲ್ಲೇ ಪ್ರತಿ ಜಿಲ್ಲೆಗೆ ಒಂದು ಌಂಬುಲೆನ್ಸ್ ಕೊಡುತ್ತೇವೆ. ಕೊವಿಡ್ ಕಾರಣಕ್ಕೆ ಌಂಬುಲೆನ್ಸ್ ನೀಡೋದು ವಿಳಂಬ ಆಗಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. -ಸಚಿವ ಪ್ರಭು ಚೌಹಾಣ್

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಬರುತ್ತೆ ಪಶು ಸಂಜೀವಿನಿ
ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್
Follow us on

ಹಾವೇರಿ: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಪಶು ಸಂಜೀವಿನಿ ಌಂಬುಲೆನ್ಸ್(Pashu Sanjeevani Animal Ambulance) ವ್ಯವಸ್ಥೆ ಯೋಜನೆ ಆರಂಭ ಮಾಡಲಾಗಿದೆ. ಈ ಬಗ್ಗೆ ಹಾವೇರಿಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಮಾಹಿತಿ ನೀಡಿದ್ದಾರೆ.

ಮಂತ್ರಿಯಾದ್ಮೇಲೆ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡ್ತಿದ್ದಾರೆ. ಪಶು ಸಂಜೀವಿನಿ ಌಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ರೈತರ ಮನೆ ಬಾಗಿಲಿಗೆ ಌಂಬುಲೆನ್ಸ್ ಹೋಗುತ್ತದೆ. ಶೀಘ್ರದಲ್ಲೇ ಪ್ರತಿ ಜಿಲ್ಲೆಗೆ ಒಂದು ಌಂಬುಲೆನ್ಸ್ ಕೊಡುತ್ತೇವೆ. ಕೊವಿಡ್ ಕಾರಣಕ್ಕೆ ಌಂಬುಲೆನ್ಸ್ ನೀಡೋದು ವಿಳಂಬ ಆಗಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ.

ಗೋಹತ್ಯೆ ನಿಷೇಧದ ಬಗ್ಗೆ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳನ್ನ ಮಾಡಬೇಕು. ಗೋಮಾತಾ ಕಸಾಯಿ ಖಾನೆಗೆ ಹೋಗೋದು ತಡೆಯಬೇಕು. ಈಗ ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆ. ಕಸಾಯಿ ಖಾನೆ ಬಂದ್ ಆಗಬೇಕು. ಬಕ್ರೀದ್ ಸಮಯದಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿಗಳ ಜೊತೆ ಚರ್ಚೆ ಮಾಡಿ ಆರರಿಂದ ಏಳು ಸಾವಿರ ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಪೊಲೀಸರ ಜೊತೆಗೆ ಗಡಿಗಳಲ್ಲಿ ನಮ್ಮ ವೈದ್ಯರನ್ನ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದೆ. ಮೊದಲು ಸಿಎಂ ಜಿಲ್ಲೆಯಲ್ಲಿ ಗೋಶಾಲೆ ಆರಂಭ ಮಾಡುತ್ತೇವೆ‌. ಪ್ರತಿ ಜಿಲ್ಲೆಗೊಂದು ಗೋಶಾಲೆ ಮಾಡುವುದು ನಮ್ಮ ಅಜೆಂಡಾ. ಜಿಲ್ಲೆಗೆ 50ರಿಂದ 100 ಎಕರೆ ಜಾಗದಲ್ಲಿ ಗೋಶಾಲೆ ಆರಂಭವಾಗುತ್ತೆ.

ದೇಶದ ಇತಿಹಾಸದಲ್ಲಿಯೇ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ ಮಾಡಿದ್ದೇವೆ. ಒಂದೇ ತಿಂಗಳಲ್ಲಿ ಹತ್ತು ಸಾವಿರ ಕರೆಗಳು ಬಂದಿವೆ. ನಮ್ಮ ಸರ್ಕಾರ ಬಂದಮೇಲೆ ಪ್ರವಾಹ, ಕೊವಿಡ್ ಸಂಕಷ್ಟ ಎದುರಿಸಿದೆ. ನಮ್ಮ ಜನಪ್ರಿಯ ಬಸವರಾಜ ಬೊಮ್ಮಾಯಿ ಸಿಎಂ ಆದ್ಮೇಲೆ ಕೊವಿಡ್ ಕಡಿಮೆ ಆಗ್ತಿದೆ. ನಮ್ಮ ಮುಖ್ಯಮಂತ್ರಿಯವರ ಬಾಯಿಗುಣ ಸರಿಯಿದೆ. ನಮ್ಮ ಬಸವರಾಜ ಬೊಮ್ಮಾಯಿ ಅವರು ತುಂಬ ಜಾಣರಿದ್ದಾರೆ, ಅಧ್ಯಯನ ಮಾಡ್ತಾರೆ. ಮುಂದಿನ ದಿನಗಳು ಒಳ್ಳೆಯದು ಬರುತ್ತೆ. ನಮ್ಮ ರಾಜ್ಯ ಕೊರೊನಾ ಮುಕ್ತ ಆಗಬಹುದು. ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಹಾವೇರಿಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ರು.

ಇದನ್ನೂ ಓದಿ: ದೇಶದಲ್ಲಿ ಮೊದಲ ಬಾರಿಗೆ ಪಶು ಸಂಜೀವಿನಿ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ: ಸಚಿವ ಪ್ರಭು ಚೌಹಾಣ್