ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು (Ranebennur) ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಬಿಲ್ಲನ್ನೇರಿ ಗೊರವಪ್ಪ ನಾಗಪ್ಪ ಉರ್ಮಿ ಅವರು (Karnika goravappa nagappa urmi) ಮತ್ತೊಮ್ಮೆ ಕಾರ್ಣಿಕ ನುಡಿದಿದ್ದಾರೆ. ದಸರಾ ಹಬ್ಬದ ಸಮಯದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ (dasara prediction) ವರ್ಷದ ಭವಿಷ್ಯವಾಣಿ ಅಂತಲೆ ನಂಬಲಾಗುವ ನುಡಿಮುತ್ತುಗಳು ಇವಾಗಿವೆ.
ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎನ್ನುತ್ತಾ ಗೊರವಪ್ಪ ನಾಗಪ್ಪ ಉರ್ಮಿ ಅವರು ನುಡಿದ ಭವಿಷ್ಯ ಹೀಗಿದೆ: ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಅವರು ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಅಂತಾ ಕಾರ್ಣಿಕ ವಿಶ್ಲೇಷಿಸಿದ್ದಾರೆ.
ಕೊರೊನಾದಿಂದಾಗಿ ಕಳೆದೆರಡು ವರ್ಷದಿಂದ ಕಳೆಗುಂದಿದ್ದ ದೇವರ ಕಾರ್ಣಿಕೋತ್ಸವ:
ದೇವರಗುಡ್ಡದ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆಯಿದೆ. ಕೊರೊನಾ ಹಾವಳಿಯಿಂದಾಗಿ ಕಳೆದೆರಡು ವರ್ಷಗಳಿಂದ ಜಿಲ್ಲಾಡಳಿತದ ಬಿಗಿನಿಯಮದಿಂದಾಗಿ ಕಾರ್ಣಿಕ ವೀಕ್ಷಿಸಲು ಹೆಚ್ಚು ಜನರು ಸೇರುತ್ತಿರಲಿಲ್ಲ. ಆದರೆ ಈ ಬಾರಿ ಅಪಾರ ಜನಸ್ತೋಮ ಸೇರಿದ್ದರು.
ಕಾರ್ತಿಕ ಮಾಸದಲ್ಲಿ ಕರ್ನಾಟಕಕ್ಕೆ ಕಂಟಕ, ಮುಂದಿನ ಯುಗಾದಿವರೆಗೆ ಹಲವು ಕಾಯಿಲೆಗಳ ತಾಂಡವ: ಕೋಡಿ ಶ್ರೀ ಅಚ್ಚರಿಯ ಭವಿಷ್ಯ
ಧಾರವಾಡ: ಕೋಡಿಮಠದ(Kodi Mutt Seer) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ(Sri Shivananda Shivayogi Rajendra Swamiji) ಅವರು ಸಹ ಇಂದು ಮಂಗಳವಾರ ಭವಿಷ್ಯ ವಾಣಿ ನುಡಿದಿದ್ದಾರೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣವಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಕೋಡಿಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ ವಾಣಿ ನುಡಿದಿದ್ದರು. ಅದನ್ನು ನೆನಪಿಸಿಕೊಂಡ ಸ್ವಾಮೀಜಿ, ಈ ಸಂವತ್ಸರ ಪ್ರಾರಂಭದಲ್ಲಿಯೇ ನಾನು ಭವಿಷ್ಯ ಹೇಳಿದ್ದೆ. ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು-ನೋವು ಆಗುತ್ತೆ ಅಂತಾ ಹೇಳಿದ್ದೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ಕುಸಿಯುತ್ತೆ ಎಂದು ಹೇಳಿದ್ದೆ. ಈಗ ನಾವು ಹೇಳಿದಂತೆಯೇ ಆಗಿದೆ.
ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗೋ ಲಕ್ಷಣವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ. ವಿಷಜಂತುಗಳು ಹೊರಗೆ ಬಂದು ತೊಂದರೆ ಕೊಡುತ್ತವೆ. ಪ್ರಕೃತಿಯಿಂದ ಅಲ್ಲೊಲ ಕಲ್ಲೋಲ ಆಗುತ್ತೆ. ರಾಜ್ಯಕ್ಕೆ ಒಂದು ಅವಘಡ ಆಗಲಿದೆ. ಅದನ್ನು ಕೂಡ ಕಾದು ನೋಡಿ. ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆ ಆಗಲಿದೆ. ಮತಾಂಧತೆ, ಜಾತೀಯತೆ, ಆಕ್ರೋಶ ಹೆಚ್ಚಾಗುತ್ತದೆ ಎನ್ನುವ ಮೂಲಕ ಕಾರ್ತಿಕ ಮಾಸದಲ್ಲಿ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.
Published On - 7:10 pm, Tue, 4 October 22